ಜಮ್ಮು-ಶ್ರೀನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಪ್ಯಾಂಪೋರ್‌'ನ ಕಡ್ಲಾಬಾಲ್‌'ನಲ್ಲಿ ಯೋಧರನ್ನು ಹೊತ್ತೊಯ್ಯುತ್ತಿದ್ದ ವಾಹನಗಳ ಮೇಲೆ ಉಗ್ರಗಾಮಿಗಳು ನಿರಂತರ ಗುಂಡಿನ ದಾಳಿ ಮಾಡಿದ್ದಾರೆ

ಶ್ರೀನಗರ(ಡಿ.17): ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿರುವ ಸೇನಾ ಬೆಂಗಾವಲು ಪಡೆಗಳ ಮೇಲಿನ ಉಗ್ರರ ದಾಳಿಯಲ್ಲಿ ಮೂವರು ಯೋಧರು ಹುತಾತ್ಮರಾಗಿದ್ದು, ಇಬ್ಬರು ಸೈನಿಕರು ಗಾಯಗೊಂಡಿದ್ದಾರೆ.

‘‘ಜಮ್ಮು-ಶ್ರೀನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಪ್ಯಾಂಪೋರ್‌'ನ ಕಡ್ಲಾಬಾಲ್‌'ನಲ್ಲಿ ಯೋಧರನ್ನು ಹೊತ್ತೊಯ್ಯುತ್ತಿದ್ದ ವಾಹನಗಳ ಮೇಲೆ ಉಗ್ರಗಾಮಿಗಳು ನಿರಂತರ ಗುಂಡಿನ ದಾಳಿ ಮಾಡಿದ್ದಾರೆ,’’ ಎಂದು ಭದ್ರತಾ ಅಧಿಕಾರಿಗಳು ಹೇಳಿದ್ದಾರೆ.

ಮಧ್ಯಾಹ್ನದ ವೇಳೆ ಉಗ್ರರು ದಾಳಿ ನಡೆಸಿದ್ದರಿಂದ ಸಾರ್ವಜನಿಕರು ಓಡಾಡುತ್ತಿದ್ದರಿಂದ ಪ್ರತಿದಾಳಿ ಕೈಗೊಳ್ಳಲು ಸೇನೆ ಮುಂದಾಗಲಿಲ್ಲ. ಆದರೆ, ಉಗ್ರರನ್ನು ಹೊಡೆದೋಡಿಸಲಾಗಿದೆ ಎಂದು ಸಿಆರ್‌ಪಿಎಫ್‌ನ ಐಜಿ ಹೇಳಿದ್ದಾರೆ.