ನವದೆಹಲಿ(ಏ.24): ಕೊರೋನಾ ಸೋಂಕಿತರ ಪತ್ತೆ ಹಚ್ಚಲು ಆಧುನಿಕ ಸಲಕರಣೆಗಳು ಸದ್ಯ ಭಾರತದಲ್ಲಿವೆ. ಆದರೆ ಎಲ್ಲವೂ ಕೂಡ ನಿರ್ದಿಷ್ಟ ಗಂಟೆ ತೆಗೆದುಕೊಳ್ಳುತ್ತದೆ. 130ಕೋಟಿ ಜನಸಂಖ್ಯೆ ಇರುವ ಭಾರತದಲ್ಲಿ ಸೋಂಕಿತರ ಪತ್ತೆ ತ್ವರಿತಗತಿಯಲ್ಲಿ ಸಾಗಿದರೆ ಹರಡುವುದನ್ನು ನಿಲ್ಲಿಸಲು ಸಾಧ್ಯ. ಇದೀಗ ಐಐಟಿ ಉಪನ್ಯಾಸಕರೊಬ್ಬರು ಕೇವಲ ಐದೇ ನಿಮಿಷದಲ್ಲಿ ಕೊರೋನಾ ವೈರಸ್ ಪತ್ತೆ ಹಚ್ಚುವ ಸಾಫ್ಟ್‌ವೇರ್ ಅಭಿವೃದ್ದಿ ಪಡಿಸಿದ್ದಾರೆ.

ಫಲಿಸಲಿಲ್ಲ ಪ್ರಾರ್ಥನೆ, ಕುಟುಂಬ ಸದಸ್ಯರಂತೆ ಕೈಯಾರೆ ಅಂತ್ಯಕ್ರಿಯೆ ಮಾಡಿದ ಗಂಭೀರ್!

ಎಕ್ಸ್ ರೇ ಸ್ಕ್ಯಾನ್ ಮೂಲಕ ಕೇವಲ 5 ನಿಮಿಷದಲ್ಲಿ ಕೋವಿಡ್ 19 ಪತ್ತೆ ಹಚ್ಚಬಹುದು. ನೂತನ ಸಾಫ್ಟ್‌ವೇರ್ ಬಳಸಿ ಎಕ್ಸ್ ರೇ ಸ್ಕ್ಯಾನ್ ಮೂಲಕ ಅತ್ಯಂತ ವೇಗವಾಗಿ ಸೋಂಕಿತರ ಪತ್ತೆ ಸಾಧ್ಯ ಎಂದಿದ್ದಾರೆ. 40 ದಿನಗಳಲ್ಲಿ ಈ ಸಾಫ್ಟ್ ವೇರ್ ಅಭಿವೃದ್ದಿ ಪಡಿಸಿರುವ ಉಪನ್ಯಾಸಕ ಕಮಲಾ ಜೈನ್, ಇದೀಗ ICMR ಬಳಿ ನೂತನ ಸಾಫ್ಟ್ವೇರ್ ಪರಾಮರ್ಶಿಸಲು ಮನವಿ ಮಾಡಿದ್ದಾರೆ.

ಅಂತರ ಕಾಯ್ದುಕೊಳ್ಳಲು ರಿಕ್ಷಾ ಚಾಲಕನ ಐಡಿಯಾ; ಭರ್ಜರಿ ಆಫರ್ ನೀಡಿದ ಆನಂದ್ ಮಹೀಂದ್ರ!.

ಎದೆಯ ಎಕ್ಸ್‌ ರೇ ಸ್ಕ್ಯಾನ್ ಬಳಸಿ ಈ ಸಾಫ್ಟ್‌ವೇರ್ ಅಭಿವೃದ್ದಿ ಪಡಿಸಲಾಗಿದೆ. ಸುಮಾರು 60,000 ಎಕ್ಸ್ ರೇ ಸ್ಕ್ಯಾನ್ ಪರಿಶೀಲಿಸಿದ್ದೇನೆ. ಕೊರೋನಾ ವೈರಸ್ ಸೋಂಕಿತರ ಎಕ್ಸ್ ರೇ ಸ್ಕಾನ್ ಕೂಡ ಪರಿಶೀಲನೆ ನಡೆಸಿದ್ದೇನೆ. ಅಮೆರಿಕದಲ್ಲಿನ ಕೊರೋನಾ ಸೋಂಕಿತರ ಎಕ್ಸ್ ರೇ ಹಾಗೂ ಕೆಲ ವರದಿಗಳನ್ನು ಪರಿಶೀಲಶನೆ ಮಾಡಿ, ಎಲ್ಲಾ ಅಧ್ಯಯನದ ಬಳಿಕ ಕೊರೋನಾ ವೈರಸ್ ಪತ್ತೆ ಹಚ್ಚಲು ಸಾಫ್ಟ್‌ವೇರ್ ಅಭಿವೃದ್ದಿ ಪಡಿಸಿದ್ದೇನೆ ಎಂದು ಐಐಟಿ ಉಪನ್ಯಾಸಕ ಕಮಲಾ ಜೈನ್ ಹೇಳಿದ್ದಾರೆ.