ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರಾಗಿದ್ದ ಡಾ.ಎಂ.ಎನ್.ಅಜಯ್ ನಾಗಭೂಷಣ್, ‘ಈ ಪ್ರಕ್ರಿಯೆ ಸರಿಯಿಲ್ಲ. ಹೀಗಾಗಿ ಇಡೀ ಟೆಂಡರ್ ಪ್ರಕ್ರಿಯೆ ತಡೆಯಿರಿ’ ಎಂದು ಸರ್ಕಾರಕ್ಕೆ ಪತ್ರ ಬರೆದರು. ಆದರೂ ಟೆಂಡರ್ ಪ್ರಕ್ರಿಯೆಗೆ ಸರ್ಕಾರ ತಡೆ ನೀಡದ ಕಾರಣ, ಆಯುಕ್ತ ಅಜಯ್ ನಾಗಭೂಷಣ್ ಕಡತಕ್ಕೆ ಸಹಿ ಹಾಕಲಿಲ್ಲ. ಇದರ ಬೆನ್ನಲ್ಲೇ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಹುದ್ದೆಯಿಂದ ಡಾ. ಅಜಯ್‌ರನ್ನು ಎತ್ತಂಗಡಿ ಮಾಡಲಾಯಿತು

ಬೆಂಗಳೂರು(ನ.09):ರಾಜ್ಯದ ಒಂದೂವರೆ ಲಕ್ಷ ಪದವಿ ವಿದ್ಯಾರ್ಥಿ'ಗಳಿಗೆ ಲ್ಯಾಪ್‌ಟಾಪ್ ವಿತರಿಸುವ ಉನ್ನತಶಿಕ್ಷಣ ಇಲಾಖೆಯ ಮಹತ್ವಾಕಾಂಕ್ಷೆಯ 300 ಕೋಟಿ ರು.ಗಳ ಯೋಜನೆಯಲ್ಲಿ ಹಗರಣನಡೆದಿದೆ ಎಂಬ ಆರೋಪ ಕೇಳಿಬಂದಿದೆ.

ಈ ಬಗ್ಗೆ ಹಿರಿಯ ಐಎಎಸ್ ಅಧಿಕಾರಿಅಜಯ್ ನಾಗಭೂಷಣ್ ರಾಜ್ಯ ಸರ್ಕಾರದಮುಖ್ಯ ಕಾರ್ಯದರ್ಶಿಗಳಿಗೆ ಲಿಖಿತ ದೂರುನೀಡಿದ್ದಾರೆ. 2017-18ನೇ ಸಾಲಿನಲ್ಲಿ ಪ್ರಥಮವರ್ಷದ ಪದವಿಗೆ ಪ್ರವೇಶ ಪಡೆದಿರುವ ಎಲ್ಲಜಾತಿ-ಧರ್ಮಗಳ 1.5 ಲಕ್ಷ ವಿದ್ಯಾರ್ಥಿಗಳಿಗೆಉಚಿತವಾಗಿ ಲ್ಯಾಪ್‌ಟಾಪ್ ವಿತರಿಸುವುದಾಗಿಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿಪ್ರಕಟಿಸಿದ್ದರು. ಈ ಘೋಷಣೆ ಅನ್ವಯ ಉನ್ನತಶಿಕ್ಷಣ ಇಲಾಖೆ ಲ್ಯಾಪ್‌ಟಾಪ್ ಹಂಚಿಕೆಗೆಟೆಂಡರ್ ಪ್ರಕ್ರಿಯೆ ಆರಂಭಿಸಿತ್ತು. 2016 - 17ನೇ ಸಾಲಿನಲ್ಲಿ ಕೇವಲ 37 ಸಾವಿರ ದಲಿತವಿದ್ಯಾರ್ಥಿಗಳಿಗೆ ಹಂಚಿಕೆಯಾದ ಲ್ಯಾಪ್'ಟಾಪ್ ಯೋಜನೆಯ ಮುಂದುವರಿದಯೋಜನೆ ಇದಾಗಿದ್ದು, ಕಳೆದ ವರ್ಷದಮಾದರಿಯಲ್ಲೇ ಲ್ಯಾಪ್‌ಟಾಪ್ ಖರೀದಿಸಬೇಕಿತ್ತು.

ಆದರೆ ಏಕಾಏಕಿ ಪ್ರತಿ ಲ್ಯಾಪ್‌ಟಾಪ್ದರವನ್ನು ಹಿಂದಿನ ದರಕ್ಕಿಂತ 10 ಸಾವಿರ ರು.ಗಳಷ್ಟು ಹೆಚ್ಚಳ ಮಾಡಿದ್ದಲ್ಲದೇ ಒಂದೂವರೆಲಕ್ಷ ಲ್ಯಾಪ್‌ಟಾಪ್ ಖರೀದಿಯನ್ನು ನಾಲ್ಕುಭಾಗಗಳಾಗಿ ತುಂಡು ಗುತ್ತಿಗೆ ಮೂಲಕ ಖರೀದಿಸಲು ಉನ್ನತ ಶಿಕ್ಷಣ ಇಲಾಖೆ ಕಡತಮಂಡಿಸಿತು.ಆಗ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರಾಗಿದ್ದ ಡಾ.ಎಂ.ಎನ್.ಅಜಯ್ ನಾಗಭೂಷಣ್, ‘ಈ ಪ್ರಕ್ರಿಯೆ ಸರಿಯಿಲ್ಲ. ಹೀಗಾಗಿಇಡೀ ಟೆಂಡರ್ ಪ್ರಕ್ರಿಯೆ ತಡೆಯಿರಿಎಂದುಸರ್ಕಾರಕ್ಕೆ ಪತ್ರ ಬರೆದರು. ಆದರೂ ಟೆಂಡರ್ಪ್ರಕ್ರಿಯೆಗೆ ಸರ್ಕಾರ ತಡೆ ನೀಡದ ಕಾರಣ, ಆಯುಕ್ತ ಅಜಯ್ ನಾಗಭೂಷಣ್ ಕಡತಕ್ಕೆಸಹಿ ಹಾಕಲಿಲ್ಲ. ಇದರ ಬೆನ್ನಲ್ಲೇ ಕಾಲೇಜುಶಿಕ್ಷಣ ಇಲಾಖೆ ಆಯುಕ್ತ ಹುದ್ದೆಯಿಂದ ಡಾ.ಅಜಯ್‌ರನ್ನು ಎತ್ತಂಗಡಿ ಮಾಡಲಾಯಿತು.ಹೀಗಾಗಿ ಮನನೊಂದ ಡಾ.ಅಜಯ್ನಾಗಭೂಷಣ್ ಉನ್ನತ ಶಿಕ್ಷಣ ಇಲಾಖೆಯಲ್ಲಿನಡೆಯುತ್ತಿರುವ ಲ್ಯಾಪ್‌ಟಾಪ್ ಹಗರಣಸೇರಿದಂತೆ ಹಲವು ಅಕ್ರಮಗಳ ಕುರಿತುಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್ಚಂದ್ರ ಕುಂಟಿಯಾ ಅವರಿಗೆ ದಾಖಲೆಗಳಸಹಿತ ಸುದೀರ್ಘ ಪತ್ರ ಬರೆದಿದ್ದಾರೆ ಎಂದುಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

ಪತ್ರದಲ್ಲಿ ಏನಿದೆ?

ಸದ್ಯ ಸಕ್ಕರೆ ಆಯುಕ್ತರಾಗಿರುವ ಡಾ.ಅಜಯ್ ಉನ್ನತ ಶಿಕ್ಷಣ ಇಲಾಖೆಯಲ್ಲಿ ನಡೆಯುತ್ತಿರುವ ಅಕ್ರಮಗಳ ಕುರಿತುಸುದೀರ್ಘ ಪತ್ರ ಬರೆದಿದ್ದಾರೆ. ಅದರಲ್ಲಿ-‘‘2016-17ನೇ ಸಾಲಿನಲ್ಲಿ ಪರಿಶಿಷ್ಟ ಜಾತಿಪಂಗಡದ 14,692 ರು.ಗಳಿಗೆ ಒಂದರಂತೆ 37 ಕೋಟಿ ರು.ಗಳ ವೆಚ್ಚದಲ್ಲಿ 26,790 ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಖರೀದಿಸಲಾಗಿತ್ತು. ಈ ವರ್ಷ 2017-18ನೇ ಸಾಲಿಗೆಪರಿಶಿಷ್ಟರ ಜತೆಗೆ ಎಲ್ಲ ಜಾತಿಗಳ ವಿದ್ಯಾರ್ಥಿಗಳಿಗೆ 1.5 ಲಕ್ಷ ಪ್‌ಟಾಪ್ ಖರೀದಿಸಲುಇಲಾಖೆ ಮುಂದಾಗಿದೆ. ಈ ವೇಳೆ ಹಿಂದಿನವರ್ಷದ ಗುಣಮಟ್ಟದ ಲ್ಯಾಪ್‌ಟಾಪ್‌ಗಳಖರೀದಿಗೆ ಹಿಂದಿನ ವರ್ಷದ ದರಕ್ಕಿಂತ 10 ಸಾವಿರ ರು.ಗಳ ಹೆಚ್ಚಿನ ದರ ನಿಗದಿಪಡಿಸಲಾಗುತ್ತಿದೆ. ಅಲ್ಲದೇ ಒಂದೂವರೆ ಲಕ್ಷ ಲ್ಯಾಪ್ಟಾಪ್‌ಗೆ ಕೆಟಿಟಿಪಿ ಕಾಯ್ದೆಯ ಅನ್ವಯಒಂದೇ ಟೆಂಡರ್ ಕರೆ ಯುವ ಬದಲಾಗಿ 4 ತುಂಡು ಗುತ್ತಿಗೆ ಮಾಡಲು ಕಡತ ಮಂಡಿಸಲಾಗಿದೆ. ಅದರಲ್ಲೂ ಉಪ ಕಾರ್ಯದರ್ಶಿದರ್ಜೆಯ ಅಧಿಕಾರ ತಮಗೆ ಕಡತ ಮಂಡಿಸಿದ್ದು, ಖಾಸಗಿ ವ್ಯಕ್ತಿಗೆ ಸೇರಿದ ಸಂಸ್ಥೆಯಿಂದಖರೀದಿಸುವ ಪ್ರಸ್ತಾವ ಇದೆ’’ ಎಂದುವಿವರಿಸಲಾಗಿದೆ. ಈ ರೀತಿಯ ತುಂಡು ಗುತ್ತಿಗೆಮಾಡುವುದ ರಿಂದ ಲ್ಯಾಪ್‌ಟಾಪ್ ಕಂಪನಿಗಳುದೊಡ್ಡ ಸಂಖ್ಯೆಯ ವಸ್ತುಗಳ ಖರೀದಿ ಮೇಲೆನೀಡುವ ಶೇ.50ರವರೆಗಿನ ಡಿಸ್ಕೌಂಟ್ ಕೂಡಸರ್ಕಾರಕ್ಕೆ ತಪ್ಪಿ ಹೋಗಲಿದೆ. ಸರ್ಕಾರಕ್ಕೆಆಗಬಹುದಾದ ಅನುಕೂಲಕ್ಕಿಂತ ಹೆಚ್ಚುವರಿವೆಚ್ಚವಾಗುವ ಪ್ರಕ್ರಿಯೆ ನಡೆಸುವಂತೆ ಕೆಲಶಕ್ತಿಗಳು ಒತ್ತಡ ಹೇರುತ್ತಿವೆ. ಇದನ್ನು ಒಪ್ಪದ್ದಕ್ಕೆಕೆಲವರು ವೃಥಾ ಆರೋಪ ಮಾಡಿ, ಮಾನಸಿಕಕಿರುಕುಳ ನೀಡಿದ್ದಾರೆ ಎಂದೂ ತಿಳಿಸಲಾಗಿದೆ.

(ಕನ್ನಡಪ್ರಭ ವಾರ್ತೆ)