ಫಲಿಸಲಿಲ್ಲ ಪ್ರಾರ್ಥನೆ, ಕುಟುಂಬ ಸದಸ್ಯರಂತೆ ಕೈಯಾರೆ ಅಂತ್ಯಕ್ರಿಯೆ ಮಾಡಿದ ಗಂಭೀರ್!
ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಬಿಜೆಪಿ ಸಂಸದ ಗೌತಮ್ ಗಂಭೀರ್ ಹಲವರಿಗೆ ನೆರವು ನೀಡಿದ್ದಾರೆ. ತಮ್ಮ ಕ್ರಿಕೆಟ್ ಕರಿಯರ್‌ನಲ್ಲೂ ಇದೀಗ ಸಂಸದನಾಗಿಯೂ ನೀಡುತ್ತಿದ್ದಾರೆ. ಹೀಗೆ ಗಂಭೀರ್ ಬಳಿ ನೆರವು ಕೇಳಿ ಬಂದ ಮಹಿಳೆಗೆ ಅಗತ್ಯವಿದ್ದ ಎಲ್ಲಾ ಸಹಾಯವನ್ನು ಗಂಭೀರ್ ಮಾಡಿದ್ದರು. ಆದರೆ ಮಹಿಳೆ ಬದುಕಿ ಉಳಿಯಲಿಲ್ಲ. ಲಾಕ್‌ಡೌನ್ ಕಾರಣ ಮಹಿಳೆ ಅಂತ್ಯಕ್ರಿಯೆಯನ್ನು ಗಂಭೀರ್ ಮಾಡಿದ್ದಾರೆ.
ದೆಹಲಿ(ಏ.24): ಕ್ರಿಕೆಟಿಗ, ಸಂಸದ ಗೌತಮ್ ಗಂಭೀರ್ ಕೆಲ ವಿಚಾರಗಳಲ್ಲಿ ಎಲ್ಲರಿಗಿಂತ ಭಿನ್ನ. ನೇರ ನುಡಿ, ಖಡಕ್ ಮಾತಿನಿಂದಲೇ ಗಂಭೀರ್ ಸುದ್ದಿಯಾಗುತ್ತಾರೆ. ಇದೀಗ ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ನಡುವೆ ಗೌತಮ್ ಗಂಭೀರ್ ಕಾರ್ಯ ನಿಜಕ್ಕೂ ಗ್ರೇಟ್ ಆಗಿದೆ. ಇದಕ್ಕೆ ಡಯಾಬಿಟಿಕ್ ಹಾಗೂ ರಕ್ತದ ಒತ್ತಡದಿಂದ ನಿಧನರಾದ 49 ವರ್ಷದ ಸರಸ್ವತಿ ಪಾತ್ರ.
ಗಂಭೀರ ಸಮಸ್ಯೆ - ಗೃಹಬಂಧನ ಅಥವಾ ಜೈಲು, ನಿಮಗೆ ಯಾವುದೋ ಬೇಕು ಅದು !
ಸರಸ್ವತಿ ಪಾತ್ರ ಮದುವೆಯಾದ ಕೆಲ ವರ್ಷಗಳಲ್ಲೇ ಗಂಡ ಇಲ್ಲ ಸಲ್ಲಾದ ಕಿರುಕುಳ ನೀಡಿ ದೂರವಾದ. ಹೀಗಾಗಿ ತಾಯಿ ಮನೆಯಲ್ಲೇ ಇದ್ದ ಸರಸ್ವತಿ ಜೈಪುರದಲ್ಲಿನ ಮಾನವ ಹಕ್ಕುಗಳ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. 2013ರಲ್ಲಿ ದೆಹಲಿಯಲ್ಲಿ ಸೆಮಿನಾರ್‌ಗೆ ತೆರಳಿದ ವೇಳೆ ಒಡಿಯಾ ಮಹಿಳೆಯ ಪರಿಚಯಾವಾಗಿತ್ತು. ಈ ಮಹಿಳೆ ಗಂಭೀರ್ ಕುಟುಂಬಕ್ಕೆ ಆಪ್ತರಾಗಿದ್ದರು.
ಮಾನವ ಹಕ್ಕುಗಳ ಸಂಸ್ಥೆಯಲ್ಲಿ 2 ತಿಂಗಳು 3 ತಿಂಗಳಿಗೊಮ್ಮೆ ಮೀಟಿಂಗ್, ಸಭೆ ಸೇರಿದಂತೆ ಸಣ್ಣ ಪುಟ್ಟ ಕೆಲಸ. ಇನ್ನು ತಮ್ಮ ಕೈಯಿಂದ ಹಣ ಖರ್ಚು ಮಾಡಿ ಗ್ರಾಮೀಣ ಭಾಗಕ್ಕೆ ತೆರಳಿ ಕೆಲಸ ಮಾಡುವಷ್ಟು ಆರ್ಥಿಕ ಹಾಗೂ ಆರೋಗ್ಯ ಸ್ಥಿತಿ ಸರಸ್ವತಿ ಪಾತ್ರ ಅವರಲ್ಲಿ ಇರಲಿಲ್ಲ. ಹೀಗಾಗಿ ಓಡಿಯಾ ಮಹಿಳಾ ಸಹಾಯದಿಂದ ಗಂಭೀರ್ ದೆಹಲಿ ಮನೆ ಕೆಲಸದವಳಾಗಿ ಸೇರಿಕೊಂಡಿದ್ದರು.
ಖಡಕ್ ಎಚ್ಚರಿಕೆ ನೀಡಿದ್ದ ಗೌತಮ್ ಗಂಭೀರ್‌ನಿಂದ ಮಹತ್ವದ ನಿರ್ಧಾರ!.
ಕಳೆದ 7 ವರ್ಷದಿಂದ ಗಂಭೀರ್ ಮನೆಯಲ್ಲಿ ಕೆಲಸ ಮಾಡುತ್ತಾ, ಮಾನವ ಹಕ್ಕುಗಳ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು. ಆದರೆ ಎಪ್ರಿಲ್ 14 ರಂದು ಸರಸ್ವತಿ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದರು. ತಕ್ಷಣವೇ ಸರಸ್ವತಿ ಅವರನ್ನು ಗಂಭೀರ್ ಶ್ರೀ ಗಂಗಾ ರಾಮ್ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಸರಸ್ವತಿ ಕುಟುಂಬಸ್ಥರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಲಾಕ್‌ಡೌನ್ ಕಾರಣ ಒಡಿಶಾದಲ್ಲಿರುವ ಸರಸ್ವತಿ ಕುಟುಂಬ ದೆಹಲಿಗೆ ತೆರಳಲು ಸಾಧ್ಯಾವಾಗಲಿಲ್ಲ. ಇಷ್ಟೇ ಅಲ್ಲ ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಕುಟುಂಬಕ್ಕೆ ಗಂಭೀರ್ ಭರವಸೆ ನೀಡಿದ್ದರು.
ಚಿಕಿತ್ಸೆ ಫಲಕಾರಿಯಾಗದೆ ಸರಸ್ವತಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇನ್ನು ಲಾಕ್‌ಡೌನ್ ಕಾರಣ ಸರಸ್ವತಿ ಪಾರ್ಥೀವ ಶರೀರವನ್ನು ಒಡಿಶಾಗೆ ಸಾಗಿಸುವುದು ಅಸಾಧ್ಯ. ಹೀಗಾಗಿ ಸರಸ್ವತಿ ಸಹೋದರ ಪ್ರಫುಲ್ಲಾ ಹಾಗೂ ಕುಟುಂಬಕ್ಕೆ ಯಾವ ಆಯ್ಕೆಯೂ ಮುಂದಿರಲಿಲ್ಲ. ಹೀಗಾಗಿ ಗಂಭೀರ್ ಅಂತಿಮ ವಿಧಿ ವಿಧಾನ ಮಾಡುವುದಾಗಿ ಹೇಳಿದ್ದಾರೆ. ಗಂಭೀರ್ ಅಷ್ಟೇ ಗೌರವದಿಂದ ಸರಸ್ವತಿ ಅವರ ಅಂತ್ಯಕ್ರಿಯೆ ಮಾಡಿದ್ದಾರೆ.
ನನ್ನ ಪುತ್ರನನ್ನು ನೋಡಿಕೊಳ್ಳುತ್ತಿದ್ದ ಸರಸ್ವತಿ ನಮ್ಮ ಮನೆಕೆಲಸದವಳಲ್ಲ. ಸರಸ್ವತಿ ನಮ್ಮ ಕುಟುಂಬ ಸದಸ್ಯೆ. ಹೀಗಾಗಿ ಆಕೆಯ ಅಂತ್ಯಕ್ರಿಯೆ ಮಾಡುವುದು ಕೂಡ ನನ್ನ ಕರ್ತವ್ಯ. ಜಾತಿ, ಧರ್ಮ, ಸ್ಥಾನ ಮಾನ ಯಾವುದೇ ದೊಡ್ಡದಲ್ಲ. ಮಾನವೀಯತೆ ಮೌಲ್ಯಗಳೇ ಮುಖ್ಯ ಎಂದು ಗಂಭೀರ್ ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾರೆ.