ಕೇಂದ್ರದ ನೀತಿಗಳ ವಿರುದ್ಧ ಹರಿಹಾಯುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇದೀಗ ಆಧಾರ್ ಯೊಜನೆ ವಿರುದ್ಧ ಸಮರ ಸಾರಿದ್ದಾರೆ.
ನವದೆಹಲಿ: ಕೇಂದ್ರದ ನೀತಿಗಳ ವಿರುದ್ಧ ಹರಿಹಾಯುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇದೀಗ ಆಧಾರ್ ಯೊಜನೆ ವಿರುದ್ಧ ಸಮರ ಸಾರಿದ್ದಾರೆ.
ಪಕ್ಷದ ಕಾರ್ಯಕಾರಿ ಸಮಿತಿಯಲ್ಲಿ ಮುಖಂಡರು ಹಾಗೂ ಕಾರ್ಯಕರ್ತರನ್ನುದ್ದೇಶಿ ಮಾತನಾಡಿದ ಮಮತಾ ಬ್ಯಾನರ್ಜಿ, ಕೇಂದ್ರ ಸರ್ಕಾರದ ಆಧಾರ್ ಕಡ್ಡಾಯಗೊಳಿಸುವಿಕೆಯ ವಿರುದ್ಧ ಹರಿಹಾಯ್ದಿದ್ದಾರೆ.
‘ಏನೇ ಆಗಲಿ, ನಾನು ಮೊಬೈಲ್ ಸಂಖ್ಯೆಯೊಂದಿಗೆ ಆಧಾರನ್ನು ಲಿಂಕ್ ಮಾಡಲ್ಲ; ಸಂಪರ್ಕ ಸ್ಥಗಿತಗೊಳಿಸಿದರೂ ಪರ್ವಾಗಿಲ್ಲ,’ ಎಂದು ಮಮತಾ ಘರ್ಜಿಸಿದ್ದಾರೆ.
ಮುಂದುವರಿದು, ಎಲ್ಲರೂ ಕೂಡಾ ಇದೇ ರೀತಿ (ಲಿಂಕ್ ಮಾಡಿಸದೇ) ಆಧಾರ್ ಕಡ್ಡಾಯಗೊಳಿಸುವಿಕೆಯ ವಿರುದ್ಧ ಪ್ರತಿಭಟನೆ ನಡೆಸಬೇಕೆಂದು ಕರೆಕೊಟ್ಟಿದ್ದಾರೆ.
ಮೊಬೈಲ್ ಸಂಖ್ಯೆಗೆ ಆಧಾರ್ ಲಿಂಕ್ ಮಾಡುವುದು ಖಾಸಗಿತನ ಹಕ್ಕಿನ ಉಲ್ಲಂಘನೆಯಾಗಿದೆ. ಇದು ಮುಂದುವರೆದರೆ, ಪತಿ-ಪತ್ನಿಯ ಖಾಸಗಿ ಸಂಭಾಷಣೆಗಳು ಕೂಡಾ ಸಾರ್ವಜನಿಕವಾಗಬಹುದು, ಎಂದು ದೀದಿ ಹೇಳಿದ್ದಾರೆ.
ಮೊಬೈಲ್ ಸಂ. ಆಧಾರ್ ಜೊತೆಗೆ ಲಿಂಕ್ ಮಾಡುವುದು ಕಡ್ಡಾಯವೆಂದು ಕಳೆದ ಮಾ.23ರಂದು ದೂರಸಂಪರ್ಕ ಇಲಾಖೆ ಆದೇಶ ಹೊರಡಿಸಿದೆ.
