ಬಿಜೆಪಿ ಒಪ್ಪಿದರೆ ಪಿಎಫ್’ಐ, ಎಸ್’ಡಿಪಿಐ, ಆರೆಸ್ಸೆಸ್ ನಿಷೇಧ

First Published 8, Feb 2018, 10:45 AM IST
If BJP Agree Ban SDPI and PFI Says Ramalinga Reddy
Highlights

ಬಿಜೆಪಿಯವರು ಒಪ್ಪಿಕೊಂಡರೆ ರಾಜ್ಯದಲ್ಲಿ ಪಿಎಫ್‌ಐ, ಎಸ್‌ಡಿಪಿಐ ಹಾಗೂ ಸಂಘ ಪರಿವಾರದ ಸಂಘಟನೆಗಳನ್ನು ನಿಷೇಧಿಸಲು ಶಿಫಾರಸು ಮಾಡಲು ನಾನು ಸಿದ್ಧ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಬೆಂಗಳೂರು : ಬಿಜೆಪಿಯವರು ಒಪ್ಪಿಕೊಂಡರೆ ರಾಜ್ಯದಲ್ಲಿ ಪಿಎಫ್‌ಐ, ಎಸ್‌ಡಿಪಿಐ ಹಾಗೂ ಸಂಘ ಪರಿವಾರದ ಸಂಘಟನೆಗಳನ್ನು ನಿಷೇಧಿಸಲು ಶಿಫಾರಸು ಮಾಡಲು ನಾನು ಸಿದ್ಧ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ರಾಜ್ಯದಲ್ಲಿ ಕೇವಲ ಸಂಘ ಪರಿವಾರದವರು ಅಥವಾ ಹಿಂದುಗಳ ಕೊಲೆ ಮಾತ್ರ ಆಗಿಲ್ಲ, ಮುಸ್ಲಿಮರ ಕೊಲೆಯೂ ಆಗಿದೆ. ಎರಡೂ ಕೈ ತಟ್ಟಿದರೆ ಮಾತ್ರ ಚಪ್ಪಾಳೆ ಆಗುತ್ತದೆ. ಕ್ರಿಯೆಗೆ ಪ್ರತಿಕ್ರಿಯೆ ಇದ್ದೇ ಇರುತ್ತದೆ.

ಪಿಎಫ್‌ಐ ಮತ್ತಿತರ ಸಂಘಟನೆಗಳು ಕೊಲೆ ಮಾಡಿವೆ ಎಂದು ಹೇಳುವ ನೀವು (ಬಿಜೆಪಿ) ಮುಸ್ಲಿಮರನ್ನು ಕೊಲೆ ಮಾಡಿರುವ ಸಂಘಟನೆಗಳ ಬಗ್ಗೆಯೂ ಹೇಳಬೇಕು. ಕಾಂಗ್ರೆಸ್ ಯಾರ ಪರವಾಗಿಯೂ ಇಲ್ಲ, ಯಾರೇ ತಪ್ಪು ಮಾಡಿದರೂ ಅದು ತಪ್ಪು, ಯಾರನ್ನೂ ಸಮರ್ಥಿಸಿಕೊಳ್ಳುವುದಿಲ್ಲ ಎಂದರು.

 

loader