ಜಗತ್ತಿನ ಎಲ್ಲಾ ರಾಷ್ಟ್ರಗಳನ್ನು ತನ್ನ ಹಿಡಿತದಲ್ಲಿ ಇರಿಸಿಕೊಳ್ಳುವ ಮಹತ್ವಾಕಾಂಕ್ಷೆ ಹೊಂದಿರುವ ಚೀನಾ, ತಂತ್ರಗಾರಿಕೆಯಿಂದ ತನ್ನ ಹಿತಾಸಕ್ತಿ ಸಾಧಿಸಲು ಹೊರಟಿದೆ.  ಡೋಕ್ಲಾಮ್ ಬಿಕ್ಕಟ್ಟು ಕೂಡ ಚೀನಾ ಹಿತಾಸಕ್ತಿಯ ಒಂದು ಭಾಗ ಅಷ್ಟೇ. ಒಂದು ವೇಳೆ ಭಾರತ-ಚೀನಾ ನಡುವೆ ಯುದ್ಧವಾದರೆ ಎರಡೂ ದೇಶಗಳ ಹೂಡಿಕೆ ಮತ್ತು ವ್ಯಾಪಾರಕ್ಕೆ ಭಾರೀ ಹೊಡೆತ ಬೀಳಲಿದೆ ಎಂದು ಸ್ಯಾನ್ ಫ್ರಾನ್ಸಿಸ್ಕೊದ ಭಾರತದ ಮಾಜಿ ಕಾನ್ಸಲ್ ಜನರಲ್ ಎನ್. ಪಾರ್ಥಸಾರಥಿ ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರು(ಆ.14): ಜಗತ್ತಿನ ಎಲ್ಲಾ ರಾಷ್ಟ್ರಗಳನ್ನು ತನ್ನ ಹಿಡಿತದಲ್ಲಿ ಇರಿಸಿಕೊಳ್ಳುವ ಮಹತ್ವಾಕಾಂಕ್ಷೆ ಹೊಂದಿರುವ ಚೀನಾ, ತಂತ್ರಗಾರಿಕೆಯಿಂದ ತನ್ನ ಹಿತಾಸಕ್ತಿ ಸಾಧಿಸಲು ಹೊರಟಿದೆ. ಡೋಕ್ಲಾಮ್ ಬಿಕ್ಕಟ್ಟು ಕೂಡ ಚೀನಾ ಹಿತಾಸಕ್ತಿಯ ಒಂದು ಭಾಗ ಅಷ್ಟೇ. ಒಂದು ವೇಳೆ ಭಾರತ-ಚೀನಾ ನಡುವೆ ಯುದ್ಧವಾದರೆ ಎರಡೂ ದೇಶಗಳ ಹೂಡಿಕೆ ಮತ್ತು ವ್ಯಾಪಾರಕ್ಕೆ ಭಾರೀ ಹೊಡೆತ ಬೀಳಲಿದೆ ಎಂದು ಸ್ಯಾನ್ ಫ್ರಾನ್ಸಿಸ್ಕೊದ ಭಾರತದ ಮಾಜಿ ಕಾನ್ಸಲ್ ಜನರಲ್ ಎನ್. ಪಾರ್ಥಸಾರಥಿ ಅಭಿಪ್ರಾಯಪಟ್ಟಿದ್ದಾರೆ.

ಫೋರಂ ಫಾರ್ ಇಂಟೆಗ್ರೇಟೆಡ್ ನ್ಯಾಷನಲ್ ಸೆಕ್ಯುರಿಟಿ (ಎಫ್'ಐಎನ್‌ಎಸ್) ಕರ್ನಾಟಕ ಚಾಪ್ಟರ್ ಮಿಥಿಕ್ ಸೊಸೈಟಿಯಲ್ಲಿ ಹಮ್ಮಿಕೊಂಡಿದ್ದ ‘ಡೋಕ್ಲಾಮ್ ಪ್ರದೇಶದ ಮೇಲೆ ಇಂಡೋ-ಚೀನಾ ನಿಲುವು- ತಂತ್ರಗಾರಿಕೆಯ ದೃಷ್ಠಿಕೊನಗಳು’ ಕುರಿತ ವಿಚಾರ ಕಮ್ಮಟದಲ್ಲಿ ‘ಆರ್ಥಿಕ ದೃಷ್ಟಿಕೋನದ ತಂತ್ರಗಾರಿಕೆ’ ಕುರಿತು ಅವರು ಮಾತನಾಡಿದರು. ಡೋಕ್ಲಾಮ್ ಪ್ರದೇಶ ವಶಕ್ಕೆ ಪಡೆದರೆ ಭಾರತ, ‘ೂತಾನ್ ಸೇರಿದಂತೆ ಇತರ ನೆರೆಯ ರಾಷ್ಟ್ರಗಳ ಮೇಲೆ ಹಿಡಿತ ಸಾಧಿಸುವುದು ಸುಲಭ ಎಂಬ ಲೆಕ್ಕಾಚಾರ ಹೊಂದಿದೆ. ಈ ವಿವಾದಿತ ಪ್ರದೇಶ ಭಾರತದ ಈಶಾನ್ಯ ರಾಜ್ಯದ ಸೂಕ್ಷ್ಮ ಪ್ರದೇಶಗಳಿಗೆ ತೀರ ಸಮೀಪದಲ್ಲಿದೆ. ಇದನ್ನು ಅರಿತಿರುವ ಚೀನಾ ರಸ್ತೆ ನೆಪದಲ್ಲಿ ಹಿತಾಸಕ್ತಿ ಸಾಧನೆಗೆ ತಂತ್ರ ಹೆಣೆದಿದೆ.

ಡೋಕ್ಲಾಮ್ ಬಿಕ್ಕಟ್ಟಿನಿಂದ ಯುದ್ಧವಾದರೆ ಎರಡೂ ದೇಶಗಳ ಹೂಡಿಕೆ ಮತ್ತು ವ್ಯಾಪಾರಕ್ಕೆ ಭಾರಿ ಹೊಡೆತ ಬೀಳಲಿದೆ. ಸದ್ಯದ ಪರಿಸ್ಥಿತಿಯಲ್ಲಿ ರಣೋತ್ಸಾಹದಲ್ಲಿರುವ ಚೀನಾ ಮತ್ತು ಭಾರತ ಮಾತು ಕತೆ ಮೂಲಕ ಬಿಕ್ಕಟ್ಟು ಪರಿಹರಿಸಿಕೊಳ್ಳುವುದು ಉತ್ತಮ ಎಂದು ಹೇಳಿದರು.

‘ಇಂಡಿಯಾ ಟುಡೇ’ ಮ್ಯಾಗಜಿನ್ ಕಾರ್ಯಕಾರಿ ಸಂಪಾದಕ ಸಂದೀಪ್ ಉನ್ನೀತನ್, ನಿವೃತ್ತ ಲೆಫ್ಟಿನೆಂಟ್ ಜನರಲ್ ವಿ.ಎಂ. ಪಾಟೀಲ್ ಮಾತನಾಡಿದರು. ಎ್‌ಐಎನ್‌ಎಸ್ ಅಧ್ಯಕ್ಷ ವಿಜಯ್ ಗೊರೆ, ಸದಸ್ಯ ವಸಂತ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.