ವಿಶ್ವಾದ್ಯಂತ ಪಾಸ್ ಪೋರ್ಟ್`ಗಳಿಗೆ ಇರುವ ಆದ್ಯತೆ, ವೀಸಾ ಫ್ರೀ ಸ್ಕೋರ್ ಆಧರಿಸಿ ಈ ಶ್ರೇಯಾಂಕ ನೀಡಲಾಗಿದೆ.
ನವದೆಹಲಿ(ಜ.17): ವಿಶ್ವದ ಅತ್ಯಂತ ಪವರ್ ಫುಲ್ ಪಾಸ್ ಪೋರ್ಟ್ ಶ್ರೇಯಾಂಕದಲ್ಲಿ ಭಾರತಕ್ಕೆ 78ನೇ ಸ್ಥಾನ ಸಿಕ್ಕಿದೆ. ಜರ್ಮನಿಯ ಪಾಸ್ ಪೋರ್ಟ್ 157 ವೀಸಾ ಫ್ರೀ ಸ್ಕೋರ್`ನೊಂದಿಗೆ ಅಗ್ರಸ್ಥಾನದಲ್ಲಿದ್ದರೆ ದಕ್ಷಿಣ ಕೊರಿಯಾವನ್ನ ಓವರ್ ಟೇಕ್ ಮಾಡಿರುವ ಸಿಂಗಾಪುರ್ ಪಾಸ್ ಪೋರ್ಟ್ 156 ವೀಸಾ ಫ್ರೀ ಸ್ಕೋರ್`ನೊಂದಿಗೆ ಏಷ್ಯಾದ ಅತ್ಯಂತ ಪವರ್ ಫುಲ್ ಪಾಸ್`ಪೋರ್ಟ್ ಎಂಬ ಹೆಗ್ಗಳಿಕೆಯೊಂದಿಗೆ 2ನೇ ಸ್ಥಾನದಲ್ಲಿದೆ.
ಭಾರತ 78ನೇ ಸ್ಥಾನದಲ್ಲಿದ್ದರೆ ಪಾಕಿಸ್ತಾನ ಮತ್ತು ಚೀನಾ ಕ್ರಮವಾಗಿ 94 ಮತ್ತು 66ನೇ ಸ್ಥಾನದಲ್ಲಿವೆ. ಆಫ್ಘಾನಿಸ್ತಾನದ ಪಾಸ್ ಪೋರ್ಟ್ ಅತ್ಯಂತ ಕೀಳುಮಟ್ಟದ(23 ವೀಸಾ ಫ್ರೀ ಸ್ಕೋರ್) ಆದ್ಯತೆ ಪಡೆದಿದೆ. ಆರ್ಟನ್ ಕ್ಯಾಪಿಟಲ್`ನ ನೂತನ ಪಾಸ್`ಪೋರ್ಟ್ ಇಂಡೆಕ್ಸ್`ನಲ್ಲಿ ವಿವಿಧ ದೇಶಗಳ ಪಾಸ್ ಪೋರ್ಟ್`ಗಳ ಆದ್ಯತೆ ಮೇರೆಗೆ ಈ ರ್ಯಾಂಕ್ ನೀಡಲಾಗಿದೆ.
ವಿಶ್ವಾದ್ಯಂತ ಪಾಸ್ ಪೋರ್ಟ್`ಗಳಿಗೆ ಇರುವ ಆದ್ಯತೆ, ವೀಸಾ ಫ್ರೀ ಸ್ಕೋರ್ ಆಧರಿಸಿ ಈ ಶ್ರೇಯಾಂಕ ನೀಡಲಾಗಿದೆ.
