1 ಪೈಸೆ ಇಳಿಕೆ: ಮೋದಿಯವರದು ತಮಾಷೆ ಹಾಗೂ ಮಕ್ಕಳಾಟ

If one paisa cut in fuel prices Prime Minister Narendra Modis  prank it is in poor taste: Rahul Gandhi
Highlights

 ಪ್ರಿಯ ಪ್ರಧಾನಿಯವರೆ ನೀವು  ಪೆಟ್ರೋಲ್‌ ಮತ್ತು ಡೀಸೆಲ್‌ ದರವನ್ನು 1 ಪೈಸೆಯಷ್ಟು ಕಡಿಮೆ ಮಾಡಿದ್ದೀರಾ.. ಒಂದು ಪೈಸೆ ! ಇದು ನಿಮ್ಮ ಬಾಲಿಶ ಆಲೋಚನೆ ಎಂದಾದರೆ , ಇದು ಕೇವಲ ಕಳಪೆ ಅಭಿರುಚಿಯ ಮಕ್ಕಳಾಟ.  ಕಳೆದ ವಾರ ನಾನು ನಿಮಗೆ ಹಾಕಿದ್ದ ಇಂಧನ ಸಮಾಲಿಗೆ ಒಂದು ಪೈಸೆ ಕಡಿತ ಸಮರ್ಪಕ ಉತ್ತರವಲ್ಲ'

ನವದೆಹಲಿ(ಮೇ.30): ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ತೈಲ ಬೆಲೆಗಳನ್ನು 1 ಪೈಸೆ ಕಡಿಮೆ ಮಾಡಿದ್ದಕ್ಕೆ  ಪ್ರಧಾನಿ ನರೇಂದ್ರ ಮೋಧಿಯ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಟ್ವೀಟ್ ಮಾಡಿರುವ ಅವರು, ಪ್ರಿಯ ಪ್ರಧಾನಿಯವರೆ ನೀವು  ಪೆಟ್ರೋಲ್‌ ಮತ್ತು ಡೀಸೆಲ್‌ ದರವನ್ನು 1 ಪೈಸೆಯಷ್ಟು ಕಡಿಮೆ ಮಾಡಿದ್ದೀರಾ.. ಒಂದು ಪೈಸೆ ! ಇದು ನಿಮ್ಮ ಬಾಲಿಶ ಆಲೋಚನೆ ಎಂದಾದರೆ , ಇದು ಕೇವಲ ಕಳಪೆ ಅಭಿರುಚಿಯ ಮಕ್ಕಳಾಟ.  ಕಳೆದ ವಾರ ನಾನು ನಿಮಗೆ ಹಾಕಿದ್ದ ಇಂಧನ ಸಮಾಲಿಗೆ ಒಂದು ಪೈಸೆ ಕಡಿತ ಸಮರ್ಪಕ ಉತ್ತರವಲ್ಲ'' ಎಂದು ಟ್ವೀಟ್‌ ಮಾಡಿದ್ದಾರೆ.
ದೇಶದ ಅತೀ ದೊಡ್ಡ ಸಗಟು ಇಂಧನ ಸಂಸ್ಥೆ ಇಂಡಿಯನ್ ಆಯಿಲ್ ಕಾರ್ಪೋರೇಷನ್ 1 ಪೈಸೆ ಮಾತ್ರ ಕಡತಗೊಳಿಸಿತ್ತು. ಪೆಟ್ರೋಲ್ ಬೆಲೆ ಒಂದು ಲೀಟರ್'ಗೆ  77 ರೂ. ಇದ್ದರೆ ಡಿಸೇಲ್ 69 ರೂ ಇದೆ. ಕೇರಳ ರಾಜ್ಯ ಮಾತ್ರ  ಹೆಚ್ಚುವರಿ ತೆರಿಗೆಯನ್ನು ಕಡಿಮೆಗೊಳಿಸಿ 1 ರೂ. ಕಡಿತಗೊಳಿಸಿದೆ.

 

loader