ಸಾಮಾನ್ಯ ಹಾರಾಟದ ವೇಳೆ ವಿಮಾನ ಇದ್ದಕ್ಕಿದ್ದಂತೆ ನೆಲಕ್ಕಪ್ಪಳಿಸಿದೆ. ಈ ವೇಳೆ ಇಬ್ಬರೂ ಪೈಲಟ್‌ಗಳು ಹೊರಜಿಗಿದು ಪಾರಾಗಿದ್ದಾರೆ.

ಜೈಪುರ(ಮಾ.15): ಭಾರತೀಯ ವಾಯುಪಡೆಗೆ ಸೇರಿದ ಸುಖೋಯ್ ಯುದ್ಧ ವಿಮಾನವೊಂದು ಬಾಡ್ಮೇರ್ ಜಿಲ್ಲೆಯಲ್ಲಿ ಅಪಘಾತಕ್ಕೀಡಾಗಿದೆ.

ಘಟನೆಯಲ್ಲಿ ಇಬ್ಬರೂ ಪೈಲಟ್‌'ಗಳು ಪಾರಾಗಿದ್ದಾರೆ, ಆದರೆ ಮೂವರು ಗ್ರಾಮಸ್ಥರು ಗಾಯಗೊಂಡಿದ್ದಾರೆ. ಸಾಮಾನ್ಯ ಹಾರಾಟದ ವೇಳೆ ವಿಮಾನ ಇದ್ದಕ್ಕಿದ್ದಂತೆ ನೆಲಕ್ಕಪ್ಪಳಿಸಿದೆ. ಈ ವೇಳೆ ಇಬ್ಬರೂ ಪೈಲಟ್‌ಗಳು ಹೊರಜಿಗಿದು ಪಾರಾಗಿದ್ದಾರೆ. ಆದರೆ ವಿಮಾನ ಉರುಳಿಬಿದ್ದ ವೇಳೆ ಮೂವರು ಗ್ರಾಮಸ್ಥರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಜೊತೆಗೆ ಕೆಲ ಗುಡಿಸಲುಗಳಿಗೂ ಹಾನಿಯಾಗಿದೆ. ಘಟನೆ ಕುರಿತು ವಾಯುಪಡೆ ತನಿಖೆಗೆ ಆದೇಶಿಸಿದೆ.