ತಮ್ಮ ವೆಬ್ ಪೇಜ್ ನಲ್ಲಿ ವಿಡಿಯೋ ಒಂದನ್ನು ಅಪ್ ಲೋಡ್ ಮಾಡಿರುವ ವೆಂಕಟ್ ಹಂಪಿಗೆ ಕುಟುಂಬದವರು ಪ್ರವಾಸ ಮಾಡಿದರೆ ಏನು ಕಷ್ಟ ಅನುಭವಿಸಬೇಕಾಗುತ್ತದೆ ಎಂದು ಹೇಳಿಕೊಂಡಿದ್ದಾರೆ. ಆದರೆ ಡಿಸಿಎಂ ಮತ್ತು ಗೃಹ ಖಾತೆ ಹೊಂದಿರುವ ಪರಮೇಶ್ವರ ಅವರನ್ನು ಯಾಕೆ ಪ್ರಶ್ನೆ ಮಾಡಿದ್ದಾರೆ ಎನ್ನುವುದು ಗೊತ್ತಿಲ್ಲ. ಪ್ರವಾಸೋದ್ಯಮ ಸಚಿವ  ಸಾ.ರಾ.ಮಹೇಶ್ ಅವರನ್ನು ಮರೆತುಬಿಟ್ಟರೆನೋ!

ಆದರೆ ವೆಂಕಟ್ ಉಲ್ಲೇಖ ಮಾಡಿರುವ ವಿಚಾರ ನಿಜಕ್ಕೂ ಸರಕಾರದ ಗಮನ ಸೆಳೆಯುವಂಥದ್ದೆ. ಪ್ರವಾಸಕ್ಕೆಂದು ಹಂಪಿಗೆ ತೆರಳಿದರೆ ಫ್ಯಾಮಿಲಿಯವರಿಗೆ ಸರಿಯಾದ ಒಂದು ರೂಮ್ ಸಿಗಲ್ಲ. ವಸತಿಗೃಹಗಳ ಕೊರತೆಯಿದೆ ಎಲ್ಲಾ ಕಡೆ ಬ್ಯಾಚುಲರ್ ಗಳೆ ಇರುತ್ತಾರೆ. ಅವರು  ಮದ್ಯಪಾನವನ್ನು ಮಾಡುತ್ತಿರುತ್ತಾರೆ ಎಂದು ಆರೋಪಿಸಿದ್ದಾರೆ. 

ರಾಜರಾಜೇಶ್ವರಿ ನಗರದ ವಿಧಾನಸಭೆ ಚುನಾವಣೆಗೂ ಸ್ಪರ್ಧಿಸಿ ವೆಂಕಟ್ ಸೋತಿದ್ದರು. ಹಾಗಾದರೆ ವೆಂಕಟ್ ಏನು ಹೇಳಿದ್ದಾರೆ ನೋಡಿಕೊಂಡು ಬನ್ನಿ....