'ನಾನು 19 ವರ್ಷಗಳ ನಂತರ ಕರ್ನಾಟಕ ವೃಂದದ ಸೇವೆಗೆ ಬಂದಿದ್ದೇನೆ. ಇತರ ಅಧಿಕಾರಿಗಳಿಗೆ ಐಎಎಸ್ ಅಕಾಡೆಮಿ ತರಬೇತಿ ಸಂದರ್ಭದಲ್ಲಿ ದೊರಕುವ ಸ್ಥಳೀಯ ಭಾಷಾ ಬಳಕೆ ತರಬೇತಿ ದೊರಕಿಲ್ಲ. ಹಾಗಾಗಿ ಇತರ ಅಧಿಕಾರಿಗಳಷ್ಟು ಸ್ಫುಟವಾಗಿ ಕನ್ನಡ ಬಳಸಲು ಸಾಧ್ಯವಾಗಿಲ್ಲ' ಎಂದು ಪತ್ರದಲ್ಲಿ ಮನವರಿಕೆ ಮಾಡಿಕೊಡಲು ಯತ್ನಿಸಿದ್ದಾರೆ. ಕನ್ನಡ ಭಾಷೆಯ ಬಗ್ಗೆ ಅತ್ಯುಚ್ಛ ಗೌರವವಿದ್ದು, ಕನ್ನಡ ಭಾಷೆಯ ರಾಷ್ಟ್ರದ ಪ್ರಮುಖ ಮತ್ತು ಶಾಸ್ತ್ರೀಯ ಭಾಷೆಯಾಗಿ ಮಾನ್ಯತೆ ಪಡೆದುಕೊಂಡಿದೆ.
ಬೆಂಗಳೂರು(ಮಾ.23): ರಾಜ್ಯದಲ್ಲಿ ಕಳೆದ 10 ವರ್ಷಗಳಿಂದಲೂ ರಾಜ್ಯದಲ್ಲೇ ಸೇವೆ ಸಲ್ಲಿಸುತ್ತಿರುವ ದೆಹಲಿ ಮೂಲದ ಐಎಎಸ್ ಅಧಿಕಾರಿ ಶ್ರೀವತ್ಸ ಕೃಷ್ಣ, ಇಂಗ್ಲೀಷ್ನಲ್ಲಿ ಕಡತ ಮಂಡಿಸುವಂತೆ ನೀಡಿದ್ದ ಟಿಪ್ಪಣಿಯನ್ನು ಹಿಂತೆಗೆದುಕೊಂಡಿದ್ದಾರೆ. ಇಂಗ್ಲೀಷ್ನಲ್ಲಿಯೇ ಕಡತ ಮಂಡಿಸುವ ಸೂಚನೆಯನ್ನು ತಮ್ಮ ಅನುಮತಿ ಇಲ್ಲದೆಯೇ ಮತ್ತು ತಮ್ಮ ಗಮನಕ್ಕೆ ತರದೆಯೇ ಹೊರಡಿಸಲಾಗಿದೆ ಎಂದು ನುಣುಚಿಕೊಂಡಿದ್ದಾರೆ. ಹಾಗೆಯೇ ಇಂಗ್ಲೀಷ್ನಲ್ಲಿ ಬರೆದಿದ್ದ ಟಿಪ್ಪಣಿಯನ್ನು ಹಿಂತೆಗೆದುಕೊಂಡಿದ್ದಾರೆ.
ಇಂಗ್ಲೀಷ್ನಲ್ಲಿ ಟಿಪ್ಪಣಿ ಕಳಿಸಿದ್ದಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಪಡೆದಿದ್ದ ನೋಟೀಸ್ಗೆ ಶ್ರೀವತ್ಸ ಕೃಷ್ಣ ಅವರು ಉತ್ತರಿಸಿದ್ದಾರೆ. ಇಡೀ ಉತ್ತರದಲ್ಲಿ ಎಲ್ಲಿಯೂ ಈ ಜವಾಬ್ದಾರಿಯನ್ನು ಹೊತ್ತಿಲ್ಲ. ಬದಲಿಗೆ ಇದರ ಹಿಂದೆ ಕೆಳ ಹಂತದ ಅಧಿಕಾರಿಗಳ ದುರುದ್ದೇಶವಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಿಗೆ ಬರೆದಿರುವ ಪತ್ರದ ಪ್ರತಿ ಸುವರ್ಣನ್ಯೂಸ್ಗೆ ಲಭ್ಯವಾಗಿದೆ.
'ನಾನು 19 ವರ್ಷಗಳನಂತರಕರ್ನಾಟಕವೃಂದದಸೇವೆಗೆಬಂದಿದ್ದೇನೆ. ಇತರಅಧಿಕಾರಿಗಳಿಗೆಐಎಎಸ್ ಅಕಾಡೆಮಿತರಬೇತಿಸಂದರ್ಭದಲ್ಲಿದೊರಕುವಸ್ಥಳೀಯಭಾಷಾಬಳಕೆತರಬೇತಿದೊರಕಿಲ್ಲ. ಹಾಗಾಗಿಇತರಅಧಿಕಾರಿಗಳಷ್ಟುಸ್ಫುಟವಾಗಿಕನ್ನಡಬಳಸಲುಸಾಧ್ಯವಾಗಿಲ್ಲ' ಎಂದುಪತ್ರದಲ್ಲಿಮನವರಿಕೆಮಾಡಿಕೊಡಲುಯತ್ನಿಸಿದ್ದಾರೆ.
ಕನ್ನಡಭಾಷೆಯಬಗ್ಗೆಅತ್ಯುಚ್ಛಗೌರವವಿದ್ದು, ಕನ್ನಡಭಾಷೆಯರಾಷ್ಟ್ರದಪ್ರಮುಖಮತ್ತುಶಾಸ್ತ್ರೀಯಭಾಷೆಯಾಗಿಮಾನ್ಯತೆಪಡೆದುಕೊಂಡಿದೆ. ಐತಿಹಾಸಿಕಕಾಲದಿಂದಆಧುನಿಕಕಾಲಘಟ್ಟದವರೆಗೆಅತ್ಯುತ್ತಮಸಾಹಿತ್ಯಸೃಜಿಸಿರುವಬಗ್ಗೆತಮಗೆಅರಿವುಇದೆಎಂದುಪತ್ರದಲ್ಲಿತಿಳಿಸಿರುವಶ್ರೀವತ್ಸಕೃಷ್ಣ, ಇದನ್ನುಅಪಮಾನಿಸುವಯಾವುದೇಉದ್ದೇಶವೂಇಲ್ಲ. ಈಸಂಬಂಧಯಾವುದೇನಿರ್ದೇಶನಗಳನ್ನುಬರಹರೂಪದಲ್ಲಿನೀಡಿಲ್ಲಎಂದುಪತ್ರದಲ್ಲಿಸ್ಪಷ್ಟನೆನೀಡಿದ್ದಾರೆ.
ಇಂಗ್ಲೀಷ್ನಲ್ಲಿಕಡತಗಳನ್ನುಮಂಡಿಸಿಎಂದುಬರೆದಿದ್ದಟಿಪ್ಪಣಿಯನ್ನುನನ್ನಅನುಮತಿಇಲ್ಲದೆಯೇಮತ್ತುಗಮನಕ್ಕೆತರದೆಯೇಹೊರಡಿಸಲಾಗಿದೆ. ಆಟಿಪ್ಪಣಿಹೊರಡಿಸಿದ್ದಸಂದರ್ಭದಲ್ಲಿನಾನುಕಚೇರಿಯಲ್ಲಿಇರಲಿಲ್ಲ. ಬದಲಾಗಿಆಸ್ಪತ್ರೆಯಲ್ಲಿದ್ದೆ. ಈಟಿಪ್ಪಣಿಸರ್ಕಾರದನಿರ್ದೇಶನಗಳಿಗೆವ್ಯತಿರಿಕ್ತವಾಗಿರುತ್ತದೆ. ಇದಕ್ಕಾಗಿವಿಷಾದಿಸುತ್ತೇನೆ. ಕೆಲವುಕೆಳಹಂತದಅಧಿಕಾರಿಗಳದುರುದ್ದೇಶಕಾರ್ಯವಾಗಿರಬಹುದು ಎಂದು ಶ್ರೀವತ್ಸ ಕೃಷ್ಣ ಅವರು ಪತ್ರದಲ್ಲಿ ಅನುಮಾನ ವ್ಯಕ್ತಪಡಿಸಿದ್ದಾರೆ.
ಕಾನೂನು ವಿಭಾಗದ ಕೆಲ ಅಧಿಕಾರಿಗಳು ಕಾನೂನಾತ್ಮಕ ಪ್ರಕ್ರಿಯೆ ಸಂದರ್ಭದಲ್ಲಿ ಕಾಲಕಾಲಕ್ಕೆ ಕಡತ, ದಾಖಲೆ, ಟಿಪ್ಪಣಿಗಳನ್ನು ಇಂಗ್ಲೀಷ್ ಭಾಷೆಯಲ್ಲಿ ಒದಗಿಸಲು ಕೋರುತ್ತಾರೆ ಎಂದು ಪತ್ರದಲ್ಲಿ ತಿಳಿಸಿರುವ ಶ್ರೀ ವತ್ಸ ಕೃಷ್ಣ, ಕನ್ನಡ ಭಾಷೆ ಕಲಿಯಲು ನಾನು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.
ಇಂಗ್ಲೀಷ್ನಲ್ಲಿಯೇ ಕಡತ ಮಂಡಿಸಿ ಎಂದು ಬರೆದಿದ್ದ ಟಿಪ್ಪಣಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಗಮನಕ್ಕೆ ಬಂದಿತ್ತು. ಈ ವಿಚಾರ ಸಂಬಂಧ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಸಿದ್ದರಾಮಯ್ಯ ಅವರು ಶ್ರೀವತ್ಸ ಕೃಷ್ಣ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿ 3 ದಿನಗಳ ಒಳಗಾಗಿ ಉತ್ತರ ನೀಡುವಂತೆ ಸೂಚನೆ ನೀಡಿದ್ದರು.
ವರದಿ: ಜಿ.ಮಹಾಂತೇಶ್, ಸುವರ್ಣನ್ಯೂಸ್
