Asianet Suvarna News Asianet Suvarna News

ಇದು ಕಡೇ ಚುನಾವಣೆ - 2024ಕ್ಕೆ ರಾಜ​ಕೀಯದಿಂದಲೇ​ ನಿವೃತ್ತಿ : ಬಿಜೆಪಿ ನಾಯಕ

ಇನ್ನು ಕೆಲವೇ ವರ್ಷಗಳಲ್ಲಿ ರಾಜಕೀಯದಿಂದಲೇ ನಿವೃತ್ತಿ ಪಡೆದುಕೊಳ್ಳಲಾಗುವುದು ಎಂದು ಬಿಜೆಪಿ ಮುಖಂಡ  ಹೇಳಿದ್ದಾರೆ.

I Will quit Politics in 2024 Says GM Siddeshwara
Author
Bengaluru, First Published Apr 25, 2019, 9:24 AM IST

ದಾವ​ಣ​ಗೆರೆ: ನಾನು ಯಾವು​ದೇ ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಇದೇ ನನ್ನ ಕಡೇ ಚುನಾ​ವ​ಣೆ​ಯೆಂದು ಘೋಷಿಸಿ​ದ್ದೇನೆ. 2024ಕ್ಕೆ ರಾಜ​ಕೀಯದಿಂದ ನಿವೃತ್ತಿ ಹೊಂದುವೆ ಎಂದು ಬಿಜೆಪಿ ಅಭ್ಯರ್ಥಿ, ಸಂಸದ ಜಿ.ಎಂ.​ಸಿ​ದ್ದೇ​ಶ್ವರ ತಿಳಿ​ಸಿ​ದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲಾ ಕೆರೆ​ಗ​ಳನ್ನು ತುಂಬಿ​ಸ​ಬೇಕು, ಜನ​ರಿಗೆ ಶುದ್ಧ ಕುಡಿ​ಯುವ ನೀರು ಪೂರೈ​ಸ​ಬೇಕು, ಪರ್ಟಿ​ಲೈ​ಸರ್‌ ಫ್ಯಾಕ್ಟರಿ, ಸೆಕೆಂಡ್‌ ಜನ​ರೇ​ಷನ್‌ ಎಥೆ​ನಾಲ್‌ ಘಟಕ ಸ್ಥಾಪ​ನೆ, ದಾವ​ಣ​ಗೆ​ರೆ ರೈಲ್ವೆ ನಿಲ್ದಾ​ಣ ಅಭಿ​ವೃದ್ಧಿ, 2 ರೈಲ್ವೇ ಗೇಟ್‌​ಗಳ ಸಮ​ಸ್ಯೆಗೆ ಮುಕ್ತಿ, ಇಎಸ್‌ ಐ ಆಸ್ಪತ್ರೆ ಕಟ್ಟಡ ನಿರ್ಮಾಣ, ಜಿಲ್ಲಾ​ಸ್ಪತ್ರೆಯಲ್ಲಿ 25 ಕೋಟಿ ವೆಚ್ಚದ ಅಭಿ​ವೃದ್ಧಿ ಕೆಲಸ, 11 ಕೋಟಿ ವೆಚ್ಚ​ದಲ್ಲಿ ಹಳೆ ಹೆರಿಗೆ ಆಸ್ಪ​ತ್ರೆಯ ಅಭಿ​ವೃದ್ಧಿ ನನ್ನ ಗುರಿ​ಯಾ​ಗಿವೆ ಎಂದ​ರು.

ಇಲ್ಲಿನ ಅಶೋಕ ಗೇಟ್‌ ಸಮ​ಸ್ಯೆ ಪರಿ​ಹ​ರಿ​ಸಲು ಕೇಂದ್ರ​ದಿಂದ ಹಣ ಮಂಜೂರು ಮಾಡಿ​ಸಿ​ದ್ದೇನೆ. ಇಲ್ಲಿನ ಪಾಲಿಕೆ, ಜಿಲ್ಲಾ​ಡ​ಳಿತ ಜಾಗ ನೀಡು​ತ್ತಿಲ್ಲ. ಸ್ಥಳೀಯ ಆಡ​ಳಿತ ಜಾಗ ನೀಡ​ದಿ​ದ್ದರೆ ಅಂತ​ರ​ದಲ್ಲಿ ಫ್ಲೈಓ​ವರ್‌ ನಿರ್ಮಿ​ಸ​ಲಾ​ಗು​ತ್ತ​ದೆಯೇ? ಕೈಗಾ​ರಿಕೆ ತರಲು 5-19 ಸಾವಿರ ಎಕರೆ ಭೂಮಿ ಸ್ವಾಧೀ​ನ​ವಾ​ಗ​ಬೇಕು. ಅದ​ರಲ್ಲಿ 500 ಎಕರೆ ವಿಮಾನ ನಿಲ್ದಾ​ಣಕ್ಕೆ, ಉಳಿ​ದ​ದ್ದಕ್ಕೆ ಕೈಗಾ​ರಿಕೆ ತರು​ತ್ತೇನೆ. ಮೊದಲು ರಾಜ್ಯ ಸರ್ಕಾ​ರ ಭೂಮಿ ಒದ​ಗಿ​ಸಲಿ ಎಂದು ಆಗ್ರ​ಹಿ​ಸಿ​ದರು.

ಯಾವುದೇ ಕೈಗಾ​ರಿಕೆ ಸ್ಥಾಪಿ​ಸಲು ವಿಮಾನ ನಿಲ್ದಾಣ, ಭೂಮಿಯ ಅಗ​ತ್ಯತೆ ಇರು​ತ್ತದೆ. ರೈಲ್ವೆ ಮಾರ್ಗ, ರಸ್ತೆ ಮಾರ್ಗ​ವಿದ್ದು, ವಿಮಾನ ನಿಲ್ದಾ​ಣವೂ ಆದಲ್ಲಿ ಸಾಕಷ್ಟುಅನುಕೂ​ಲ​ವಾ​ಗು​ತ್ತದೆ. ದಾವ​ಣ​ಗೆ​ರೆ-ಚಿತ್ರ​ದು​ರ್ಗ-ತುಮ​ಕೂರು ನೇರ ರೈಲ್ವೆ ಮಾರ್ಗಕ್ಕೆ 996 ಕೋಟಿ ಮಂಜೂರು ಮಾಡಿ​ಸಿದ್ದು, 100 ಕೋಟಿ ಹಣ ಬಿಡುಗಡೆ ಮಾಡಿದ್ದೇನೆ. ಆದರೆ, ರಾಜ್ಯ ಸರ್ಕಾರ ಮಾತ್ರ ಭೂಮಿ​ಯನ್ನೇ ಕೊಟ್ಟಿಲ್ಲ. ಜಿಲ್ಲಾ ಮಂತ್ರಿ​ಯಾ​ದ​ವ​ರಾ​ದರೂ ಗಮನ ಹರಿಸಿ, ಅಭಿ​ವೃದ್ಧಿ ಕೈಗೊ​ಳ್ಳಲಿ. ಎತ್ತು ಏರಿಗೆ ಎಳೆ​ದರೆ, ಕೋಣ ನೀರಿಗೆ ಇಳೀತು ಎನ್ನು​ವಂತಾ​ಗ​ಬಾ​ರ​ದಷ್ಟೇ ಎಂದರು. ಮೇ 23ರ ಹೊತ್ತಿಗೆ ಮೈತ್ರಿ ಸರ್ಕಾ​ರ​ ಇ​ರು​ವು​ದಿ​ಲ್ಲ​ವೆಂಬ ಮಾತು ಕೇಳಿ ಬರು​ತ್ತಿದೆ. ರಮೇಶ್‌ ಜಾರ​ಕಿ​ಹೊಳಿ ಸಹ ಇದೇ ಮಾತು​ ಆ​ಡು​ತ್ತಿ​ದ್ದಾರೆ. ನೋಡೋಣ ಏನು ಆಗುತ್ತ​ದೆಯೋ ಎಂದು ಹೇಳಿದರು.

Follow Us:
Download App:
  • android
  • ios