ನಮ್ಮ ಸರ್ಕಾರ ಬಂದರೆ ರೇಪಿಸ್ಟ್'ಗಳಿಗೆ ಕಂಡಲ್ಲಿ ಗುಂಡು: ಕಾಲೇಜು ವಿದ್ಯಾರ್ಥಿನಿ ಪ್ರಶ್ನೆಗೆ ಮಾಜಿ ಸಿಎಂ ಭರವಸೆ

First Published 18, Jan 2018, 5:18 PM IST
If We come power shot at sight for rapists
Highlights

‘ಹೆಣ್ಣು ಮಕ್ಕಳು ಧೈರ್ಯದಿಂದ ಬೀದಿಯಲ್ಲಿ ನಡೆದಾಡುವಂತಾಗಲು ಸಮಾಜಘಾತುಕ ಶಕ್ತಿಗಳನ್ನು ಕುಗ್ಗಿಸಬೇಕಿದೆ. ಅದಕ್ಕೆ ಎಲ್ಲ ಕಠಿಣ ಕ್ರಮ ಕೈಗೊಳ್ಳುತ್ತೇನೆ. ರಾಜ್ಯದಲ್ಲಿ ಜನ ಭಯ ಭಕ್ತಿಯಿಂದ ಇರಲು ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ.

ಬೀದರ್(ಜ.18): ಅಧಿಕಾರಕ್ಕೆ ಬಂದಲ್ಲಿ ಅತ್ಯಾಚಾರ ಎಸಗುವ ಸಮಾಜಘಾತುಕ ಶಕ್ತಿಗಳ ವಿರುದ್ಧ ಕಂಡಲ್ಲಿ ಗುಂಡು ಹಾರಿಸುವ ಆದೇಶ ಜಾರಿಗೊಳಿಸಿ ಕಠಿಣ ಕಾನೂನು ಜಾರಿಗೆ ತರುತ್ತೇನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಪ್ರಕಟಿಸಿದ್ದಾರೆ.

ಕರ್ನಾಟಕ ಕಾಲೇಜಿನಲ್ಲಿ ನಡೆದ ಸಂವಾದ ಗೋಷ್ಠಿಯಲ್ಲಿ ವಿದ್ಯಾರ್ಥಿನಿ ಸಜ್ಜಲ್‌ರಾಣಿ ಎಂಬಾಕೆ ಅಪ್ರಾಪ್ತ ಬಾಲಕಿಯರು, ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ, ಆಕ್ರಮಣಗಳ ಕುರಿತಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಜೆಡಿಎಸ್ ಅಧಿಕಾರಕ್ಕೆ ಬಂದರೆ ಅತ್ಯಾಚಾರಿಗಳ ವಿರುದ್ಧ ಕಠಿಣ ಕಾನೂನು ಜಾರಿಗೆ ಬರಲಿದೆ ಎಂದರು. ‘ಹೆಣ್ಣು ಮಕ್ಕಳು ಧೈರ್ಯದಿಂದ ಬೀದಿಯಲ್ಲಿ ನಡೆದಾಡುವಂತಾಗಲು ಸಮಾಜಘಾತುಕ ಶಕ್ತಿಗಳನ್ನು ಕುಗ್ಗಿಸಬೇಕಿದೆ. ಅದಕ್ಕೆ ಎಲ್ಲ ಕಠಿಣ ಕ್ರಮ ಕೈಗೊಳ್ಳುತ್ತೇನೆ. ರಾಜ್ಯದಲ್ಲಿ ಜನ ಭಯ ಭಕ್ತಿಯಿಂದ ಇರಲು ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ.

ಇದಕ್ಕಾಗಿ ಸರ್ಕಾರ ಮುಂದಾಗುವುದು ಅತ್ಯಗತ್ಯ ಎಂಬುವುದು ನನ್ನ ಅಭಿಪ್ರಾಯ. ಅತ್ಯಾಚಾರಿ ಸಮಾಜಘಾತುಕ ಶಕ್ತಿಗಳನ್ನು ಕಂಡಲ್ಲಿ ಗುಂಡು ಹಾರಿಸಿ ಸದೆಬಡಿಯುವ ಕಾನೂನು ಜಾರಿಗೆ ತರುತ್ತೇನೆ’ ಎಂದು ಭರವಸೆ ನೀಡಿದರು.

loader