ಬಿಜೆಪಿ ಅಧ್ಯಕ್ಷ ಪದವಿ ತೊರೆಯುವ ಪ್ರಶ್ನೆಯೇ ಇಲ್ಲ. ಅಧ್ಯಕ್ಷ ಹುದ್ದೆಯಲ್ಲಿ ‘ಸಂತೋಷ’ದಿಂದ ಹಾಗೂ ‘ತುಂಬುಹೃದಯ’ದಿಂದ ಕೆಲಸ ಮಾಡುತ್ತಿದ್ದೇನೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.

ಲಖನೌ(ಆ.01): ಬಿಜೆಪಿ ಅಧ್ಯಕ್ಷ ಪದವಿ ತೊರೆಯುವ ಪ್ರಶ್ನೆಯೇ ಇಲ್ಲ. ಅಧ್ಯಕ್ಷ ಹುದ್ದೆಯಲ್ಲಿ ‘ಸಂತೋಷ’ದಿಂದ ಹಾಗೂ ‘ತುಂಬುಹೃದಯ’ದಿಂದ ಕೆಲಸ ಮಾಡುತ್ತಿದ್ದೇನೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.

ಶಾ ಇತ್ತೀಚೆಗೆ ರಾಜ್ಯಸಭೆಗೆ ನಾಮ ಪತ್ರ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಶಾ ರಾಜೀನಾಮೆ ವದಂತಿ ಹರಡಿತ್ತು. ಈ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘ಇದೆಲ್ಲ ಮಾಧ್ಯಮಗಳ ಕಪೋಲಕಲ್ಪಿತ ಸೃಷ್ಟಿ. ನಾನು ಬಿಜೆಪಿ ಅಧ್ಯಕ್ಷ ಹುದ್ದೆಯಲ್ಲಿ ನಿರಾಳವಾಗಿದ್ದೇನೆ’ ಎಂದು ಹೇಳಿದರು.

ಬಿಹಾರದಲ್ಲಿ ಸರ್ಕಾರ ಬೀಳಿಸುವುದರಲ್ಲಿ ಬಿಜೆಪಿ ಪಾತ್ರವಿಲ್ಲ. ಭ್ರಷ್ಟರೊಂದಿಗೆ ಇರಲಾಗದು ಎಂದು ನಿತೀಶ್ ಅವರು ಹೇಳಿ ಸರ್ಕಾರದಿಂದ ಹೊರಬಂದರೆ ನಾವೇನು ಮಾಡಲು ಸಾಧ್ಯ ಎಂದು ಅವರು ಪ್ರಶ್ನಿಸಿದರು.