ಇನ್ನು 10 ವರ್ಷ ಯಾವುದೇ ಚುನಾವಣೆಗೆ ಸ್ಪರ್ಧಿಸಲ್ಲ: ಪ್ರಶಾಂತ್‌ ಕಿಶೋರ್‌ ಸ್ಪಷ್ಟನೆ | 2019ರ ಲೋಕಸಭೆ ಚುನಾವಣೆಯಲ್ಲಿ ಜೆಡಿಯುನಿಂದ ಸ್ಪರ್ಧಿಸುವ ಊಹಾಪೋಹಗಳಿಗೆ ತೆರೆ 

ಪಟನಾ (ಅ. 24): ಚುನಾವಣಾ ತಂತ್ರಗಾರ ಹಾಗೂ ಜೆಡಿಯು ಉಪಾಧ್ಯಕ್ಷ ಪ್ರಶಾಂತ್‌ ಕಿಶೋರ್‌, ತಾವು ಮುಂದಿನ 10 ವರ್ಷ ಲೋಕಸಭೆ, ವಿಧಾನಸಭೆ ಸೇರಿದಂತೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಬಿಹಾರವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವುದು ತಮ್ಮ ಗುರಿ ಎಂದು ಹೇಳಿದ್ದಾರೆ.

ಮೋದಿ ಗೆಲ್ಲಿಸಿದ್ದ 'ಪಿಕೆ' ಸೇರ್ತಾರಾ ನಿತೀಶ್ ಕ್ಯಾಂಪ್?: "ಚುನಾವಣಾ ಚಾಣಕ್ಯ' ಆರ್ ಯೂ ಓಕೆ?

ಪಕ್ಷದ ಯುವ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಅವರು, 2019ರ ಲೋಕಸಭೆ ಚುನಾವಣೆಯಲ್ಲಿ ಜೆಡಿಯುನಿಂದ ಸ್ಪರ್ಧಿಸುವ ಊಹಾಪೋಹಗಳಿಗೆ ಅವರು ತೆರೆ ಎಳೆದಿದ್ದಾರೆ. ಸೆಪ್ಟೆಂಬರ್‌ನಲ್ಲಿ ಜೆಡಿಯುಗೆ ಸೇರ್ಪಡೆಯಾದ ಪ್ರಶಾಂತ್‌ ಕಿಶೋರ್‌ರನ್ನು ಇತ್ತೀಚೆಗಷ್ಟೇ ಪಕ್ಷದ ಉಪಾಧ್ಯಕ್ಷರಾಗಿ ನೇಮಕ ಮಾಡಲಾಗಿತ್ತು. ಅಲ್ಲದೇ ಅವರನ್ನು ರಾಜ್ಯಸಭೆಗೆ ಕಳುಹಿಸುವ ಬಗ್ಗೆಯೂ ಸಿಎಂ ನಿತೀಶ್‌ ಚಿಂತಿಸಿದ್ದರು ಎನ್ನಲಾಗಿತ್ತು.