3500 ಕೊಟ್ರೆ ಬಾಂಗ್ಲಾದೇಶಿ ಭಾರತೀಯನಾಗ್ತಾನೆ! ರಿಯಾಲಿಟಿ ಚೆಕ್

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 13, Jul 2018, 10:57 AM IST
Illegal Bangladeshi migrants pay Rs 3,500 for entry into India and Aadhar card
Highlights

ಬಾಂಗ್ಲಾ ವಲಸಿಗರು ಭಾರತದೊಳಗೆ ನುಸುಳುವುದು ಹೊಸ ಸುದ್ದಿಯೇನಲ್ಲ. ಕೇವಲ 3500 ರೂ. ಗೆ ಭಾರತದೊಳಗೆ ಬಂದು  ಬೆಂಗಳೂರಿನಂಥ ಮಹಾನಗರದಲ್ಲಿ ವಾಸಮಾಡುವುದಲ್ಲದೇ ಆಧಾರ್ ಕಾರ್ಡ್ ಸಹ ಪಡೆದುಕೊಳ್ಳುತ್ತಾರೆ.

ಬೆಂಗಳೂರು]ಜು.13] ಭಾರತದ ಭದ್ರತೆಗೆ ತೊಡಕಾಗಿರುವ ಭ್ರಷ್ಟಾಚಾರದ ದೇಶದ ಭದ್ರತೆಗೆ ಅಪಾಯ ತಂದೊಡ್ಡುವ ಸ್ಥಿತಿ ನಿರ್ಮಾಣವಾಗಿದೆ. ಗಡಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಗಳಿಗೆ 2 ಸಾವಿರ ರೂ. ನೀಡಿ ಗಡಿಯೊಳಗೆ ಪ್ರವೇಶ ಮಾಡುವ ಬಾಂಗ್ಲಾ ವಲಸಿಗರು ಬೆಂಗಳೂರನ್ನು ತಮಗೆ ಅತ್ಯುತ್ತಮ ತಾಣ ಎಂದೇ ಭಾವಿಸಿಕೊಂಡಿದ್ದಾರೆ.

ಬೆಂಗಳೂರಿನ ಸ್ಥಳೀಯ ನಾಯಕರ ಆಶ್ರಯವೂ ಇವರಿಗೂ ಸಿಗುತ್ತದೆ. ಆರಂಭದಲ್ಲಿ ಕಸ ಸಂಗ್ರಹಣೆ ಮತ್ತು ಗಾರೆ ಕೆಲಸ ಮಾಡುವ ಇವರು ನಂತರ ಇಲ್ಲಿಯೇ ನೆಲೆಸುತ್ತಾರೆ. ಕಾರ್ಪೋರೇಶನ್ ಎಲೆಕ್ಷನ್ ಗೆ ಇವರನ್ನು ಮತದಾರರನ್ನಾಗಿ ಬಳಕೆ ಮಾಡಿಕೊಳ್ಳಲು ಅಕ್ರಮ ಮತದಾರರ ಗುರುತಿನ ಚೀಟಿಯನ್ನು ಮಾಡಿಕೊಳ್ಳಲಾಗುತ್ತದೆ.

ಬೆಂಗಳೂರಿನ ಬನ್ನೇರುಘಟ್ಟ ರಸ್ತೆ, ಜಕ್ಕಸಂದ್ರ, ಕನಕಪುರ ರಸ್ತೆಯ ಸುತ್ತ ಮುತ್ತಲಿನ ಸ್ಲಂ ಗಳಲ್ಲಿ ಬಾಂಗ್ಲಾ ವಲಸಿಗರು  ಸಾಕಷ್ಟು ಜನರಿದ್ದಾರೆ. ಸಾಕಷ್ಟು ದೂರುಗಳನ್ನು ನೀಡಿದರೂ ಒಬ್ಬೆ ಒಬ್ಬ ಬಾಂಗ್ಲಾ ವಲಸಿಗರ ಮೇಲೂ ಕ್ರಮ ತೆಗೆದುಕೊಳ್ಳಲಾಗಿಲ್ಲ. ಸರಕಾರ ಮತ್ತು ಬಿಬಿಎಂಪಿ ಪ್ರಶ್ನೆ ಮಾಡಿದರೆ ಬೆಂಗಳೂರಿನಲ್ಲಿ ಒಬ್ಬೆ ಒಬ್ಬ ಬಾಂಗ್ಲಾ ವಲಸಿಗ ಇಲ್ಲ ಎನ್ನುತ್ತಾರೆ! 

ಈ ವಿಡಿಯೋ ನೋಡಿ ಎಲ್ಲವೂ ಅರ್ಥವಾಗುತ್ತದೆ...! ನಮ್ಮ ಭದ್ರತೆ ಮತ್ತು  ವ್ಯವಸ್ಥೆ ಯಾವ ಪರಿ ಹದಗೆಟ್ಟಿದೆ ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕಾ?

loader