ದೊಡ್ಡಬಳ್ಳಾಪುರ(ಡಿ.17): ತನ್ನ ಗಂಡನ ಜತೆ ಅಕ್ರಮ ಸಂಬಂಧ ಹೊಂದಿದ್ದಾಳೆಂಬ ಅನುಮಾನದ ಮೇಲೆ ನಡು ಬೀದಿಯಲ್ಲೇ ಗೃಹಿಣಿಯೊಬ್ಬಳನ್ನು ಹಿಗ್ಗಾಮುಗ್ಗಾ ಥಳಿಸಿದ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.

ರಿಯಲ್​ ಎಸ್ಟೇಟ್ ಉದ್ಯಮಿ ಮಂಜುನಾಥರೆಡ್ಡಿ ತನ್ನ ಸ್ನೇಹಿತ ಮಹೇಶ್​ ಪತ್ನಿ ಭವ್ಯಾ ಮೇಲೆ ಕಣ್ಣು ಹಾಕಿದ್ದ ಎನ್ನಲಾಗಿದೆ. ಇಬ್ಬರ ನಡುವೆ ಅಕ್ರಮ ಸಂಬಂಧವಿದೆ ಎನ್ನುವ ಮಾತು ಮಂಜುನಾಥರೆಡ್ಡಿ ಪತ್ನಿ ಶೋಭಾ ಕಿವಿಗೆ ಬಿದ್ದಿತ್ತು. ಇವತ್ತು, ಬೆಳ್ಳಂಬೆಳಗ್ಗೆಯೇ ಭವ್ಯಾ ಮನೆಗೆ ಧಾವಿಸಿದ ಶೋಭಾ, ನಡುರಸ್ತೆಯಲ್ಲೇ ಭವ್ಯಾ, ಆಕೆಯ ಪತಿ ಮಹೇಶ್`​​​​ರನ್ನು ಹಿಗ್ಗಾಮುಗ್ಗಾ ಥಳಿಸಿದರು.

ಇಷ್ಟಾದರೂ ಶೋಭಾ ಪತಿ ಮಂಜುನಾಥರೆಡ್ಡಿ  ಮಾತ್ರ ಎಲ್ಲೂ ಕಾಣಿಸಿಕೊಳ್ಳಲಿಲ್ಲ. 14 ವರ್ಷಗಳ ಹಿಂದೆ ಮಂಜುನಾಥರೆಡ್ಡಿ ಮತ್ತು ಶೋಭಾ ಪ್ರೀತಿಸಿ ವಿವಾಹವಾಗಿದ್ದರು. ಆದರೆ, ರೆಡ್ಡಿಗೆ ಹೆಣ್ಣಿನ ಚಪಲ ಜಾಸ್ತಿ ಅಂತೆ. ಈಗಾಗಲೇ ಹಲವು ಮಹಿಳೆಯರ ಜತೆಯೂ ತನ್ನ ಗಂಡ ರೆಡ್ಡಿಗೆ ಸಂಬಂಧಿವಿದೆ ಅಂತ ಶೋಭಾ ಆರೋಪಿಸಿದ್ದಾರೆ.  ಅಷ್ಟೇ ಅಲ್ಲ, ಗಂಡನ ವಿರುದ್ಧ ಶೋಭಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.