ಹೈದರಾಬಾದ್[ಜೂ.15]: ಹೈದರಾಬಾದ್ ನಲ್ಲಿ ಯುವಕನೊಬ್ಬ ತನ್ನ ಪ್ರೇಯಸಿಯನ್ನು ಗುರಾಯಿಸಿದನೆಂದು, ಸಾಯಿ ಹೆಸರಿನ 23 ವರ್ಷದ ಯುವಕನನ್ನು ಥಳಿಸಿದ್ದಾನೆ. ಗಂಭೀರವಾಗಿ ಗಾಯಗೊಂಡ ಯುವಕನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಚಿಕಿತ್ಸೆಗೆ ಸ್ಪಂದಿಸದ ಯುವಕ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.

ಏನಿದು ಪ್ರಕರಣ?

ಜೂನ್ 13ರಂದು ಬಾಲಕೃಷ್ಣ ತನ್ನ ಗೆಳೆಯರಾದ ಸಾಯಿ ಹಾಗೂ ಮಹೇಶ್ ಜೊತೆ ಹುಟ್ಟುಹಬ್ಬ ಆಚರಿಸಲು ಹೊರಹೋಗಿದ್ದ. ಮೂವರೂ ಸೇರಿ ಪಾರ್ಟಿ ನಡೆಸಿ, ಭರ್ಜರಿಯಾಗಿ ತಿಂದು, ಕುಡಿದು ಮಜಾ ಮಾಡಿದ್ದಾರೆ. ಮನೆಗೆ ಮರಳುತ್ತಿದ್ದ ವೇಳೆ ನೆಕ್ಲೆಸ್ ರೋಡ್ ನಲ್ಲಿ ಪ್ರೇಮಿಗಳಿಬ್ಬರು ನಿಂತಿರುವುದನ್ನು ಕಂಡು, ಮೂವರೂ ಗುರಾಯಿಸಿದ್ದಾರೆ. ಇದರಿಂದ ಕೋಪಗೊಂಡ ಹುಡುಗಿಯ ಬಾಯ್ ಫ್ರೆಂಡ್ ಜುನೈದ್ ಮೂವರಿಗೂ ಅವಾಚ್ಯ ಪದಗಳಿಂದ ಬೈಯ್ಯಲಾರಂಭಿಸಿದ್ದಾನೆ.

ಇದಾದ ಬಳಿಕ ಈ ಜಗಳ ತಾರಕಕ್ಕೇರಿದೆ. ನೋಡ ನೊಡುತ್ತಿದ್ದಂತೆಯೇ ಕೋಗೊಂಡ ಜುನೈದ್ ಸಾಯಿ ಮೇಲೆ ಕಲ್ಲುಗಳನ್ನೆಸೆದಿದ್ದಾನೆ. ಇದರಿಂದ ಆತನ ತಲೆಗೆ ಗಂಭೀರ ಗಾಯವಾಗಿದೆ. ಘಟನೆಯ ಮಾಹಿತಿ ಪಡೆದ ಪೊಲೀಸರು ಆ ಕೂಡಲೇ ಸ್ಥಳಕ್ಕಾಗಮಿಸಿ, ಸಾಯಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ ಹಾಗೂ ಆರೋಪಿ ಜುನೈದ್ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ. 

ಇತ್ತ ಆಸ್ಪತ್ರೆಗೆ ದಾಖಲಿಸಲಾಗಿದ್ದ ಸಾಯಿ ಚಿಕಿತ್ಸೆ ನೀಡುತ್ತಿದ್ದಾಗಲೇ ಕೊನೆಯುಸಿರೆಳೆದಿದ್ದಾನೆ. ಇನ್ನು ಬಂಧಿತ ಆರೋಪಿ ಜುನೈದ್ ವಿರುದ್ಧ ಈ ಮೊದಲೇ 16 ಪ್ರಕರಣಗಳು ದಾಖಲಾಗಿವೆ.