ಮುಂಬೈ (ಸೆ.05): ಸರ್ಜಿಕಲ್ ದಾಳಿಯ ನಂತರ ಪಾಕ್ ನಟರನ್ನು ಭಾರತದಲ್ಲಿ ನಿಷೇಧಿಸಿರುವ ವಿವಾದದ ಹಿನ್ನೆಲೆಯಲ್ಲಿ ನಟಿ ಹೇಮಾಮಾಲಿನಿ ಬಾಲಿವುಡ್ ನಲ್ಲಿ ಪಾಕ್ ನಟರನ್ನು ಬೆಂಬಲಿಸುವುದಿಲ್ಲ ಎಂದು ತೀಕ್ಷ್ಣವಾಗಿ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಮ್ಮ ದೇಶವನ್ನು ಕಾಯುತ್ತಿರುವ ಸೈನಿಕರಿಗೆ ನಾನು ಯಾವಾಗಲೂ ಬೆಂಬಲಿಸುತ್ತೇನೆ. ಪಾಕ್ ಕಲಾವಿದರು ಬಾಲಿವುಡ್ ನಲ್ಲಿ ಕೆಲಸ ಮಾಡುವುದಕ್ಕೆ ನಾನು ಬೆಂಬಲಿಸುವುದಿಲ್ಲ ಎಂದು ಹೇಮಾಮಾಲಿನಿ ಹೇಳಿದ್ದಾರೆ.

ನಮ್ಮ ಸೇನೆ ಒಳ್ಳೆಯ ಕೆಲಸ ಮಾಡಿದೆ. ಭಾರತೀಯರೆಲ್ಲಾ ಸರ್ಜಿಕಲ್ ದಾಳಿ ಬಗ್ಗೆ ಹೆಮ್ಮೆಪಡಬೇಕು. ಸರ್ಜಿಕಲ್ ದಾಳಿ ಬಗ್ಗೆ ಅನಗತ್ಯವಾಗಿ ಸಾಕ್ಷಿ ಕೇಳಬಾರದು ಎಂದು ಹೇಮಾಮಾಲಿನಿ ಹೇಳಿದ್ದಾರೆ.