ಸಚಿವ ವಿನಯ ಕುಲಕರ್ಣಿ ಹೇಳಿಕೆಗೆ ಪ್ರಹ್ಲಾದ ಜೋಶಿ ತಿರುಗೇಟು ನೀಡಿದ್ದಾರೆ.
ಹಾವೇರಿ (ಅ.15): ಸಚಿವ ವಿನಯ ಕುಲಕರ್ಣಿ ಹೇಳಿಕೆಗೆ ಪ್ರಹ್ಲಾದ ಜೋಶಿ ತಿರುಗೇಟು ನೀಡಿದ್ದಾರೆ.
ನಿನ್ನೆ ಜಗದೀಶ್ ಶೆಟ್ಟರ್ ಮತ್ತು ಪ್ರಹ್ಲಾದ್ ಕೆಲಸ ಮಾಡದ ಗೊಡ್ಡೆಮ್ಮೆ ಎಂದು ವಿನಯ್ ಕುಲಕರ್ಣಿ ಹೇಳಿದ್ದರು. ನನಗೂ ಹೊಲಸು ಭಾಷೆ ಮಾತಾಡೋಕೆ ಬರುತ್ತೆ . ಆದರೆ ಅವರಂತೆ ಕೀಳು ಸಂಸ್ಕೃತಿ ನಮ್ಮದಲ್ಲ. ತಾಕತ್ತಿದ್ದರೆ ಸಿಎಂ ಸಿದ್ದರಾಮಯ್ಯ ಮುಂದೆ ನಿಂತು ಮಾತಾಡಲಿ ನೋಡೋಣ. ಅವರ ಬಳಿ ಇವರ ಆಟ ನಡಿಯೊಲ್ಲ ಅದಕ್ಕೆ ದಾರಿ ತಪ್ಪಿಸುವ ಕೆಲಸ ಮಾಡ್ತಾ ಇದ್ದಾರೆ ಎಂದು ಪ್ರಹ್ಲಾದ್ ಜೋಷಿ ಟಾಂಗ್ ನೀಡಿದ್ದಾರೆ.
ಬಾಂಡ್ಲಿಯಲ್ಲಿಯಲ್ಲಿರುವ ಜಿಲೆಬಿ ಇದ್ದ ಹಾಗೆ ಇದಾರೆ. ಚುನಾವಣೆಯಲ್ಲಿ ಯಾರು ಗೊಡ್ಡೆಮ್ಮೆ ಅನ್ನೋದು ತಿಳಿಯುತ್ತೆ ಎಂದು ನೂರು ಕೋಟಿ ವೆಚ್ಚದ ಅಂಡರ್ ಪಾಸ್ ಬ್ರೀಡ್ಜ್ ಭೂಮಿ ಪೂಜೆ ವೇಳೆ ಹಾವೇರಿ ಜಿಲ್ಲೆ ಶಿಗ್ಗಾವಿ ನಗರದಲ್ಲಿ ಲೋಕಸಭಾ ಸದಸ್ಯ ಪ್ರಹ್ಲಾದ್ ಜೋಶಿ ತಿರುಗೇಟು ನೀಡಿದ್ದಾರೆ.
