ಐಎಎಸ್ ಟಾಪರ್ ಟಿನಾರಿಂದ ಮೋದಿ ಪ್ರಶಂಸೆ: ಏನೆಲ್ಲಾ ಪ್ರತಿಕ್ರಿಯೆ ಸಿಕ್ತು?

IAS topper Tina Dabi praises PM Narendra Modi
Highlights

ಪ್ರಧಾನಿ ನರೇಂದ್ರ ಮೋದಿ ಪ್ರಶಂಸಿದ ಐಎಎಸ್ ಟಾಪರ್

ಮೋದಿ ಜೊತೆಗಿನ ಸಂವಾದದ ಫೋಟೋ ಶೇರ್

ಮೋದಿ ಮಾತು ಸ್ಪೂರ್ತಿದಾಯಕ ಎಂದ ಟಿನಾ

ನವದೆಹಲಿ(ಜು.5): 2015ನೇ ಸಾಲಿನ ಲೋಕಸೇವಾ ಪರೀಕ್ಷೆಯ ಟಾಪರ್ ಟೀನಾ ಡಾಬಿ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಕಳೆದ ಬಾರಿ ಪ್ರಧಾನಿ ನರೇಂದ್ರ ಮೋದಿ, ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಮೀಸಲಾತಿ ಕುರಿತು ಟಿನಾ ಡಾಬಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ ಎನ್ನಲಾದ ಪೋಸ್ಟ್‌ನಿಂದ ಅವರು ಸುದ್ದಿಯಲ್ಲಿದ್ದರು.

ಆದರೆ ಟಿನಾ ಡಾಬಿ ಹೆಸರಲ್ಲಿ ಯಾರೋ ಫೇಕ್ ಅಕೌಂಟ್ ತೆರೆದು ಈ ಪೋಸ್ಟ್ ಮಾಡಿರುವುದು ಸಾಬೀತಾಗಿತ್ತು. ಅಲ್ಲದೇ ಟಿನಾ ಡಾಬಿ ಈ ಕುರಿತು ಸ್ಪಷ್ಟನೆ ಕೂಡ ನೀಡಿದ್ದರು. ಫೆಕ್ ಕೌಂಟ್ ಮೂಲಕ ಟಿನಾ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿರುವ ಕುರಿತು ಪೋಸ್ಟ್ ಮಾಡಲಾಗಿತ್ತು. ಆದರೆ ಇದು ತಮ್ಮ ಫೇಸ್‌ಬುಕ್ ಅಕೌಂಟ್ ಅಲ್ಲ ಎಂದು ಟಿನಾ ಸ್ಪಷ್ಟಪಡಿಸಿದ್ದರು.

ಆದರೆ ಈ ಬಾರಿ ಟಿನಾ ನಿಜವಾಗಿಯೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ್ದಾರೆ. ಅಲ್ಲದೇ ಈ ಕುರಿತು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂ ನಲ್ಲಿ ಫೋಟೋ ಕೂಡ ಅಪ್ಲೋಡ್ ಮಾಡಿದ್ದಾರೆ.

ಇನ್‌ಸ್ಟಾಗ್ರಾಂ ನಲ್ಲಿ ಟಿನಾ ಪ್ರಧಾನಿ ನರೇಂದ್ರ ಮೋದಿ ಜೊತೆಗಿನ ಫೋಟೋ ಶೇರ್ ಮಾಡಿದ್ದಾರೆ. ನಿನ್ನೆ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಐಎಎಸ್ ಪ್ರೋಬೇಶನರಿಗಳ ಜೊತೆ ಚರ್ಚೆ ನಡೆಸಿದ್ದರು. ಟಿನಾ ಡಾಬಿ ಬ್ಯಾಚ್‌ನ ಐಎಎಸ್ ಅಭ್ಯರ್ಥಿಗಳೊಂದಿಗೆ ಮೋದಿ ಸಂವಾದ ನಡೆಸಿದ್ದರು.

ಈ ಫೋಟೋವನ್ನು ಶೇರ್ ಮಾಡಿದ್ದ ಟಿನಾ, ಪ್ರಧಾನಿ ಅವರ ಮಾತುಗಳು ನಿಜಕ್ಕೂ ಸ್ಪೂರ್ತಿದಾಯಕವಾಗಿದ್ದವು ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಸದೃಢ ದೇಶ ನಿರ್ಮಾಣಕ್ಕೆ ನಾಗರಿಕ ಸೇವಾ ಅಧಿಕಾರಿಗಳು ಯಾವ ರೀತಿಯಾಗಿ ಕೆಲಸ ಮಾಡಬೇಕು ಎಂದು ಪ್ರಧಾನಿ ಮೋದಿ ಸಲಹೆ ನೀಡಿದರು ಎಂದು ಟಿನಾ ತಿಳಿಸಿದ್ದಾರೆ.

ಆದರೆ ಟಿನಾ ಅವರ ಈ ಪೋಸ್ಟ್ ಗೆ ಸಾಕಷ್ಟು ಕಮೆಂಟ್‌ಗಳು ಬಂದಿದ್ದು, ಲವ್ ಜಿಹಾದ್ ಕುರಿತು ಮೋದಿ ನಿಮಗೇನೂ ಸಲಹೆ ನೀಡಲಿಲ್ಲವೇ ಎಂದು ಕೆಲವರು ಪ್ರಶ್ನಿಸಿದ್ದಾರೆ. ಇನ್ನೂ ಕೆಲವರು ಅವರು ಹೇಳಿದಂತೆ ಕೆಲಸ ಮಾಡಬೇಡಿ ಎಂದು ಬಿಟ್ಟಿ ಸಲಹೆ ಕೂಡ ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ- ಐಎಎಸ್ ಪ್ರಥಮ ರ್ಯಾಂಕ್ ಟೀನಾ ಪತಿಯೊಂದಿಗೆ ಲುಂಗಿ ಡ್ಯಾನ್ಸ್

loader