ದುರ್ನಡತೆ, ಅಶಿಸ್ತು ನಿರ್ಲಕ್ಷತನದ ಹಿನ್ನೆಲೆಯಲ್ಲಿ ಸುಭಾಷ್’ನನ್ನು ಅಮಾನತು ಮಾಡಲಾಗಿದೆ.

ಬಾಗಲಕೋಟೆ (ಡಿ.30): ಎಚ್​.ವೈ. ಮೇಟಿ ರಾಸಲೀಲೆ ಪ್ರಕರಣದ ಪ್ರಮುಖ ಆರೋಪಿ ಪೇದೆ ಸುಭಾಷ್​’ನನ್ನು ಅಮಾನತುಗೊಳಿಸಿ ಜಿಲ್ಲಾ ಪೊಲೀಸ್​​ ವರಿಷ್ಠಾಧಿಕಾರಿ ಆದೇಶ ಹೊರಡಿಸಿದ್ದಾರೆ.

ತನಗೆ ಜೀವ ಬೆದರಿಕೆ ಇದೆಯೆಂದು, ಡಿಎಆರ್ ಪೇದೆ ಸುಭಾಷ್ ಮುಗಳಖೋಡ್ ಮತ್ತು ಮೂವರು ಸಹಚರರ ವಿರುದ್ಧ ವಿಜಯಲಕ್ಷ್ಮಿ, ಬಾಗಲಕೋಟೆ ಎಸ್​.ಪಿ’ಗೆ ಕಳೆದ ಡಿ.17ರಂದು ದೂರು ನೀಡಿದ್ದರು.

 ಕೊಲೆ ಬೆದರಿಕೆ ಹಾಕಿರುವವರು ಮಾಜಿ ಸಚಿವ ಮೇಟಿ ವಿರುದ್ಧ ಆರೋಪಿಸುವಂತೆ ಒತ್ತಾಯಿಸಿದ್ದರು ಎಂದು ವಿಜಯಲಕ್ಷ್ಮಿ ಬಹಿರಂಗಪಡಿಸದ್ದಳು.

ದುರ್ನಡತೆ, ಅಶಿಸ್ತು ನಿರ್ಲಕ್ಷತನದ ಹಿನ್ನೆಲೆಯಲ್ಲಿ ಸುಭಾಷ್’ನನ್ನು ಅಮಾನತು ಮಾಡಲಾಗಿದೆ.

ಪೊಲೀಸ್ ಮಹಾನಿರ್ದೇಶ ಓಂಪ್ರಕಾಶ್ ಆದೇಶ ಮೆರೆಗೆ ಮಾಜಿ ಸಚಿವ ಎಚ್.ವೈ.ಮೇಟಿ ಪ್ರಕರಣದ ಸಂತ್ರಸ್ತೆ ವಿಜಯಲಕ್ಷ್ಮಿ ನೀಡಿದ್ದ ದೂರನ್ನು ಸಿಐಡಿಗೆ ವರ್ಗಾಯಿಸಲಾಗಿದೆ.