, ತನ್ವೀರ್ ಸೇಠ್ ಅವರು ಮೊಬೈಲ್‌ನಲ್ಲಿ ಚಿತ್ರ ನೋಡಿದ್ದು ತಪ್ಪಲ್ಲ. ಅವರು ನೋಡಿದ್ದರಲ್ಲಿ ಅಶ್ಲೀಲವೇನೂ ಇಲ್ಲ. ಮೆಸೇಜ್ ಬಂದಾಗ ಎಲ್ಲರೂ ಮೊಬೈಲ್ ನೋಡುವುದು ಸಾಮಾನ್ಯ.
ಬಾಗಲಕೋಟೆ(ಸೆ.19): ಇಂದಿನ ದಿನಗಳಲ್ಲಿ ಯಾರೂ ಶ್ರೀರಾಮಚಂದ್ರ, ಸತ್ಯ ಹರಿಶ್ಚಂದ್ರರಂತಿಲ್ಲ. ತನ್ವೀರ್ ಸೇಠ್ ಅಶ್ಲೀಲ ಚಿತ್ರ ನೋಡಿದ್ದು ತಪ್ಪಲ್ಲ ಎಂದು ಅಬಕಾರಿ ಸಚಿವ ಎಚ್.ವೈ. ಮೇಟಿ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ತನ್ವೀರ್ ಸೇಠ್ ಅವರು ಮೊಬೈಲ್ನಲ್ಲಿ ಚಿತ್ರ ನೋಡಿದ್ದು ತಪ್ಪಲ್ಲ. ಅವರು ನೋಡಿದ್ದರಲ್ಲಿ ಅಶ್ಲೀಲವೇನೂ ಇಲ್ಲ. ಮೆಸೇಜ್ ಬಂದಾಗ ಎಲ್ಲರೂ ಮೊಬೈಲ್ ನೋಡುವುದು ಸಾಮಾನ್ಯ. ಹಾಗೇಯೇ ಅವರೂ ನೋಡಿದ್ದಾರೆ. ಅದನ್ನು ಮಾಧ್ಯಮದವರು ದೊಡ್ಡದು ಮಾಡುತ್ತಿದ್ದಾರೆ. ತನ್ವೀರ್ ಸೇಠ್ ನಿರಪರಾಧಿ ಎಂದರು.
