ಕಳೆದೊಂದು ವಾರದಿಂದ ಏಕಾಏಕಿ ಚಳಿ ಹೆಚ್ಚಾಗಿರುವುದು ನಿಮಗೆಲ್ಲ ಗೊತ್ತೇ ಇದೆ. ವಾತಾವರಣದಲ್ಲಿ ಹೀಗೆ ದಿಢೀರ್‌ ಬದಲಾವಣೆ ಆದಾಗ ಅದು ಮಕ್ಕಳ ಮೇಲೆ ಬೇಗ ಪ್ರತಿಕೂಲ ಪರಿಣಾಮ ಬೀರುತ್ತದೆ. ನೆಗಡಿ, ಕಫ, ಜ್ವರದಂತಹ ಸಮಸ್ಯೆಗಳು ಎದುರಾಗುತ್ತವೆ. ನಿಮ್ಮ ಮಕ್ಕಳನ್ನು ಚಳಿಯ ವಾತಾವರಣದಿಂದ ರಕ್ಷಿಸುವುದು ಹೇಗೆ ಎಂಬ ಬಗ್ಗೆ ಒಂದಿಷ್ಟುಸಲಹೆ ಇಲ್ಲಿದೆ.

ಮಸಾಜ್‌ಮಾಡಿ: ಆಲಿವ್‌ ಅಥವಾ ಕೊಬ್ಬರಿ ಎಣ್ಣೆಯಿಂದ ಮಕ್ಕಳ ದೇಹವನ್ನು ಚೆನ್ನಾಗಿ ಮಸಾಜ್‌ ಮಾಡಿ. ಅರ್ಧ ಗಂಟೆ ಬಿಟ್ಟು, ಉಗುರು ಬೆಚ್ಚಗಿನ ನೀರಲ್ಲಿ ಸ್ನಾನ ಮಾಡಿಸಿ. ನೀರು ಹೆಚ್ಚು ಬಿಸಿಯಿದ್ದರೆ, ಚರ್ಮಕ್ಕೆ ತೊಂದರೆಯಾಗಬಹುದು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೈ ತೊಳೆಸಿ: ಚಳಿಗಾಲದಲ್ಲಿ ವೈರಸ್‌ಗಳ ಕಾಟ ಹೆಚ್ಚು. ಮಕ್ಕಳಿಗೆ ಆಗಾಗ್ಗೆ ಕೈಗಳನ್ನು ತೊಳೆದುಕೊಳ್ಳುವಂತೆ ಹೇಳಿ. ನೀವೂ ಅದನ್ನೇ ಮಾಡಿ. ಪುಟ್ಟಮಕ್ಕಳಿದ್ದರೆ, ಅವರನ್ನು ಹೊರಗೆಲ್ಲ ಕರೆದೊಯ್ಯದೆ, ಆದಷ್ಟುಮನೆಯೊಳಗೇ ಇರಿಸಿಕೊಳ್ಳಿ.

ಬಿಸಿಯಾದದ್ದನ್ನು ಕೊಡಿ: ಮಕ್ಕಳಿಗೆ ಯಾವುದೇ ಕಾರಣಕ್ಕೂ ಫ್ರಿಜ್‌ನಲ್ಲಿಟ್ಟತಣ್ಣಗಿನ ನೀರು ಕೊಡಬೇಡಿ. ಕುದಿಸಿ, ಆರಿಸಿದ ನೀರನ್ನೇ ಕುಡಿಸಿ. ಬಿಸಿ-ಬಿಸಿಯಾದ ಆಹಾರ ಪದಾರ್ಥಗಳನ್ನು ತಯಾರಿಸಿ, ಉಣಿಸಿ.

ದೇಹ ಕವರ್‌ ಮಾಡಿ: ಮಕ್ಕಳ ಕೈಗಳು, ಕುತ್ತಿಗೆ, ತಲೆಯ ಭಾಗ ಮುಚ್ಚುವಂತೆ ದಪ್ಪನೆಯ ಗ್ಲೌಸ್‌, ಮಂಕಿ ಕ್ಯಾಪ್‌ ಹಾಗೂ ಸ್ವೆಟರ್‌ ಅನ್ನು ಧರಿಸಿ. ಅವರು ಬೆಚ್ಚಗಿರುವಂತೆ ನೋಡಿಕೊಳ್ಳಿ. ರಾತ್ರಿ ಮಲಗುವಾಗ ಹೊದಿಸುವ ಹೊದಿಕೆಯೂ ದಪ್ಪವಿರಲಿ.

ಲೋಷನ್‌ ಬಳಸಿ: ಚಳಿಗಾಲದಲ್ಲಿ ಚರ್ಮವು ಒಣಗಿದಂತಾಗಿ, ಪಾದಗಳ ಹಿಂಭಾಗ ಸೀಳಿದಂತಾಗುವ ಸಮಸ್ಯೆ ಎದುರಾಗುತ್ತದೆ. ಸೂಕ್ತ ಸನ್‌ಸ್ಕ್ರೀನ್‌ ಅಥವಾ ಇನ್ನಿತರ ಲೋಷನ್‌ಗಳನ್ನು ಹಚ್ಚಿ ಮಕ್ಕಳ ಚರ್ಮವನ್ನು ಸಂರಕ್ಷಿಸಿಕೊಳ್ಳಿ.