Asianet Suvarna News Asianet Suvarna News

ಮಾನವೀಯತೆ ಮೆರೆದ ಆಟೋ ಡ್ರೈವರ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್

ಇಂದಿನ ದಿನಗಳಲ್ಲಿ ವಿಶೇಷವಾಗಿ ನಗರ ಪ್ರದೇಶಗಳಲ್ಲಿ ಕಷ್ಟದ ಸಮಯದಲ್ಲಿ ಅಪರಿಚಿತರಿಗೆ ನೆರವಾಗುವುದು ಬಹಳ ಅಪರೂಪ. ಅದರಲ್ಲೂ ಹಣಕಾಸಿನ ವಿಷಯದಲ್ಲಂತೂ ಯಾರೂ ಯಾರನ್ನು ನಂಬಲ್ಲ. ಆದರೆ ಈ ಪೃವೃತ್ತಿಗೆ ವಿರುದ್ಧವಾಗಿ ಹೈದರಬಾದಿನ ಆಟೋ ಚಾಲಕರೊಬ್ಬರು ನಡೆದುಕೊಂಡಿದ್ದು, ಮಾನವೀಯತೆ ಇನ್ನೂ ಬಾಕಿಯಿದೆ ಎಂದು  ಸಾಬೀತುಪಡಿಸಿದ್ದಾರೆ.

Hyderabad Auto Driver Random Act Of Kindness Is Melting Hearts On Facebook

ವಾರಿಜಶ್ರೀ ವೇಣುಗೋಪಾಲ್ ಎಂಬ ಯುವತಿ ವೀಸಾ ಸಂದರ್ಶನಕ್ಕಾಗಿ ಹೈದರಾಬಾದಿಗೆ ಬಂದಿದ್ದು, ಆಕೆ ರೂ.5000 ಶುಲ್ಕವನ್ನು ಪಾವತಿಸಬೇಕಾಗಿತ್ತು. ಆದರೆ ಆಕೆಯ ಬಳೆ ಕೇವಲ ರೂ.2000 ಮಾತ್ರ ಇತ್ತು. ಆದರೆ ಹತ್ತಿರದ ಏಟಿಎಮ್’ಗಳಲ್ಲಿ ದುಡ್ಡು ಇರಲಿಲ್ಲ. ಆಟೋ ಹಿಡಿದು 10-15 ಏಟಿಎಮ್’ಗಳಿಗೂ ಸುತ್ತಾಡಿದರೂ ಪ್ರಯೋಜನವಾಗಲಿಲ್ಲ. ಅಂಗಡಿಯವರಿಗೆ ಕಾರ್ಡ್ ಸ್ವೈಪ್ ಮಾಡಿ ನಗದನ್ನು ಕೊಡುವಂತೆ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಲಿಲ್ಲ. ಆಗ ಆಕೆಯ ಸಹಾಯಕ್ಕಾಗಿ ಬಂದವರು ಆಕೆಯ ಆಟೋ ಚಾಲಕ.  ಹೆಣ್ಮಗಳು ಹಣಕ್ಕಾಗಿ ಪರದಾಡುತ್ತಿರುವ ಕಷ್ಟವನ್ನು ಅರ್ಥಮಾಡಿಕೊಂಡ ಆಟೋ ಚಾಲಕ ಬಾಬ ಬವರು ತಮ್ಮ ಬಳಿ ಜಮೆಯಾಗಿದ್ದ ರೂ.3000ವನ್ನು ಆಕೆಗೆ ಕೊಟ್ಟಿದ್ದಾರೆ.

ಮೇಡಂ, ನೀವಿದನ್ನು ಸದ್ಯಕ್ಕೆ ಇಟ್ಟುಕೊಳ್ಳಿ, ಸಂದರ್ಶನ ಮುಗಿದ ಬಳಿಕ ಹಿಂತಿರುಗಿಸಿ ಪರ್ವಾಗಿಲ್ಲವೆಂದು ಬಾಬ ಹೇಳಿದ್ದಾರೆ. ಈ ವಿಷಯವನ್ನು ಫೇಸ್’ಬುಕ್’ನಲ್ಲಿ ಹಂಚಿಕೊಂಡಿರುವ ವಾರಿಜಶ್ರೀ ಆಟೋ ಚಾಲಕ ಅಪರಿಚಿತರೊಬ್ಬರಿಗೆ ಸಹಾಯ ಮಾಡಿರುವುದನ್ನು ಭಾವುಕಳಾಗಿ ಸ್ಮರಿಸಿಕೊಂಡಿದ್ದಾಳೆ. ಮಾನವೀಯತೆಯು ಎಲ್ಲಾ ಧರ್ಮಗಳಿಗಿಂತ ಮಿಗಿಲು ಎಂದು ನೆನಪಿಸಿದ್ದಕ್ಕೆ ವಾರಿಜಶ್ರೀ ಬಾಬಗೆ ಧನ್ಯವಾದ ಅರ್ಪಿಸಿದ್ದಾಳೆ.

ಏ.11 ಕ್ಕೆ ಹಾಕಿರುವ  ಪೋಸ್ಟ್  ಕೆಲವು ದಿನಗಳಲ್ಲೇ 4900 ಶೇರ್ ಆಗಿದ್ದು, 21000 ಕ್ಕೂ ಹೆಚ್ಚು ಪ್ರತಿಕ್ರಿಯೆಗಳು ಬಂದಿವೆ.

 

Follow Us:
Download App:
  • android
  • ios