Asianet Suvarna News Asianet Suvarna News

ಸಂಬಂಧ ಸುಧಾರಣೆಗೆ ಮೋದಿ ಪಂಚಸೂತ್ರ

ಚೀನಾ - ಭಾರತ ಸಂಬಂಧ ವೃದ್ಧಿಗೆ ಪಂಚ ಸೂತ್ರಗಳನ್ನು ಮೋದಿ ಪ್ರಸ್ತಾಪಿಸಿದ್ದಾರೆ. ಅವುಗಳೆಂದರೆ ಸಮಾನ ಚಿಂತನೆ, ಸಮಾನ ಸಂಬಂಧ, ಸಮಾನ ಸಹಕಾರ, ಸಮಾನ ಗುರಿ ಮತ್ತು ಸಮಾನ ಕನಸುಗಳು ಎಂದು ಮೋದಿ ಹೇಳಿದ್ದಾರೆ.

How Modi plans to deal with China

ವುಹಾನ್‌: ಭಾರತ ಹಾಗೂ ಚೀನಾ ನಡುವೆ ಇರುವುದು ಶತಮಾನಗಳಷ್ಟುಹಳೆಯ ಸಂಬಂಧವಾಗಿದ್ದು, ಉಭಯ ದೇಶಗಳ ಜನರ ಹಾಗೂ ಜಗತ್ತಿನ ಒಳಿತಿಗಾಗಿ ಒಟ್ಟಾಗಿ ಕೆಲಸ ಮಾಡಲು ಅದ್ಭುತ ಅವಕಾಶಗಳಿವೆ ಎಂದು ಪ್ರಧಾನಿ ಮೋದಿ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರಿಗೆ ಹೇಳಿದರು.

ಇದೇ ವೇಳೆ ಉಭಯ ದೇಶಗಳ ಸಂಬಂಧ ವೃದ್ಧಿಗೆ ಪಂಚ ಸೂತ್ರಗಳನ್ನು ಮೋದಿ ಪ್ರಸ್ತಾಪಿಸಿದ್ದಾರೆ. ಅವುಗಳೆಂದರೆ ಸಮಾನ ಚಿಂತನೆ, ಸಮಾನ ಸಂಬಂಧ, ಸಮಾನ ಸಹಕಾರ, ಸಮಾನ ಗುರಿ ಮತ್ತು ಸಮಾನ ಕನಸುಗಳು ಎಂದು ಮೋದಿ ಹೇಳಿದ್ದಾರೆ.

ಇನ್ನು ಅನೌಪಚಾರಿಕ ಶೃಂಗದ ಮೊದಲ ದಿನ ನಿಯೋಗ ಮಟ್ಟದ ಸಭೆಯಲ್ಲಿ ಮಾತನಾಡಿದ ಮೋದಿ, ಇಂತಹ ಅನೌಪಚಾರಿಕ ಶೃಂಗಗಳು ನಮ್ಮ ದೇಶಗಳ ನಡುವೆ ಸಾಮಾನ್ಯವಾಗಬೇಕು. 2019ರಲ್ಲಿ ಭಾರತದಲ್ಲಿ ನಿಮಗೆ ಇಂತಹುದೇ ಆತಿಥ್ಯ ನೀಡಲು ನಾನು ಉತ್ಸುಕನಾಗಿದ್ದೇನೆ. ನಮ್ಮೆರಡು ದೇಶಗಳು ಸೇರಿ ಜಗತ್ತಿನ ಶೇ.40ರಷ್ಟುಜನಸಂಖ್ಯೆ ಹೊಂದಿವೆ. 2000 ವರ್ಷಗಳ ಇತಿಹಾಸದಲ್ಲಿ ಭಾರತ ಹಾಗೂ ಚೀನಾ 1600 ವರ್ಷಗಳ ಕಾಲ ಜಗತ್ತಿನ ಶೇ.50ರಷ್ಟುಆರ್ಥಿಕ ವ್ಯವಹಾರಗಳನ್ನು ನಡೆಸುತ್ತಿದ್ದವು. ಈಗಲೂ ನಾವು ಕೈಜೋಡಿಸಲು ಸಾಕಷ್ಟುಅವಕಾಶಗಳಿವೆ ಎಂದರು.

ಕ್ಸಿ ಮಾತನಾಡಿ, ಕಳೆದ ಐದು ವರ್ಷಗಳಲ್ಲಿ ಉಭಯ ದೇಶಗಳು ಒಟ್ಟಾಗಿ ಸಾಕಷ್ಟುಪ್ರಗತಿ ಸಾಧಿಸಿವೆ ಎಂದು ಹೇಳಿದರು.

Follow Us:
Download App:
  • android
  • ios