ಹಂಗರಿ[ಫೆ.14]: ವಿಶ್ವದಲ್ಲೇ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಭಾರತ ಮತ್ತು ನೆರೆಯ ಚೀನಾದಲ್ಲಿ ಜನನ ಪ್ರಮಾಣ ಇಳಿಕೆಗಾಗಿ ಹಲವು ಕಾರ್ಯಕ್ರಮ ಹಮ್ಮಿಕೊಂಡಿರುವುದು ಗೊತ್ತು. ಆದರೆ, ಹಂಗರಿ ದೇಶದ ಪ್ರಧಾನಿ ವಿಕ್ಟೋರ್‌ ಆರ್ಬನ್‌ ಅವರು, 4 ಅಥವಾ 4ಕ್ಕಿಂತ ಹೆಚ್ಚು ಮಕ್ಕಳನ್ನು ಹೆರುವ ಕುಟುಂಬಗಳಿಗೆ ತೆರಿಗೆ ವಿನಾಯ್ತಿ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

ಹಂಗರಿ ತನ್ನ ಭವಿಷ್ಯಕ್ಕಾಗಿ ವಲಸಿಗರ ಮೇಲೆ ಅವಲಂಬನೆಯಾಗದೇ, ತನ್ನ ಪ್ರಜೆಗಳನ್ನೇ ಅವಲಂಬಿಸುವಂತೆ ಕ್ರಮ ವಹಿಸಲು ಇರುವ ಮಾರ್ಗ ಇದೊಂದೇ ಎಂದು ಅವರು ಪ್ರತಿಪಾದಿಸಿದ್ದಾರೆ.