ಅಕ್ಕ ಮದುವೆಗೆ ರಿಜೆಕ್ಟ್ ಮಾಡಿದ್ದಕ್ಕೆ ತಂಗಿಯನ್ನು ಪ್ರೀತಿಸಿ ಹಲ್ಲೆ ಮಾಡಿದ ಪಾಪಿ ಪತಿ

Husband Beats his wife
Highlights

ಅಕ್ಕ ಮದುವೆಗೆ ರಿಜೆಕ್ಟ್ ಮಾಡಿದಕ್ಕೆ ತಂಗಿಯನ್ನು ಪ್ರೀತಿಸಿ ಹಲ್ಲೆ ಮಾಡಿದ ಘಟನೆ ಬೆಂಗಳೂರಿನ ಪೀಣ್ಯಾದಲ್ಲಿ ನಡೆದಿದೆ.

ಬೆಂಗಳೂರು (ಜ.23): ಅಕ್ಕ ಮದುವೆಗೆ ರಿಜೆಕ್ಟ್ ಮಾಡಿದಕ್ಕೆ ತಂಗಿಯನ್ನು ಪ್ರೀತಿಸಿ ಹಲ್ಲೆ ಮಾಡಿದ ಘಟನೆ ಬೆಂಗಳೂರಿನ ಪೀಣ್ಯಾದಲ್ಲಿ ನಡೆದಿದೆ.

ಪಾಪಿ ಪತಿ ಚಂದ್ರಶೇಖರ್ ಹೆಂಡತಿ ಮೇಲೆ ಹಲ್ಲೆ ಮಾಡಿ ಹೆಂಡತಿ ಕೈ ಕಾಲು ಮುರಿದಿದ್ದಾನೆ.  ಚಂದ್ರಶೇಖರ್ ಬಿಂದುಶ್ರೀಯನ್ನು  8 ತಿಂಗಳ ಹಿಂದೆ ಲವ್ ಮಾಡಿ ಮದುವೆ ಆಗಿದ್ದ.  ಮದುವೆಯಾದ 2 ದಿನದಲ್ಲಿ ಚಂದ್ರಶೇಖರ್ ನಿಜ ರೂಪ ಗೊತ್ತಾಗಿತ್ತು.  ಚಂದ್ರಶೇಖರ್ ನಾಲ್ಕು ವರ್ಷದ ಹಿಂದೆ ಬಿಂದುಶ್ರಿ ಅಕ್ಕನನ್ನು ನೋಡುವುದಕ್ಕೆ ಹೋಗಿದ್ದ. ಅವತ್ತು ಅಕ್ಕ,  ನೀನು ಬೇಡ ಅಂತಾ ಚಂದ್ರಶೇಖರ್'ನನ್ನು ರಿಜೆಕ್ಟ್ ಮಾಡಿದ್ದಳು.  ಆಗ ಬಿಂದುಶ್ರಿಗೆ ಇನ್ನು 14 ವರ್ಷವಾಗಿತ್ತು. ಇದನ್ನೇ ದ್ವೇಷವಾಗಿ ಮನಸ್ಸಿನಲ್ಲಿಟ್ಟುಕೊಂಡ ದುಷ್ಟ ಚಂದ್ರಶೇಖರ್ ನಾಲ್ಕು ವರ್ಷ ಕಾದು ಬಿಂದುಶ್ರೀಗೆ 18 ವರ್ಷ ಆಗುವವರೆಗೂ ಕಾದಿದ್ದ.  ಬಳಿಕ ಲವ್ ಮಾಡಿ ಓಡಿಸಿಕೊಂಡು ಹೋಗಿ ಮದುವೆಯಾಗಿದ್ದ.  ಆದರೀಗ ನಿನ್ನಕ್ಕ ಅವತ್ತು ನನ್ನನ್ನು ರಿಜೆಕ್ಟ್ ಮಾಡಿದ್ಲು ಅಂತಾ ದಿನಾ ಹೆಂಡತಿಗೆ  ಹೊಡೆಯುತ್ತಿದ್ದಾನೆ.  ಹೆಂಡತಿ ಕುತ್ತಿಗೆ ಮೇಲೆ ಕಾಲಿಟ್ಟು ಕೈ ಮುರಿದಿದ್ದಾನೆ. ಗಾಯಗೊಂಡಿರುವ ಬಿಂದುಶ್ರೀ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೀಣ್ಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

loader