ಕರ್ನಾಟಕಕ್ಕೆ ಪ್ರತ್ಯೇಕ ನಾಡಧ್ವಜ ಹೊಂದುವುದು ದೇಶದ ಘನತೆ, ಸಮಗ್ರತೆ ಹಾಗೂ ಸಾರ್ವಭೌಮತೆಗೆ ಅಪಾಯಕಾರಿ ಎಂದು ಬಿಜೆಪಿ ನಾಯಕ ಹಾಗೂ ಕೇಂದ್ರ ಸಚಿವ ಅನಂತ್ ಕುಮಾರ್ ಹೇಳಿದ್ದಾರೆ.‘ದಿ ಪ್ರಿಂಟ್’ಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಅನಂತ್ ಕುಮಾರ್, ‘ಭಾರತೀಯರು ಭಾವನಾತ್ಮಕವಾಗಿ, ಸಾಂವಿಧಾನಿಕವಾಗಿ ಹಾಗೂ ಎಲ್ಲಾ ರೀತಿಯಲ್ಲೂ ಒಂದೇ ದೇಶವಾಗಿದ್ದೇವೆ. ದೇಶಕ್ಕೊಂದೇ ತ್ರಿವರ್ಣ ಧ್ವಜ, ಅದು ಪವಿತ್ರವಾದುದ್ದು. ಸಿದ್ದರಾಮಯ್ಯ ಸರ್ಕಾರ ಈ ವಿಚಾರದಲ್ಲಿ ಕೈಯಾಡಿಸಬಾರದು. ಅದು ದೇಶದ ಘನತೆ, ಸಮಗ್ರತೆ ಹಾಗೂ ಸಾರ್ವಭೌಮತೆಗೆ ಅಪಾಯಕಾರಿಯಾಗಿದೆ’ ಎಂದಿದ್ದಾರೆ.

ಬೆಂಗಳೂರು: ಕರ್ನಾಟಕಕ್ಕೆ ಪ್ರತ್ಯೇಕ ನಾಡಧ್ವಜ ಹೊಂದುವುದು ದೇಶದ ಘನತೆ, ಸಮಗ್ರತೆ ಹಾಗೂ ಸಾರ್ವಭೌಮತೆಗೆ ಅಪಾಯಕಾರಿ ಎಂದು ಬಿಜೆಪಿ ನಾಯಕ ಹಾಗೂ ಕೇಂದ್ರ ಸಚಿವ ಅನಂತ್ ಕುಮಾರ್ ಹೇಳಿದ್ದಾರೆ.

‘ದಿ ಪ್ರಿಂಟ್’ಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಅನಂತ್ ಕುಮಾರ್, ‘ಭಾರತೀಯರು ಭಾವನಾತ್ಮಕವಾಗಿ, ಸಾಂವಿಧಾನಿಕವಾಗಿ ಹಾಗೂ ಎಲ್ಲಾ ರೀತಿಯಲ್ಲೂ ಒಂದೇ ದೇಶವಾಗಿದ್ದೇವೆ. ದೇಶಕ್ಕೊಂದೇ ತ್ರಿವರ್ಣ ಧ್ವಜ, ಅದು ಪವಿತ್ರವಾದುದ್ದು. ಸಿದ್ದರಾಮಯ್ಯ ಸರ್ಕಾರ ಈ ವಿಚಾರದಲ್ಲಿ ಕೈಯಾಡಿಸಬಾರದು. ಅದು ದೇಶದ ಘನತೆ, ಸಮಗ್ರತೆ ಹಾಗೂ ಸಾರ್ವಭೌಮತೆಗೆ ಅಪಾಯಕಾರಿಯಾಗಿದೆ’ ಎಂದಿದ್ದಾರೆ.

ತ್ರಿವರ್ಣ ಧ್ವಜವು 125 ಕೋಟಿ ಭಾರತೀಯರಿಗೆ ಸ್ಫೂರ್ತಿಯಾಗಿದೆ, ಸಿದ್ದರಾಮಯ್ಯ ರಿಗೆ ಇದೆಲ್ಲಾ ಅರ್ಥ ಆಗಿಲ್ಲವೆಂದಾದಲ್ಲಿ, ಅವರು ದೇಶದ ಏಕತೆ, ಸಮಗ್ರತೆ ಹಾಗೂ ಸಾರ್ವಭೌಮತೆ ಬಗ್ಗೆ ಅ ಆ ಇ ಈಯನ್ನು ಕಲಿಯುವ ಅಗತ್ಯವಿದೆ, ಎಂದು ಅನಂತ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಹಿಂದಿ ಹೇರಿಕೆ ಬಗ್ಗೆ ಮಾತನಾಡಿರುವ ಅನಂತ್ ಕುಮಾರ್, ತ್ರಿ-ಭಾಷಾ ಸೂತ್ರವು ಸಂವಿಧಾನದ ಪಿತಾಮಹರು ರೂಪಿಸಿದ ಯೋಜನೆಯಾಗಿದೆ. ಅದನ್ನು ಮಾತು ಹಾಗೂ ಕೃತಿಯಲ್ಲಿ ಪಾಲಿಸಬೇಕಾಗಿದೆ. ಆದುದರಿಂದ ನಮ್ಮ ಮುಂದೆ ಮಾತೃಭಾಷೆ, ರಾಷ್ಟ್ರೀಯ ಭಾಷೆ ಹಾಗೂ ಅಂತರಾಷ್ಟ್ರೀಯ ಭಾಷೆಗಳಿವೆ. ಹಿಂದಿ ರಾಷ್ಟ್ರೀಯ ಭಾಷೆಯೋ ಅಲ್ಲವೋ ಎಂಬ ನಿರರ್ಥಕ ಚರ್ಚೆಯನ್ನು ಬಿಟ್ಟು, ಕನ್ನಡಕ್ಕೆ ಮೊದಲ ಪ್ರಾಶಸ್ತ್ಯ ನೀಡುತ್ತಾ ತ್ರಿಭಾಷಾ ಸೂತ್ರವನ್ನು ಪಾಲಿಸಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.