ನವದೆಹಲಿ [ಆ.22]:  ಸರ್ಕಾರ ರಚನೆಯಲ್ಲಿ ನನ್ನ ಪಾತ್ರ ಇದೆ ಅಂದ ತಕ್ಷಣ ನನಗೆ ಸಚಿವ ಸ್ಥಾನ ಕೊಡಬೇಕು ಅಂತ ಯಾವುದೇ ಕಾನೂನು ಇಲ್ಲ!

ಹೀಗೆಂದವರು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌. ದೆಹಲಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಅರ್ಧವಾಗಿದೆ. ಇನ್ನೂ ಪೂರ್ಣವಾಗಿ ಆಗಬೇಕಿದೆ. ಬಿಜೆಪಿ ಸರ್ಕಾರದಲ್ಲಿ ಯಾವುದೇ ಭಿನ್ನಮತವಿಲ್ಲ. ಬಿ.ಎಸ್‌.ಯಡಿಯೂರಪ್ಪ ಸರ್ಕಾರ ತನ್ನ ಅಧಿಕಾರಾವಧಿ ಪೂರ್ಣಗೊಳಿಸಲಿದೆ ಎಂದರು. 

‘ಅತೃಪ್ತ ಪ್ರೇತಾತ್ಮಕ್ಕೆ ಸಚಿವ ಸ್ಥಾನ ನೀಡಲು ಅರ್ಹರ ಕಡೆಗಣನೆ’

ರಾಜ್ಯ ಸರ್ಕಾರ ರಚನೆಯಲ್ಲಿ ನನ್ನ ಪಾತ್ರ ಇದೆ ಅಂದ ತಕ್ಷಣ ಸಚಿವ ಸ್ಥಾನ ಕೊಡಬೇಕು ಅಂತ ಯಾವುದೇ ಕಾನೂನು ಇಲ್ಲ. ಪಕ್ಷದ ಕಾರ್ಯಕರ್ತನಾಗಿ ನಾನು ಕೆಲಸ ಮಾಡಿಕೊಂಡು ಹೋಗುತ್ತಿದ್ದೇನೆ ಎಂದರು. 

ಇದೇ ವೇಳೆ ಅನರ್ಹ ಶಾಸಕರ ಜತೆಗೆ ದೆಹಲಿಗೆ ಬಂದಿರುವ ವಿಚಾರವಾಗಿ ಈ ವೇಳೆ ಪತ್ರಕರ್ತರು ಪ್ರಶ್ನಿಸಿದಾಗ, ಅವರು ನಮ್ಮ ಸ್ನೇಹಿತರು. ಅವರು ಈಗ ತೊಂದರೆಯಲ್ಲಿದ್ದಾರೆ. ಅವರಿಗೆ ಮಾನಸಿಕ ಬೆಂಬಲ ಕೊಡಲು ನಾನು ಜತೆಗೆ ಬಂದಿದ್ದೇನೆ ಎಂದು ತಿಳಿಸಿದರು.