ನನ್ನ ಕ್ಷೇತ್ರಕ್ಕೆ ನಾನು ಆಕಾಂಕ್ಷಿ ಅಲ್ಲ, ನಾನೇ ಬಾಸು

First Published 2, Feb 2018, 8:56 PM IST
I am Boss Not Aspirant
Highlights

ನಟಿ ರಮ್ಯಾಗಾದ್ರೂ ಕೊಡ್ಲಿ, ಎಸ್.ಎಂ. ಕೃಷ್ಣಾಗಾದರೂ ಕೊಡಲಿ, ಮಹೇಶ್ ಚಂದ್ರ ಅವರಿಗಾದರೂ ನನಗಾದರೂ ಕೊಡಲಿ ಕಾಂಗ್ರೆಸ್ ಪಕ್ಷದ ಪರವಾಗಿ ಕೆಲಸ ಮಾಡ್ತೇನೆ

ಮಂಡ್ಯ(ಫೆ.02): ನನ್ನ ಕ್ಷೇತ್ರಕ್ಕೆ ನಾನು ಆಕಾಂಕ್ಷಿ ಅಲ್ಲ ನಾನೇ ಬಾಸು ಎಂದು ಶಾಸಕ ಅಂಬರೀಶ್ ಹೇಳಿದರು.

ಮದ್ದೂರಿನಲ್ಲಿ ಮಾತನಾಡಿದ ಅವರು, ಮಂಡ್ಯ ವಿಧಾನಸಭಾ ಕ್ಷೇತ್ರಕ್ಕೆ ನಾನೇ ಅಭ್ಯರ್ಥಿ. ಚುನಾವಣೆ ಬರ್ತಾ ಇದೆ, ಈಗ ನಾನು ಏಕೆ ಬೇರೆ ಪಕ್ಷಕ್ಕೆ ಈಗ ಹೋಗ್ಲಿ. ಕಾಂಗ್ರೆಸ್ ಪಕ್ಷದಲ್ಲಿ ನಮ್ಮನ್ನು ಬೇಕಾದರೆ ಬಳಸಿಕೊಳ್ಳಬೇಕು. ಮಂಡ್ಯದಲ್ಲಿ ಯಾರಿಗಾದರೂ ಟಿಕೆಟ್ ಕೊಡಲಿ ಕೆಲಸ ಮಾಡಲಿದ್ದೇವೆ. ನಟಿ ರಮ್ಯಾಗಾದ್ರೂ ಕೊಡ್ಲಿ, ಎಸ್.ಎಂ. ಕೃಷ್ಣಾಗಾದರೂ ಕೊಡಲಿ, ಮಹೇಶ್ ಚಂದ್ರ ಅವರಿಗಾದರೂ ನನಗಾದರೂ ಕೊಡಲಿ ಕಾಂಗ್ರೆಸ್ ಪಕ್ಷದ ಪರವಾಗಿ ಕೆಲಸ ಮಾಡ್ತೇನೆ ಎಂದು ಹೇಳಿದರು.

ಶೇ. 100 ರಷ್ಟು ಎಲ್ಲರೂ ಕಾಂಗ್ರೆಸ್ ಪಕ್ಷದ ಪರವಾಗಿ ಕೆಲಸ ಮಾಡಬೇಕು. ಕ್ಷೇತ್ರಕ್ಕೆ ಭೇಟಿ ಕೊಡದಿದ್ದರೂ ಸಹ  ಕ್ಷೇತ್ರದಲ್ಲಿ ಕೆಲಸ ಆಗುವುದು ಮುಖ್ಯ. ರಾಜ್ಯ ಸಚಿವ ಸಂಪುಟದಲ್ಲಿ ಆಗಬೇಕಾದ ಕೆಲಸವನ್ನು ಮಾಡಿಸುತ್ತೇನೆ. ಅದು ಮಂಡ್ಯ ಆಗಲಿ, ಮದ್ದೂರು ಆಗಲಿ, ಇಡೀ ಮಂಡ್ಯ ಜಿಲ್ಲೆಗೇ ಕೆಲಸ ಮಾಡಿಸುತ್ತೇನೆ. ಮಂಡ್ಯದಲ್ಲಿ ನೀರಾವರಿ ಯೋಜನೆಗಳನ್ನು ಸಹ ನಾನು ಮಾಡಿಸಿದ್ದೇನೆ' ಎಂದರು.

 

loader