"ಇಂದಿರಾ ಗಾಂಧಿಯವರು ನನಗೆ ಕೇವಲ ಐತಿಹಾಸಿಕ ವ್ಯಕ್ತಿಯಾಗಿರಲಿಲ್ಲ, ನಾವಿಬ್ಬರು ಒಂದೇ ಸೂರಿನಡಿ ಬದುಕಿ ಕಷ್ಟ ಸುಖಗಳನ್ನು ಹಂಚಿಕೊಂಡಿದ್ದೇವೆ, ನನಗೆ ಒಳ್ಳೆಯ ಅತ್ತೆಯಾಗಿದ್ದರು" ಎಂದು ಇಂದಿರಾ ಗಾಂಧಿಯವರ 100 ನೇ ಹುಟ್ಟುಹಬ್ಬದಂದು ಸೋನಿಯಾ ಗಾಂಧಿ ನೆನೆಪು ಮೆಲುಕು ಹಾಕಿದರು.
ನವದೆಹಲಿ (ನ.19): "ಇಂದಿರಾ ಗಾಂಧಿಯವರು ನನಗೆ ಕೇವಲ ಐತಿಹಾಸಿಕ ವ್ಯಕ್ತಿಯಾಗಿರಲಿಲ್ಲ, ನಾವಿಬ್ಬರು ಒಂದೇ ಸೂರಿನಡಿ ಬದುಕಿ ಕಷ್ಟ ಸುಖಗಳನ್ನು ಹಂಚಿಕೊಂಡಿದ್ದೇವೆ, ನನಗೆ ಒಳ್ಳೆಯ ಅತ್ತೆಯಾಗಿದ್ದರು" ಎಂದು ಇಂದಿರಾ ಗಾಂಧಿಯವರ 100 ನೇ ಹುಟ್ಟುಹಬ್ಬದಂದು ಸೋನಿಯಾ ಗಾಂಧಿ ನೆನೆಪು ಮೆಲುಕು ಹಾಕಿದರು.
ನಾನು ಅವರಿಂದ ಭಾರತದ ಸಂಸ್ಕೃತಿ, ಮೌಲ್ಯಗಳ ಬಗ್ಗೆ ತಿಳಿದುಕೊಂಡೆ. ನನ್ನ ಮೊದಲ ರಾಜಕೀಯ ಪಾಠಗಳನ್ನು ಅವರಿಂದ ಕಲಿತುಕೊಂಡೆ. ಇದುವರೆಗೂ ದೇಶ ಕಾಣದಂತ ಅಸಾಧಾರಣ ಮಹಿಳೆ ಅವರಾಗಿದ್ದರು. ಎಂದು ಭಾಷಣ ಮಾಡುವಾಗ ಸೋನಿಯಾ ಗಾಂಧಿ ಭಾವುಕರಾದರು.
ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಇತಿಹಾಸವನ್ನು ತೆಗೆದು ನೋಡಿದರೆ ಸಂದಿಗ್ಧ ಪರಿಸ್ಥಿತಿ ನಿಭಾಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಹೇಳಿದರು.
