'ತಾಜ್ ಮಹಲ್ ಧ್ವಂಸಕ್ಕೆ ಯೋಗಿಗೆ ಸಾಥ್ ನೀಡುತ್ತೇನೆ'

I will go with Yogi Adityanath to demolish Taj Mahal as it is Shiva temple: Azam Khan
Highlights

‘ತಾಜ್ ಮಹಲ್ ಧ್ವಂಸಕ್ಕೆ ಯೋಗಿಗೆ ಸಾಥ್ ನೀಡುತ್ತೇನೆ’

ಎಸ್ ಪಿ ಮುಖಂಡ ಆಜಂ ಖಾನ್ ಹೇಳಿಕೆ

ಶಿವಮಂದಿರ ನಿರ್ಮಾಣಕ್ಕೆ  ಸಾಥ್ ಕೊಡ್ತಾರಂತೆ

ಯೋಗಿ ಮುಂದಾಳತ್ವದಲ್ಲಿ ತಾಜ್ ಧ್ವಂಸ

ಲಕ್ನೋ(ಜೂ28): ವ್ಯಂಗ್ಯಭರಿತ ಹೇಳಿಕೆಗಳಿಂದಲೇ ಸುದ್ದಿಯಲ್ಲಿರುವ ಉತ್ತರ ಪ್ರದೇಶ ಮಾಜಿ ಸಚಿವ ಆಜಂ ಖಾನ್,  ಈಗ ಮತ್ತೊಂದು ಅಂತಹದ್ದೇ ಹೇಳಿಕೆ ನೀಡಿದ್ದಾರೆ. ವಿಶ್ವವಿಖ್ಯಾತ ತಾಜ್ ಮಹಲ್ ಬಗ್ಗೆ ಮಾತನಾಡಿರುವ ಆಜಂ ಖಾನ್, ಯೋಗಿ ಆದಿತ್ಯನಾಥ್ ಅವರು ತಾಜ್ ಮಹಲ್‌ನ್ನು ಶಿವ ಮಂದಿರ ಎಂಬ ಬಗ್ಗೆ ಹೇಳಿಕೆ ನೀಡಿದ್ದನ್ನು ಉಲ್ಲೇಖಿಸಿದ್ದಾರೆ.

 ‘ತಾಜ್ ಮಹಲ್ ನ್ನು ಶಿವ ಮಂದಿರ ಎನ್ನಲಾಗುತ್ತಿದೆ. ಯೋಗಿ ಆದಿತ್ಯನಾಥ್ ಹಾಗೂ ಬಿಜೆಪಿ ಮುಂದಾಳತ್ವ ವಹಿಸಿದರೆ ನಾನೂ ಅವರೊಂದಿಗೆ ತೆರಳಿ ತಾಜ್ ಮಹಲ್‌ನ್ನು ಧ್ವಂಸ ಮಾಡುವ ಕೆಲಸದಲ್ಲಿ ಜೊತೆಯಾಗುತ್ತೇನೆ’ ಎಂದು ಹೇಳಿದ್ದಾರೆ. 

ತಾಜ್ ಮಹಲ್ ಶಿವಮಂದಿರವಾಗಲು ನಾನು ಮುಸ್ಲಿಮನಾಗಿದ್ದರೂ 20,000 ಜನರೊಂದಿಗೆ ಯೋಗಿ ಆದಿತ್ಯನಾಥ್ ಅವರ ಜೊತೆ ತೆರಳಿ ತಾಜ್ ಮಹಲ್  ಧ್ವಂಸ ಮಾಡಲು ಸಿದ್ಧನಿದ್ದೇನೆ, ಈ ಕಾರ್ಯಕ್ಕೆ ಯೋಗಿ ಆದಿತ್ಯನಾಥ್ ಮುಂದಾಳತ್ವ ವಹಿಸಿಕೊಳ್ಳಬೇಕು ಎಂದು ಹೇಳಿದ್ದಾರೆ. 

ತಾಜ್ ಮಹಲ್ ಧ್ವಂಸ ಮಾಡುವುದಕ್ಕೆ ಮೊದಲ ಹೊಡೆತ ಯೋಗಿ ಆದಿತ್ಯನಾಥ್ ಅವರದ್ದಾಗಿರಬೇಕು, ಎರಡನೆಯದ್ದು ನನ್ನದಾಗಿರುತ್ತದೆ, ತಾಜ್ ಮಹಲ್ ಧ್ವಂಸ ಮಾಡಬೇಕು ಎಂದು ಆಜಂ ಖಾನ್ ಮಾಧ್ಯಮಗಳಿಗೆ ಹೇಳಿದ್ದಾರೆ. 
 

loader