ಸರ್ಕಾರ ರೂ.177 ಕೋಟಿ ಬಡ್ಡಿಯನ್ನು ಕಟ್ಟಲಿದೆ. ಮಾರ್ಚ್ ಅಂತ್ಯದವರೆಗೂ ಸಾಲ ಮರುಪಾವತಿಗೆ ಅವಕಾಶ ಕಲ್ಪಿಸಲು ಸರ್ಕಾರ ಚಿಂತನೆ ನಡೆಸಿದೆ.  ರೂ.297 ಕೋಟಿ ರೂಪಾಯಿ ಸಾಲ ಪಾವತಿ ಬಾಕಿ ಇದೆ. ಮಾರ್ಚ್ ಅಂತ್ಯದೊಳಗೆ ಅಸಲು ಪಾವತಿಸಿದರೆ ಬಡ್ಡಿ ಮನ್ನಾ ಆಗಲಿದೆ ಎಂದು ಮಹದೇವ್ ಪ್ರಸಾದ್ ಹೇಳಿದ್ದಾರೆ.

ಬೆಂಗಳೂರು (ಅ.18): ಸೆ.30ರೊಳಗೆ ಸುಸ್ತಿ ಸಾಲ ಮರುಪಾವತಿ ಮಾಡಿದವರ ಬಡ್ಡಿ ಮನ್ನಾ ಮಾಡಲು ಹೇಳಿದ್ದು ರೂ.283 ಕೋಟಿ ರೂಪಾಯಿಯನ್ನು 95,235 ರೈತರು ಅಸಲು ಪಾವತಿ ಮಾಡಿದ್ದಾರೆ ಎಂದು ಸಹಕಾರ ಸಚಿವ ಮಹದೇವ ಪ್ರಸಾದ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸರ್ಕಾರ ರೂ.177 ಕೋಟಿ ಬಡ್ಡಿಯನ್ನು ಕಟ್ಟಲಿದೆ. ಮಾರ್ಚ್ ಅಂತ್ಯದವರೆಗೂ ಸಾಲ ಮರುಪಾವತಿಗೆ ಅವಕಾಶ ಕಲ್ಪಿಸಲು ಸರ್ಕಾರ ಚಿಂತನೆ ನಡೆಸಿದೆ. ರೂ.297 ಕೋಟಿ ರೂಪಾಯಿ ಸಾಲ ಪಾವತಿ ಬಾಕಿ ಇದೆ. ಮಾರ್ಚ್ ಅಂತ್ಯದೊಳಗೆ ಅಸಲು ಪಾವತಿಸಿದರೆ ಬಡ್ಡಿ ಮನ್ನಾ ಆಗಲಿದೆ ಎಂದು ಮಹದೇವ್ ಪ್ರಸಾದ್ ಹೇಳಿದ್ದಾರೆ.

ಕಳೆದ ವರ್ಷ ರೂ.10,235 ಕೋಟಿ ಸಾಲ ವಿತರಿಸಲಾಗಿತ್ತು. ಈ ವರ್ಷ 11,600 ಕೋಟಿ ಸಾಲ ನೀಡುವ ಗುರಿ ಹೊಂದಿದ್ದೇವೆ. ಇದುವರೆಗೂ 5400 ಕೋಟಿ ಸಾಲ ವಿತರಣೆ ಮಾಡಲಾಗಿದೆ ಎಂದಿದ್ದಾರೆ.

ಸಹಕಾರ ಸಂಘದಿಂದ ಸಾಲ ಪಡೆಯುವ ರೈತರಿಗೆ ಪ್ರಧಾನ ಮಂತ್ರಿ ಫಸಲ್​ ಭೀಮಾ ಯೋಜನೆ ಕಡ್ಡಾಯಗೊಳಿಸಲಾಗಿದೆ. ಮೂರು ವರ್ಷದಲ್ಲಿ ರೂ.139 ಕೋಟಿ ಕಬ್ಬಿನ ಬಾಕಿ ಪಾವತಿ ಮಾಡಬೇಕಿದೆ. ರೇಣುಕಾ ಸಕ್ಕರೆ ಕಾರ್ಖಾನೆ 2013-14 ರ 70 ಕೋಟಿ ರೈತರ ಹಣ ಬಾಕಿ ಕೊಡಬೇಕಿದೆ ಎಂದಿದ್ದಾರೆ.

ಈ ಬಾರಿ 4.5 ಲಕ್ಷ ಹೆಕ್ಟೇರ್ ನಲ್ಲಿ ಕಬ್ಬು ಬೆಳೆಯಲಾಗುತ್ತಿದೆ. ಕಬ್ಬಿನ ಉತ್ಪಾದನೆ ರೂ.315 ಲಕ್ಷ ಮೆಟ್ರಿಕ್ ಟನ್ ಕಬ್ಬು ಉತ್ಪಾದನೆ ಗುರಿ ಇದೆ. ಈ ಬಾರಿ ಸಕ್ಕರೆ ಬೆಲೆ ಹೆಚ್ಚಾಗಿರೋದ್ರಿಂದ ಕಾರ್ಖಾನೆಯವರು ಪೈಪೊಟಿ ಮೇಲೆ ಕಬ್ಬು ಖರೀದಿ ಮಾಡುತ್ತಿದ್ದಾರೆ. ಬೆಲ್ಲಕ್ಕೂ ಬೇಡಿಕೆ ಹೆಚ್ಚಾಗಿರೋದ್ರಿಂದ ಕಬ್ಬಿಗೆ ಬೇಡಿಕೆ ಹೆಚ್ಚಾಗಿದೆ. ಈ ವರ್ಷ ರೈತರಿಗೆ ಸಮಸ್ಯೆಯಾಗುವುದಿಲ್ಲ ಎಂದು ಮಹದೇವ್ ಪ್ರಸಾದ್ ಭರವಸೆ ನೀಡಿದ್ದಾರೆ.