ಕಲಬುರಗಿ : ರಾಜ್ಯ ಸರ್ಕಾರ ಪತನದ ವಿಚಾರ ಸಾಕಷ್ಟು ಸದ್ದು ಮಾಡುತ್ತಿದ್ದು, ತಾವೂ ಕೂಡ  ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ. 

ಐದು ಬಾರಿ ಶಾಸಕನಾಗಿ, ಸಂಸದನಾಗಿಮ ನೀರಾವರಿ ಸಚಿವನಾಗಿ , ಗೃಹ ಸಚಿವನಾಗಿ ಅನುಭವ ಇದೆ. ಸಿಎಂ ಆಗುವ ಅರ್ಹತೆ ಇಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ. 

ಅಲ್ಲದೇ ಸದ್ಯ ಕೈ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು,  ಕುಮಾರಸ್ವಾಮಿ ಐದು ವರ್ಷ ಆಡಳಿತ ಪೂರ್ಣಗೊಳಿಸಲಿದ್ದಾರೆ. ಮುಂದಿನ ಅವಧಿಯಲ್ಲಿ ಕಾಂಗ್ರೆಸ್ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲಿದ್ದು, ಆಗ ಸಿದ್ದರಾಮಯ್ಯಗೆ ಮೊದಲ ಆದ್ಯತೆ. ಅವರ ನಂತರ ನಾನು ಮುಖ್ಯಮಂತ್ರಿಯಾಗುತ್ತೇನೆ ಎಂದರು.

ಇನ್ನು ರಾಜ್ಯದ ಎರಡು ಕ್ಷೇತ್ರಗಳಾದ ಚಿಂಚೋಳಿ ಹಾಗೂ ಕುಂದಗೊಳದಲ್ಲಿ ಉಪ ಚುನಾವಣೆ ನಡೆಯುತ್ತಿದ್ದು, ಎರಡೂ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಗೆಲುವು ಖಚಿತ ಎಂದರು. 

ಸರ್ಕಾರ ಪತನದ ವಿಚಾರದ ಬಗ್ಗೆಯೂ ಪ್ರತಿಕ್ರಿಯಿಸಿದ ಎಂ.ಬಿ ಪಾಟೀಲ್ ಬಿಜೆಪಿಯವರು ಎಷ್ಟು ಸಲ ಹೇಳಿದರು ಅದು ಸಾಧ್ಯವಿಲ್ಲ. ಯುಗಾದಿ, ದೀಪಾವಳಿ, ಅಮಾವಾಸ್ಯೆ, ಹುಣ್ಣಿಮೆ 20-25 ಡೆಡ್ ಲೈನ್ ಕೊಟ್ಟಿದ್ದಾಯ್ತು. ಕಾಂಗ್ರೆಸಲ್ಲಿ ಯಾವ ಶಾಸಕರೂ ಅಸಮಾಧಾನಗೊಂಡಿಲ್ಲ ಯಡಿಯೂರಪ್ಪ 20 ಜನ ಅಸಮಾಧಾನಗೊಂಡವರ ಲಿಸ್ಟ್ ಕೊಡಲಿ ಎಂದು ಸವಾಲು ಹಾಕಿದರು.