ನೋ ಪ್ರಾಬ್ಲಮ್, ಎಲ್ಲವೂ ಸುಸೂತ್ರ

I hope the problem will be solved soon Minister RV Deshpande Says
Highlights

  • ಸಾಲ ಮನ್ನಾ ವಿಚಾರದಲ್ಲಿ ಮುಖ್ಯಮಂತ್ರಿಗಳಿಂದ ಶೀಘ್ರ ನಿರ್ಧಾರ 
  • ರಾಜ್ಯದ ಪ್ರತಿಯೊಂದು ಜಿಲ್ಲಾಧಿಕಾರಿಗಳಿಗೆ ಪರಿಹಾರದ ಹಣವಾಗಿ 5 ಕೋಟಿ ಮೀಸಲಿಟ್ಟಿದ್ದೇವೆ.

ಮೈಸೂರು[ಜೂ.18]: ಸಮ್ಮಿಶ್ರ ಸರ್ಕಾರದಲ್ಲಿ ಸಮನ್ವಯಕ್ಕೆ ಯಾವುದೇ ಕೊರತೆಯಿಲ್ಲ ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದರು.

ಮೈಸೂರಿನಲ್ಲಿ ಸುತ್ತೂರು ಶ್ರೀಗಳ ಆಶೀರ್ವಾದ ಪಡೆದ ಬಳಿಕ ಮಾತನಾಡಿದ ಅವರು,  ಸಚಿವ ಜಾರ್ಜ್, ಹಿರಿಯ ಶಾಸಕ ರಾಮಲಿಂಗ ರೆಡ್ಡಿ ಬೇರೆ ಕಾರಣಗಳಿಂದ ನಗರಾಭಿವೃದ್ಧಿ ಸಚಿವರ ಸಭೆಗೆ ಹೋಗಿಲ್ಲ. ಈ ವಿಚಾರದಲ್ಲಿ ಮಾಧ್ಯಮಗಳು ಊಹಾಪೋಹಗಳಿಗೆ ಹೆಚ್ಚು ಮಹತ್ವ ನೀಡಬಾರದು ಎಂದು ಗೊಂದಲಗಳಿಗೆ ತೆರೆ ಎಳೆದರು. 


ಸಾಲ ಮನ್ನಾ ವಿಚಾರಕ್ಕೆ ಸಮಯ ಬೇಕಾಗುತ್ತದೆ. ಎಲ್ಲದಕ್ಕೂ ಸಮಯಾವಕಾಶ ಬೇಕಿದೆ. ಸಾಲ ಮನ್ನಾ ವಿಚಾರದಲ್ಲಿ ಮುಖ್ಯಮಂತ್ರಿಗಳು ಶೀಘ್ರ ನಿರ್ಧಾರ ಕೈಗೊಳ್ಳಲಿದ್ದಾರೆ. ಸಾಲ ಮನ್ನಾ ಶೀಘ್ರದಲ್ಲಿ ಆಗುವ ಯೋಜನೆಯಲ್ಲ. ಇದಕ್ಕೆ ಕಾಲಾವಕಾಶ ಬೇಕು. ಹೊಸ ಬಜೆಟ್'ಗೆ ಸಿದ್ದರಾಮಯ್ಯ ಅವರ ಅಭಿಪ್ರಾಯವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಕೇಳಿದ್ದಾರೆ. ಈಗಂತ  ಇಬ್ಬರ ನಡುವೆ ಅಪಸ್ವರ ಇದೆ ಎಂದು ಅರ್ಥವಲ್ಲ.  ಅತೀ ಶೀಘ್ರದಲ್ಲಿಯೇ ಎಲ್ಲ ಸಮಸ್ಯೆಗಳು ಪರಿಹಾರವಾಗಲಿದೆ ಎಂದು ಸಚಿವರು ಭರವಸೆ ನೀಡಿದರು.

ಹಲವು ಕಡೆ ಉತ್ತಮ ಮಳೆ
ನಾನು ಕಂದಾಯ ಸಚಿವನಾಗಿ ಹಲವು ಕಡೆ ಪರಿಶೀಲನೆ ಮಾಡಿದ್ದಾನೆ. ಉತ್ತರ ಕರ್ನಾಟಕ ಭಾಗದ ಪ್ರವಾಸ ಮುಗಿಸಿ ಬಂದಿದ್ದೇನೆ. ಬೆಂಗಳೂರು ಗ್ರಾಮೀಣ ಹೊರತುಪಡಿಸಿದರೆ  ರಾಜ್ಯದಲ್ಲಿ ಬಹುತೇಕ ಎಲ್ಲಾ ಕಡೆ ಉತ್ತಮ ಮಳೆಯಾಗಿದೆ. ರಾಜ್ಯದ ಪ್ರತಿಯೊಂದು ಜಿಲ್ಲಾಧಿಕಾರಿಗಳಿಗೆ ಪರಿಹಾರದ ಹಣವಾಗಿ 5 ಕೋಟಿ ಮೀಸಲಿಟ್ಟಿದ್ದೇವೆ. ಹಣಕ್ಕೆ ಯಾವುದೇ ರೀತಿಯ ತೊಂದರೆ ಇಲ್ಲ. ಜಿಲ್ಲಾಧಿಕಾರಿಗಳು ವಾರದಲ್ಲಿ ಒಮ್ಮೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಸಭೆ ಮಾಡಬೇಕು. ಪರಿಹಾರ ಕಾರ್ಯ ತಕ್ಷಣ ನೀಡುವಂತ ವ್ಯವಸ್ಥೆಯಾಗಬೇಕು ಎಂದು ಆದೇಶ ನೀಡಿದರು.

loader