ಸಾಮಾನ್ಯವಾಗಿ ಬ್ಯಾಂಕ್ ಗಳಲ್ಲಿ ಸಾಲ‌ ಮರು ಪಾವತಿ ಮಾಡದಿದ್ದಾಗ ಗ್ರಾಹಕರಿಗೆ ನೊಟೀಸ್ ಜಾರಿ ಮಾಡೋದು, ಬಲವಂತದ ಸಾಲ ವಸೂಲಿಗೆ ಮುಂದಾಗುವುದು ಸಹಜ. ಆದರೆ ಸಾಲವನ್ನೇ ಪಡೆಯದ ಸ್ವಸಹಾಯ ಸಂಘದ ಮಹಿಳೆಯರಿಗೆ ಸಾಲ ಮರುಪಾವತಿ ಮಾಡಿ ಅಂತ ನೊಟೀಸ್ ಬಂದಿದೆ. ಅರೇ ಇದೇನಪ್ಪಾ ಅಂತೀರಾ? ಇಲ್ಲಿದೆ ವಿವರ.

ಹುಬ್ಬಳ್ಳಿ(ಜೂ.26): ಸಾಮಾನ್ಯವಾಗಿ ಬ್ಯಾಂಕ್ ಗಳಲ್ಲಿ ಸಾಲ‌ ಮರು ಪಾವತಿ ಮಾಡದಿದ್ದಾಗ ಗ್ರಾಹಕರಿಗೆ ನೊಟೀಸ್ ಜಾರಿ ಮಾಡೋದು, ಬಲವಂತದ ಸಾಲ ವಸೂಲಿಗೆ ಮುಂದಾಗುವುದು ಸಹಜ. ಆದರೆ ಸಾಲವನ್ನೇ ಪಡೆಯದ ಸ್ವಸಹಾಯ ಸಂಘದ ಮಹಿಳೆಯರಿಗೆ ಸಾಲ ಮರುಪಾವತಿ ಮಾಡಿ ಅಂತ ನೊಟೀಸ್ ಬಂದಿದೆ. ಅರೇ ಇದೇನಪ್ಪಾ ಅಂತೀರಾ? ಇಲ್ಲಿದೆ ವಿವರ.

ಹುಬ್ಬಳ್ಳಿಯ ಉಣಕಲ್'ನ ಮಹಿಳಾ ನಿವಾಸಿಗಳು ಆತಂಕಿತರಾಗಿದ್ದಾರೆ. ಅರ್ಥಿಕವಾಗಿ ಅತ್ಯಂತ ಹಿಂದುಳಿದ ಬಡ ಕುಟುಂಬದ ಮಹಿಳೆಯರು. ಕೂಲಿ-ನಾಲಿ ಮಾಡಿ ಜೀವನ ನಡೆಸುತ್ತಿದ್ದರು. ಆರ್ಥಿಕವಾಗಿ ಸಬಲರಾಗಬೇಕು ಎಂಬ ಕಾರಣಕ್ಕೆ ಸ್ವಸಹಾಯ ಸಂಘಗಳನ್ನು ಮಾಡಿಕೊಂಡಿದ್ದರು. ಆದರೆ ಇದನ್ನೇ ಟಾರ್ಗೆಟ್ ಮಾಡಿಕೊಂಡ ಗುಜರಾತ್ ಮೂಲದ ಫೈನಾನ್ಸ್ ಕಂಪನಿಯೊಂದು ಮಹಿಳೆಯರಿಗೆ ಮಕ್ಮಲ್ ಟೋಪಿ ಹಾಕಿದೆ.

ಗುಜರಾತ್ ಮೂಲದ 'ದಿಶಾ ಮೈಕ್ರೋಫಿನ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ, ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ನೀಡುವುದಾಗಿ ದಾಖಲೆಗಳನ್ನು ಸಂಗ್ರಹಿಸಿದೆ. ಬಳಿಕ ಸಾಲ ಮಂಜೂರು ಮಾಡಿಕೊಂಡು ಸಂಸ್ಥೆಯ ಸಿಬ್ಬಂದಿಗಳೇ ನುಂಗಿ ನೀರು ಕುಡಿದಿದ್ದಾರೆ. ದಾಖಲಾತ ಿನೀಡಿದ ಮಹಿಳೆಯರು ಸಾಲ ಕೊಡಿ ಎಂದು ಕೇಳಿದರೆ, ಇನ್ನೂ ಸಾಲ ಮಂಜೂರಾತಿ ಆಗಿಲ್ಲ ಅಂತಾ ಸುಳ್ಳು ಹೇಳಿದ್ದಾರೆ. ಆದರೆ ಇದೀಗ ಸಾಲ ಮರುಪಾವತಿ ನೀಡುವಂತೆ ನೋಟಿಸ್ ನೋಟಿಸ್'ಗಳು ಬರುತ್ತಿವೆಯಂತೆ.ಇದರಿಂದ ಆತಂಕಗೊಂಡ ಮಹಿಳೆಯರು, ಸಾಲವನ್ನೇ ಪೊಲೀಸರಿಗೆ ದೂರು ನೀಡಿದ್ದಾರೆ.

ದಿಶಾ ಮೈಕ್ರೋ ಫೈನಾನ್ಸ್ ಆರಂಭದಲ್ಲಿ ಪ್ಯೂರ್ಚರ್ ಮೈಕ್ರೋಫಿನ್ ಹೆಸರಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಬಳಿಕ ಫಿನ್ ಕೇರ್ ಹೆಸರಲ್ಲಿ ಕಚೇರಿ ತೆಗೆದು ಮಹಿಳೆರಿಗೆ ವಂಚಿಸುತ್ತಿದೆ. ಇನ್ನು ಮಹಿಳೆಯರಲ್ಲಿ ನಂಬಿಕೆ ಹುಟ್ಟಿಸಲು ಸಂಸ್ಥೆಯಿಂದ ಕೆಲ ಮಹಿಳೆಯರಿಗೆ ೨೦-ರಿಂದ ೨೫ ಸಾವಿರ ಸಾಲ ನೀಡಲಾಗಿದೆ. ಸಾಲ ಪಡೆದ ಮಹಿಳೆಯರು ಕಾಲಕಾಲಕ್ಕೆ ಸಾಲ ಮರುಪಾವತಿ ಮಾಡಿದ್ದಾರೆ. ಆದ್ರೆ ಗ್ರಾಹಕರು ತುಂಬಿದ ಹಣವನ್ನು ಬ್ಯಾಂಕ್ ಸಿಬ್ಬಂದಿ ಸಾಲ‌ ಖಾತೆಗೆ ಜಮೆ ಮಾಡದೆ ತಮ್ಮ ಜೇಬಿಗಿಳಿಸಿಕೊಂಡಿದ್ದಾರೆ. ಇದರಿಂದ ಸಾಲ‌ಮರುಪಾವತಿ ಮಾಡಿದ ಮಹಿಳೆರಿಗೂ ಸಹ ಮತ್ತೆ ಸಾಲ ಪಾವತಿಸುವಂತೆ ನೋಟಿಸ್ ಬರುತ್ತಿವೆ. ಈ ಬಗ್ಗೆ ಫೈನಾನ್ಸ್ ಸಂಸ್ಥೆ ಅಧಿಕಾರಿಗಳನ್ನ ಕೇಳಿದ್ರೆ, ಸಿಬ್ಬಂದಿಗಳಿಂದ ಈ ರೀತಿ ಮೋಸ ಆಗಿದೆ ಅಂತಾ ಹೇಳ್ತಾರೆ.

ಇನ್ನಾದರೂ ಪೊಲೀಸರು, ವಂಚನೆಗಿಳಿದ ದಿಶಾ ಮೈಕ್ರೋ ಫೈನಾನ್ಸ್ ಕಂಪನಿ ವಿರುದ್ಧ ಕಠಿಣ ಕ್ರಮ ಜರುಗಿಸಬೇಕಿದೆ.