ಯಡಿಯೂರಪ್ಪನಿಗೂ ವರುಣ ಕ್ಷೇತ್ರಕ್ಕೂ ಸಂಬಂಧವೇನು..?

I would win Varuna constituency if anybody else come and contest here
Highlights

'ವರುಣಾದಲ್ಲಿ ವಿಜಯೇಂದ್ರ ಏಕೆ, ಅವರಪ್ಪ ಬಂದು ನಿಲ್ಲಲಿ. ಗೆಲ್ಲೋದು ನಾನೇ...' ಎಂದು ಸಿಎಂ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮೈಸೂರು: 'ವರುಣಾದಲ್ಲಿ ವಿಜಯೇಂದ್ರ ಏಕೆ, ಅವರಪ್ಪ ಬಂದು ನಿಲ್ಲಲಿ. ಗೆಲ್ಲೋದು ನಾನೇ...' ಎಂದು ಸಿಎಂ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

'ಯಡಿಯೂರಪ್ಪನಿಗೂ ವರುಣ ಕ್ಷೇತ್ರಕ್ಕೂ ಸಂಬಂಧವೇನು..?  ಅವರು ಬಂದು ನಿಂತ ತಕ್ಷಣ ಜನ ಓ ಅಂತ ಓಡಿ ಬರ್ತಾರಾ?  ನನ್ನ ಮಗ ನಿಂತ್ರೂ ಸಿಎಂ ಮಗ ಅಂತ ವೋಟು ಹಾಕೋದಿಲ್ಲ. ಸಿಎಂ ಆಗಿ ನಾನು ಏನು ಕೆಲಸ ಮಾಡಿದ್ದೀನಿ ಅನ್ನೋದು ಗೊತ್ತಿದೆ. ವರುಣಾ ಕ್ಷೇತ್ರದ ಜನರ ಕಷ್ಟಕ್ಕೆ ಸ್ಪಂದಿಸಿರುವುದು ನಾನು.  ಆ ಕ್ಷೇತ್ರದಲ್ಲಿ ಕೆಲಸ ಮಾಡಿರೋದು ನಾನು,' ಎಂದು ಸಿದ್ದರಾಮಯ್ಯ  ಹೇಳಿದ್ದಾರೆ.

'ಯಾರೋ ಬಂದು ನಿಂತ ತಕ್ಷಣ ಅಲ್ಲಿನ ಜನ ಬದಲಾಗೋದಿಲ್ಲ. ಜನರಿಗೆ ಯಾರಿಗೆ ವೋಟು ಹಾಕಬೇಕು ಅಂತ ಗೊತ್ತಿದೆ . ಮಾಜಿ ಸಿಎಂ ಮಕ್ಕಳು ನಿಂತು ಗೆಲ್ಲೋದಾಗಿದ್ದರೆ, ಯಾರೋ ಎಲ್ಲೆಲ್ಲೋ ಚುನಾವಣೆಗೆ ನಿಲ್ಲುತ್ತಿದ್ದರು,' ಎಂದಿದ್ದಾರೆ ಸಿಎಂ.
 

loader