ಕೋಲಾರ ಮೂಲದ ನಂದಿನಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಫಸ್ಟ್ರ್ಯಾಂಕ್ ಫಲಿತಾಂಶದ ಹಿನ್ನಲೆ ಅವರ ಪೋಷಕರು ವಾಸ ಇರುವ ಕೋಲಾರ ನಗರದ ಮುನೇಶ್ವರ ಬಡಾವಣೆಗೆ ಕಾಯಕಲ್ಪ ಸಿಕ್ಕಿದೆ.
ಕೋಲಾರ(ಜೂ.10): ಕೋಲಾರ ಮೂಲದ ನಂದಿನಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಫಸ್ಟ್ರ್ಯಾಂಕ್ ಫಲಿತಾಂಶದ ಹಿನ್ನಲೆ ಅವರ ಪೋಷಕರು ವಾಸ ಇರುವ ಕೋಲಾರ ನಗರದ ಮುನೇಶ್ವರ ಬಡಾವಣೆಗೆ ಕಾಯಕಲ್ಪ ಸಿಕ್ಕಿದೆ.
ಹೌದು ದೇಶಕ್ಕೆ ಟಾಪರ್ ಆಗುವ ಮೂಲಕ ಎಲ್ಲರ ಗಮನ ಸೆಳೆದಿದ್ದ ನಂದಿನಿ ಪೋಷಕರು ವಾಸವಿರುವ ಮನೆಯ ಸುತ್ತ ಮುತ್ತ ರಾತ್ರೋರಾತ್ರಿ ಬದಲಾವಣೆಗೊಂಡಿದೆ. ಮೂಲಭೂತ ಸೌಲಭ್ಯಗಳಿಲ್ಲದೆ ಸೊರಗಿದ್ದ ಮುನೇಶ್ವರ ನಗರಕ್ಕೆ ಈಗ ಕಾಂಕ್ರೀಟ್ ರಸ್ತೆ, ಚರಂಡಿ, ನೀರಿನ ವ್ಯವಸ್ಥೆ ಸೇರಿದಂತೆ ಬೀದಿ ದೀಪ ವ್ಯವಸ್ಥೆಯನ್ನು ಮಾಡುವ ಮೂಲಕ ನಗರಸಭೆ ಸಾಕಷ್ಟು ಬದಲಾವಣೆಗಳನ್ನು ಮಾಡಿದೆ.
ಈ ಹಿಂದೆ ಬಡವಾಣೆ ಜನರು ಸಾಕಷ್ಟು ಬಾರಿ ಮನವಿ ಮಾಡಿದರೂ ಕ್ಯಾರೆ ಅನ್ನದ ಅಧಿಕಾರಿಗಳು ಈಗ ನಂದಿನಿ ಅವರಿಂದಾಗಿ ಬದಲಾವಣೆ ಆಗುತ್ತಿದೆ, ಉಳಿದ ರಸ್ತೆಗಳನ್ನು ಹಾಗೇ ಪೂರ್ಣಗೊಳಿಸಬೇಕೆಂದು ಸ್ಥಳೀಯರ ಮಾತು.
