ಬೆಂಗಳೂರು[ಜು. 15]  ಮಾಧ್ಯಮಗಳ ಕಣ್ಣು ತಪ್ಪಿಸಲು ಬನ್ನೆರುಘಟ್ಟ ರಸ್ತೆ ಬಳಿ ಕಾರ್ಯಕರ್ತರ ಮನೆಗೆ ರಾಜೀನಾಮೆ ಕೊಟ್ಟ ಶಾಸಕ ರಾಮಲಿಂಗಾರೆಡ್ಡಿ ಕಾರ್ಯಕರ್ತರ ಮನೆಗೆ ತೆರಳಿದ್ದಾರೆ. ತೆರಳುವಾಗ ರೆಡ್ಡಿ ತಮ್ಮ ಕಾರನ್ನು ಪದೇ ಪದೇ ನಿಲ್ಲಿಸಿ ತೆರಳಿದರು.

ಕೋರಮಂಗಲ ಆರ್.ಜೆ‌.ಎಸ್ ಡಿಗ್ರಿ ಕಾಲೇಜ್ ಬಳಿ ಕಾರು ಬದಲಿಸಿ ತೆರಳಿದ ರಾಮಲಿಂಗಾರೆಡ್ಡಿ ತೆರಳಿದರು. ರೆಡ್ಡಿ ಹಿಂದಿನ ಮೂರು ಕಾರುಗಳು ಮೂರು ದಿಕ್ಕಿಗೆ  ತೆರಳಿ ಸಿನಿಮಾದ ಅನುಭವ ನೀಡಿತ್ತು. ಮಾಧ್ಯಮಗಳ ಕಣ್ಣು ತಪ್ಪಿಸಲು ಮೂರು ದಿಕ್ಕಿಗೂ ಒಂದೊಂದು ಗಾಡಿ ತೆರಳುವಂತೆ ರೆಡ್ಡಿ ಸೂಚಿಸಿದರು.

ಮಾಧ್ಯಮಗಳ ಕಣ್ತಪ್ಪಿಸಲು ಇನೋವಾ ಕಾರಿಂದ ಇಳಿದು ವೈಟ್ ಕಲರ್ ರೇಂಜ್ ರೋವರ್ ಕಾರು ಹತ್ತಿದ ರಾಮಲಿಂಗಾರೆಡ್ಡಿ ತೆರಳಿದರು. ಕೆಲವರು ಅನಗತ್ಯವಾಗಿ ನಾನು ಮುಂಬೈಗೆ ಹೋಗ್ತಾ ಇದ್ದೇನೆ ಎಂದು ಸತ್ಯಕ್ಕೆ ದೂರವಾದ ಸುದ್ದಿ ಹಬ್ಬಿಸುತ್ತಿದ್ದಾರೆ.ನಾನು ಬೆಂಗಳೂರಲ್ಲೇ ಇದ್ದೇನೆ. ಮುಂಬೈಗೆ ಹೋಗುತ್ತಿದ್ದೇನೆ ಎಂಬುದು ಕಪೋಲಕಲ್ಪಿತ. ಮಾಧ್ಯಮ ಸ್ನೇಹಿತರು ಯಾರೋ ಹಬ್ಬಿಸುವ ಗಾಳಿಸುದ್ದಿಗೆ ಕಿವಿಗೊಡಬಾರದು ಎಂದು ರೆಡ್ಡಿ ಮನವಿ ಮಾಡಿಕೊಂಡರು.