ಗೂಗಲ್ ಆ್ಯಂಡ್ರಾಯ್ಡ್ 7.0 ನೌಗಾಟ್'ನಲ್ಲಿ ಸಾಕಷ್ಟು ಬದಲಾವಣೆ ಮಾಡಿದೆ. ಇದರ ಪ್ರಮುಖ ವಿಶೇಷತೆಗಳೆಂದರೆ, ಸ್ಮಾರ್ಟ್ ಪೋನ್ ಹಾಗೂ ಟ್ಯಾಬ್ಲೆಟ್ಸ್'ಗಳಲ್ಲಿ ಈ ಹಿಂದೆಯಿದ್ದ ಮಲ್ಟಿ ವಿಂಡೋ ಸಪೋರ್ಟ್ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸಿ, ಬಂದ ನೋಟಿಫಿಕೇಷನ್'ನಿಂದಲೇ ನೇರವಾಗಿ ರಿಪ್ಲೆ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ.
ಬಹುನಿರೀಕ್ಷೆ ಹುಟ್ಟಿಸಿದ್ದ ಆ್ಯಂಡ್ರಾಯ್ಡ್ 7.0 ನೌಗಾಟ್ ಹೊಸ ಅವತರಣಿಕೆಯನ್ನು ಗೂಗಲ್ ತನ್ನ ಗ್ರಾಹಕರಿಗೆ ಪರಿಚಯಿಸಿದೆ. ನೆಕ್ಸಸ್ ಸ್ಮಾರ್ಟ್'ಪೋನ್ ಹಾಗೂ ಟ್ಯಾಬ್ಲೆಟ್ಸ್ ಬಳಕೆದಾರರು ಆ್ಯಂಡ್ರಾಯ್ಡ್ 7.0 ನೌಗಾಟ್ ಅಳವಡಿಸಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ. ಕಳೆದ ಮಾರ್ಚ್'ನಲ್ಲಿ ಪರಿಚಯಿಸಿದ್ದ ಬೀಟಾ ವರ್ಷನ್ ಅನ್ನು ಕಿತ್ತೊಗೆದು, ಅಧಿಕೃತವಾಗಿ ಆಗಸ್ಟ್ 22 ರಂದು ಐದು ಹೊಸ ಆವೃತ್ತಿಯನ್ನು ಪರಿಚಯಿಸಿದೆ.
ಮಾರುಕಟ್ಟೆಗೆ ಬಿಡುಗಡೆಯಾಗುವ ಮುನ್ನವೇ ಸಾಕಷ್ಟು ಗ್ರಾಹಕರು ಆ್ಯಂಡ್ರಾಯ್ಡ್ 7.0 ನೌಗಾಟ್ ಅನ್ನು ತಮ್ಮ ಮೊಬೈಲ್'ನಲ್ಲಿ ಅಳವಡಿಸಿಕೊಂಡಿದ್ದಾರೆ. beta program ಮೂಲಕ ತನ್ನಿಂದತಾನೆ ಅಪ್'ಡೇಟ್ಸ್ ಮಾಡಿಕೊಳ್ಳಬಹುದೆಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಇದಷ್ಟೇ ಅಲ್ಲದೇ ಗೂಗಲ್ ಫ್ಯಾಕ್ಟರಿ ಇಮೇಜ್ ಅನ್ನು ಪರಿಚಯಿಸಿದೆ.
ಆ್ಯಂಡ್ರಾಯ್ಡ್ 7.0 ನೌಗಾಟ್ ಡೌನ್'ಲೋಡ್'ನಲ್ಲಿ ಹೊಸತೇನಿದೆ?
ಗೂಗಲ್ ಆ್ಯಂಡ್ರಾಯ್ಡ್ 7.0 ನೌಗಾಟ್'ನಲ್ಲಿ ಸಾಕಷ್ಟು ಬದಲಾವಣೆ ಮಾಡಿದೆ. ಇದರ ಪ್ರಮುಖ ವಿಶೇಷತೆಗಳೆಂದರೆ, ಸ್ಮಾರ್ಟ್ ಪೋನ್ ಹಾಗೂ ಟ್ಯಾಬ್ಲೆಟ್ಸ್'ಗಳಲ್ಲಿ ಈ ಹಿಂದೆಯಿದ್ದ ಮಲ್ಟಿ ವಿಂಡೋ ಸಪೋರ್ಟ್ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸಿ, ಬಂದ ನೋಟಿಫಿಕೇಷನ್'ನಿಂದಲೇ ನೇರವಾಗಿ ರಿಪ್ಲೆ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ.
ಇದಷ್ಟೇ ಅಲ್ಲದೇ ಪ್ರಮುಖ ಆ್ಯಪ್ಸ್'ಗಳನ್ನು ಸುಧಾರಿಸುವುದರ ಜೊತೆಗೆ ಬ್ಯಾಟರಿ ಗುಣಮಟ್ಟವನ್ನು ಉಳಿಸುವಲ್ಲೂ ಆ್ಯಂಡ್ರಾಯ್ಡ್ 7.0 ನೌಗಾಟ್ ಸಹಕಾರಿಯಾಗಿದೆ.