Asianet Suvarna News Asianet Suvarna News

ಬಿಸಿಯೂಟ ಬೇಕೆಂದರೆ ಆಧಾರ್ ಕಾರ್ಡ್ ಇರಲೇಬೇಕು

ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿಯಲ್ಲಿ ಎಲ್ಲಾ ಮಕ್ಕಳು ಊಟ ಪಡೆಯಲು ಇನ್ನುಂದೆ ಆಧಾರ್ ಕಾರ್ಡ್ ಕಡ್ಡಾಯ. ಅದೇ ರೀತಿ ಅಡುಗೆ ಮಾಡುವವರು, ಸಹಾಯಕರು ಕೂಡಾ ಕಡ್ಡಾಯವಾಗಿ ಆಧಾರ್ ಕಾರ್ಡನ್ನು ಹೊಂದಿರಬೇಕು ಎಂದು ಮಾನವ ಸಂಪನ್ಮೂಲ ಸುತ್ತೋಲೆ ಹೊರಡಿಸಿದೆ.

HRD ministry makes Aadhaar mandatory for students cooks under midday meal scheme

ನವದೆಹಲಿ (ಮಾ.04): ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿಯಲ್ಲಿ ಎಲ್ಲಾ ಮಕ್ಕಳು ಊಟ ಪಡೆಯಲು ಇನ್ನುಂದೆ ಆಧಾರ್ ಕಾರ್ಡ್ ಕಡ್ಡಾಯ. ಅದೇ ರೀತಿ ಅಡುಗೆ ಮಾಡುವವರು, ಸಹಾಯಕರು ಕೂಡಾ ಕಡ್ಡಾಯವಾಗಿ ಆಧಾರ್ ಕಾರ್ಡನ್ನು ಹೊಂದಿರಬೇಕು ಎಂದು ಮಾನವ ಸಂಪನ್ಮೂಲ ಸುತ್ತೋಲೆ ಹೊರಡಿಸಿದೆ.

ಈ ಸುತ್ತೋಲೆಯನ್ನು ಶೀಘ್ರದಲ್ಲಿಯೇ ಎಲ್ಲಾ ಶಾಲೆಗಳಿಗೆ ಕಳುಹಿಸಲಾಗುತ್ತದೆ ಎಂದು ಇಲಾಖಾ ಅಧಿಕಾರಿಗಳು ಹೇಳಿದ್ದಾರೆ.  ಜೂನ್. 30 ರೊಳಗೆ ಎಲ್ಲರೂ ಆಧಾರ್ ಕಾರ್ಡ್ ಪ್ರೂಫನ್ನು ಒದಗಿಸಬೇಕು ಎಂದಿದೆ.

ಅಡುಗೆ ಸಿಬ್ಬಂದಿಗಳಿಗೂ ಆಧಾರ್ ಕಾರ್ಡ್ ನ್ನು ಕಡ್ಡಾಯಗೊಳಿಸಿದ್ದು, ಅವರು ಕೂಡಾ ಈ ಯೋಜನೆಯ ಫಲಾನಿಭವಿಗಳಾಗಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ ಎಂದು ಹೆಚ್ ಆರ್ ಡಿ ಹೇಳಿದೆ.

Follow Us:
Download App:
  • android
  • ios