ಗೋವುಗಳನ್ನು ಕಳ್ಳ ಸಾಗಣೆ ಮಾಡುವವರನ್ನು ಹಾಗೂ ಗೋ ಹತ್ಯೆ ಮಾಡುವವರನ್ನು ಹತ್ಯೆ ಮಾಡುವುದಾಗಿ  ರಾಜಸ್ಥಾನದ ಬಿಜೆಪಿ ಶಾಸಕ ಗ್ಯಾನ್ ದೇವ್ ಅಹುಜಾ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿದೆ

ನವದೆಹಲಿ (ಡಿ.25): ಗೋವುಗಳನ್ನು ಕಳ್ಳ ಸಾಗಣೆ ಮಾಡುವವರನ್ನು ಹಾಗೂ ಗೋ ಹತ್ಯೆ ಮಾಡುವವರನ್ನು ಹತ್ಯೆ ಮಾಡುವುದಾಗಿ ರಾಜಸ್ಥಾನದ ಬಿಜೆಪಿ ಶಾಸಕ ಗ್ಯಾನ್ ದೇವ್ ಅಹುಜಾ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಾಜಸ್ಥಾನ ರಾಮ್'ಗರ್ ಪ್ರದೇಶದಲ್ಲಿ ಗೋ ಕಳ್ಳಸಾಗಣೆ ಆರೋಪದಲ್ಲಿ ಗುಂಪೊಂದನ್ನು ಬಂಧಿಸಲಾಗಿತ್ತು. ಅಲ್ಲದೇ ವ್ಯಕ್ತಿಯೋರ್ವನನ್ನು ಹಿಡಿದು ಥಳಿಸಲಾಗಿತ್ತು. ಇದೇ ವೇಳೆ ಈ ಹೇಳಿಕೆ ನೀಡಿದ್ದಾರೆ.

ಅವರ ಹೇಳಿಕೆ ಇದೀಗ ಭಾರೀ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಈ ಹಿಂದೆಯೂ ಕೂಡ ಅಹುಜಾ ಅನೇಕ ರೀತಿಯಾದ ವಿವಾದಿತ ಹೇಳಿಕೆ ನೀಡಿದ್ದರು. ಇದೀಗ ಮತ್ತೆ ವಿವಾದಿತ ಹೇಳಿಕೆ ನೀಡಿ ಮತ್ತೆ ಸುದ್ದಿಯಾಗಿದ್ದಾರೆ.