Asianet Suvarna News Asianet Suvarna News

ಸೆ.3ಕ್ಕೆ ವರ್ತಮಾನ್‌ ಮಿಗ್‌-21 ಸಂಚಾರ!

 ಅಪಾಚೆ ಗಾರ್ಡಿಯನ್‌ ಹೆಲಿಕಾಪ್ಟರ್‌ಗಳು ಭಾರತೀಯ ವಾಯುಪಡೆಗೆ ಅಧಿಕೃತವಾಗಿ ಸೇರ್ಪಡೆ ಸೆ.3ಕ್ಕೆ ವರ್ತಮಾನ್‌ ಮಿಗ್‌-21 ಸಂಚಾರ| 

IAF Wing Commander Abhinandan Varthaman to fly MiG 21 during Apache induction
Author
Bangalore, First Published Aug 28, 2019, 9:23 AM IST

ನವದೆಹಲಿ[ಆ.28]: ವಾಯುಪಡೆಯಲ್ಲಿ ಮರಳಿ ಯುದ್ಧ ವಿಮಾನ ಚಲಾಯಿಸುವ ಅರ್ಹತೆಯನ್ನು ಇತ್ತೀಚೆಗಷ್ಟೇ ಪಡೆದುಕೊಂಡಿದ್ದ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ತಮಾನ್‌ ಸೆ.3ರಂದು ಮತ್ತೆ ಮಿಗ್‌ 21 ವಿಮಾನ ಹಾರಿಸಲಿದ್ದಾರೆ.

ಅಂದು ಅಮೆರಿಕ ನಿರ್ಮಿತ ಬೋಯಿಂಗ್‌ ಎಎಚ್‌-64ಇ ಅಪಾಚೆ ಗಾರ್ಡಿಯನ್‌ ಹೆಲಿಕಾಪ್ಟರ್‌ಗಳು ಭಾರತೀಯ ವಾಯುಪಡೆಗೆ ಅಧಿಕೃತವಾಗಿ ಸೇರ್ಪಡೆಯಾಗುತ್ತಿದ್ದು, ಆ ವೇಳೆ ನಡೆಯುವ ಕಾರ್ಯಕ್ರಮದ ಭಾಗವಾಗಿ ಅಭಿನಂದನ್‌ ಮಿಗ್‌-21 ಯುದ್ಧ ವಿಮಾನ ಚಲಾಯಿಸಲಿದ್ದಾರೆ.

ವಿಂಗ್ ಕಮಾಂಡರ್ ಅಭಿನಂದನ್ ಯಾರು? ಇಲ್ಲಿದೆ ಧೀರ ಯೋಧನಿಗೆ ಸಂಬಂಧಿಸಿದ ಎಲ್ಲಾ ಸುದ್ದಿಗಳು

ಭಾರತೀಯ ಯೋಧರು ಶತ್ರು ದೇಶದ ವಶಕ್ಕೆ ಸಿಕ್ಕಿ ಮರಳಿದ ಬಳಿಕ ಅವರನ್ನು ದೈಹಿಕ ತಪಾಸಣೆಗೆ ಗುರಿಪಡಿಲಾಗುತ್ತದೆ. ಈ ವೇಳೆ ಯೋಧನ ಕಾರ್ಯಕ್ಷಮತೆಯನ್ನು ಪರೀಕ್ಷಿಸಲಾಗುತ್ತದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಇಂಥ ಪರೀಕ್ಷೆಯಲ್ಲಿ ಅಭಿನಂದನ್‌ ಪಾಸಾಗುವ ಮೂಲಕ, ಮತ್ತೆ ಯುದ್ಧ ವಿಮಾನ ಚಲಾಯಿಸುವ ಅರ್ಹತೆ ಪಡೆದುಕೊಂಡಿದ್ದರು.

Follow Us:
Download App:
  • android
  • ios