ಪಶು ಮಾರುಕಟ್ಟೆಯಲ್ಲಿ ಹತ್ಯೆಯ ಉದ್ದೇಶಕ್ಕಾಗಿ ಜಾನುವಾರು ಮಾರಾಟ ನಿಷೇಧದ ವಿರುದ್ಧ ಐಐಟಿ ಮದ್ರಾಸ್‌ನಲ್ಲಿ ಗೋಮಾಂಸ ಉತ್ಸವ ಆಯೋಜಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಶೋಧನಾ ವಿದ್ಯಾರ್ಥಿಯೊಬ್ಬನ ಮೇಲೆ ಮಂಗಳವಾರ ಹಲ್ಲೆ ನಡೆಸಲಾಗಿದೆ.

ಚೆನ್ನೈ(ಮೇ.31): ಪಶು ಮಾರುಕಟ್ಟೆಯಲ್ಲಿ ಹತ್ಯೆಯ ಉದ್ದೇಶಕ್ಕಾಗಿ ಜಾನುವಾರು ಮಾರಾಟ ನಿಷೇಧದ ವಿರುದ್ಧ ಐಐಟಿ ಮದ್ರಾಸ್‌ನಲ್ಲಿ ಗೋಮಾಂಸ ಉತ್ಸವ ಆಯೋಜಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಶೋಧನಾ ವಿದ್ಯಾರ್ಥಿಯೊಬ್ಬನ ಮೇಲೆ ಮಂಗಳವಾರ ಹಲ್ಲೆ ನಡೆಸಲಾಗಿದೆ.

ಅಂಬೇಡ್ಕರ್‌ ಅಧ್ಯಯನ ಕೇಂದ್ರದೊಂದಿಗೆ ಗುರುತಿಸಿಕೊಂಡಿದ್ದ ಆರ್‌. ಸೂರಜ್‌ ಎನ್ನುವವರು ಹಲ್ಲೆಗೊಳಗಾದ ಸಂಶೋಧನಾ ವಿದ್ಯಾರ್ಥಿಯಾಗಿದ್ದಾರೆ. ಘಟನೆಯಲ್ಲಿ ಅವರು ಗಂಭೀರವಾಗಿ ಗಾಯಗೊಂಡಿದ್ದು, ಬಲಗಣ್ಣಿಗೆ ಪೆಟ್ಟುಬಿದ್ದಿದೆ. ಸೂರಜ್‌ ಅವರನ್ನು ಚಿಕಿತ್ಸೆಗಾಗಿ ಖಾಸಗಿ ಕಣ್ಣಿನ ಆಸ್ಪತ್ರೆಯೊಂದಕ್ಕೆ ದಾಖಲಿಸಲಾ ಗಿದೆ. ಐಐಟಿ ಮದ್ರಾಸ್‌ ಕ್ಯಾಂಪಸ್‌ನಲ್ಲಿ ಗೋಮಾಂಸ ಸೇವನೆ ಉತ್ಸವ ಆಯೋಜಿಸಿದ ವಿದ್ಯಾರ್ಥಿಗಳಿಗೆ ಕೆಲ ಸಂಘಟನೆಗಳ ಕಾರ್ಯ ಕರ್ತರು ಜೀವಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಹೀಗಾಗಿ ಕ್ಯಾಂಪಸ್‌ನಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಹತ್ಯೆಯ ಉದ್ದೇಶಕ್ಕಾಗಿ ಜಾನುವಾರುಗಳ ಮಾರಾಟಕ್ಕೆ ನಿರ್ಬಂಧ ಹೇರಿದ ಕೇಂದ್ರ ಸರ್ಕಾರದ ಕ್ರಮವನ್ನು ಪ್ರತಿಭಟಿಸಿ ಐಐಟಿ ಮದ್ರಾಸ್‌ ಕ್ಯಾಂಪಸ್‌ನಲ್ಲಿ ಭಾನುವಾರ ರಾತ್ರಿ ಗೋಮಾಂಸ ಸೇವನೆ ಉತ್ಸವ ಆಯೋಜಿಸಲಾಗಿತ್ತು. ಇದರಲ್ಲಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿಯಾಗಿದ್ದರು.