ಡಿ.ಕೆ.ಶಿವಕುಮಾರ್ ಮನೆ ಮೇಲೆ ನಡೆದ ಐಟಿ ದಾಳಿ ರಾಷ್ಟ್ರವ್ಯಾಪ್ತಿ ಸಂಚಲ ಮೂಡಿಸಿದೆ. ಪವರ್ ಮಿನಿಸ್ಟರ್ ವಿರುದ್ಧದ ಕಾರ್ಯಚರಣೆಗೆ ನಡೆದಿತ್ತು ಮಾಸ್ಟರ್ ಪ್ಲಾನ್; ಆರು ತಿಂಗಳಿಂದ ಸಚಿವರ ಮೇಲೆ ಕಣ್ಣಿಟ್ಟಿದ್ದರು 50 ಅಧಿಕಾರಿಗಳು; ಡಿಕೆಶಿ ವ್ಯವಹಾರದ ಕುರಿತು ಸಂಪೂರ್ಣ ಮಾಹಿತಿ ಕಲೆಹಾಕಿತ್ತು ಐಟಿ ಇಲಾಖೆ.
ಬೆಂಗಳೂರು: ರಾಜ್ಯದ ಪವರ್ ಫುಲ್ ಮಿನಿಸ್ಟರ್ ಎಂದೇ ಬಿಂಬತರಾಗಿರುವ ಡಿ.ಕೆ. ಶಿವಕುಮಾರ್ ಪವರ್ ಈಗ ಡಲ್ ಆಗಿದೆ.. ಕನಕಪುರ ಸಾಮ್ರಾಜ್ಯದ ದೊರೆ, ಐಟಿ ದಾಳಿಗೆ ಕಂಗಾಲಾಗಿದ್ದಾರೆ.. ಆದರೆ, ರಾಜ್ಯದಲ್ಲಿ ಪ್ರಭಾವಿ ಸಚಿವರಾಗಿರುವ ಡಿ.ಕೆ. ಶಿವಕುಮಾರ್ ಕೋಟೆಯನ್ನು ಭೇದಿಸೋದು ಐಟಿಗೆ ಅಷ್ಟು ಸುಲದ ಮಾತಾಗಿರಲಿಲ್ಲ.. ಬನ್ನಿ ಐಟಿ ಅಧಿಕಾರಿಗಳು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಕೋಟೆ ಭೇದಿಸಿದ್ದು ಹೇಗೆ ಎಂಬುದನ್ನು ನೋಡೋಣ.
ಡಿಕೆಶಿ ಕೋಟೆ ಭೇದಿಸಿದ್ದು ಹೇಗೆ?
* ಆರು ತಿಂಗಳಿಂದ ಡಿಕೆಶಿ ಮೇಲೆ ಕಣ್ಣಿಟ್ಟಿದ್ದ 50 ಅಧಿಕಾರಿಗಳು
* ಡಿ.ಕೆ.ಶಿವಕುಮಾರ್ ಇಂಚಿಂಚು ಮಾಹಿತಿ ಕಲೆಹಾಕಿದ ಅಧಿಕಾರಿಗಳು
* ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೂಡಿಕೆ ಬಗ್ಗೆ ಮಾಹಿತಿ ಸಂಗ್ರಹ
* 6 ತಿಂಗಳಿಂದ ಡಿಕೆಶಿ ವ್ಯವಹಾರಗಳ ಬಗ್ಗೆ ಮಾಹಿತಿ ಕಲೆಹಾಕಿದ ಅಧಿಕಾರಿಗಳು
* ಡಿ.ಕೆ.ಶಿವಕುಮಾರ್ ಮತ್ತು ಆಪ್ತ ಸಹಾಯಕರ ಮೊಬೈಲ್ ಟ್ರ್ಯಾಪ್
* ಡಿ.ಕೆ.ಶಿವಕುಮಾರ್ ಸಂಬಂಧಿಕರ ಫೋನ್ ಸಹ ಟ್ರ್ಯಾಪ್
* ವರ್ಷದಿಂದ ವರ್ಷಕ್ಕೆ ಡಿಕೆಶಿ ತೆರಿಗೆ ಪಾವತಿ ಏರಿಕೆ
* ತೆರಿಗೆ ಏರಿಕೆ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಿದ್ದ ಅಧಿಕಾರಿಗಳು
* ಜುಲೈ 27ರಂದು ಡಿಕೆಶಿ ಮನೆ ಮೇಲೆ ದಾಳಿಗೆ ಡೇಟ್ ಫಿಕ್ಸ್
* ಡಿಕೆಶಿ ವಿದೇಶಿ ಪ್ರವಾಸದಲ್ಲಿದ್ದ ಕಾರಣ 5 ದಿನಗಳ ಬಳಿಕ ಐಟಿ ರೇಡ್
ಆರು ತಿಂಗಳಿಂದ 50 ಜನ ಅಧಿಕಾರಿಗಳ ತಂಡ ಡಿ.ಕೆ.ಶಿವಕುಮಾರ್ ವ್ಯವಹಾರಗಳ ಮೇಲೆ ಕಣ್ಣಿಟ್ಟಿತ್ತು. ಡಿ.ಕೆ. ಶಿವಕುಮಾರ್ ಸಂಬಂಧಿಸಿದಂತೆ ಅಧಿಕಾರಿಗಳು ಇಂಚಿಂಚು ಮಾಹಿತಿಯನ್ನು ಕಲೆಹಾಕಿದ್ರು.. ಅಷ್ಟೇ ಅಲ್ಲ, ರಾಜ್ಯ ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಡಿ.ಕೆ.ಶಿವಕುಮಾರ್ ಹೂಡಿಕೆ ಮಾಡಿರುವ ಬಗ್ಗೆ ಪಕ್ಕಾ ಮಾಹಿತಿಯನ್ನು ಸಂಗ್ರಹಿಸಿದ್ರು. ಬಗ್ಗೆ ಮಾಹಿತಿ ಸಂಗ್ರಹ.. ಜೊತೆಗೆ ಡಿ.ಕೆ.ಶಿವಕುಮಾರ್ ಮತ್ತು ಅವರ ಆಪ್ತ ಸಹಾಯಕರ ಫೋನ್‌ಗಳನ್ನು ಟ್ರಾಪ್ ಮಾಡಿದ್ರು. ಇವರಷ್ಟೆ ಅಲ್ಲದೆ ಸಂಬಂಧಿಕರ ಫೋನನ್ನು ಸಹ ಅಧಿಕಾರಿಗಳು ಟ್ರಾಪ್ ಮಾಡಿದ್ದರು.
ಪ್ರತಿವರ್ಷ ಡಿ.ಕೆ.ಶಿವಕುಮಾರ್ ಆದಾಯ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿತ್ತು. ಹೀಗಾಗಿ ಈ ಡಿ.ಕೆ. ಶಿವಕುಮಾರ್ ಆದಾಯದ ಮೂಲಗಳ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಿದ್ದರು.. ಇಷ್ಟೇ ಅಲ್ಲ ಇನ್ಫರ್ಮೆಷನ್ ಸಿಕ್ಕ ಸಂಗ್ರಹಿಸಿದ ಬಳಿಕ ಜುಲೈ 27ರಂದು ಡಿಕೆಶಿ ಮನೆ ಮೇಲೆ ರೇಡ್ ಮಾಡಲು ಐಟಿ ಅಧಿಕಾರಿಗಳು ಡೇಟ್ ಫಿಕ್ಸ್ ಮಾಡಿದ್ರು. ಆದರೆ, ಡಿಕೆ ಶಿವಕುಮಾರ್ ವಿದೇಶಿ ಪ್ರವಾಸದಲ್ಲಿದ್ದ ಕಾರಣ 5 ದಿಗಳ ಬಳಿಕ, ಅಂದ್ರೆ ಅವರು ವಿದೇಶದಿಂದ ಹಿಂತಿರುಗಿದ ಬಳಿಕ ಐಟಿ ಅಧಿಕಾರಿಗಳು ದಾಳಿ ನಡೆಸಿದರು.
ಒಟ್ಟಾರೆ.. ಕಳೆದ ಮೂರು ದಿನಗಳಿಂದ ಡಿ.ಕೆ. ಶಿವಕುಮಾರ್'ಗೆ ಐಟಿ ಅಧಿಕಾರಿಗಳು ಫುಲ್ ಡ್ರಿಲ್ ಮಾಡಿದ್ದು, ಐಟಿ ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಿಸಿ ಸುಸ್ತಾಗಿ ಹೋಗಿದ್ದಾರೆ.
ಬ್ಯುರೋ ರಿಪೋರ್ಟ್, ಸುವರ್ಣನ್ಯೂಸ್
