ಗಾಂಧೀಜಿ ಆತ್ಮಹತ್ಯೆ ಮಾಡಿಕೊಂಡಿದ್ದು ಹೇಗೆ? ಪರೀಕ್ಷೆಯಲ್ಲಿ ಪ್ರಶ್ನೆ!
ಗಾಂಧೀಜಿ ಆತ್ಮಹತ್ಯೆ ಮಾಡಿ ಕೊಂಡಿದ್ದು ಹೇಗೆ?| ಶಾಲಾ ಆಂತರಿಕ ಪರೀಕ್ಷೇಲಿ ಪ್ರಶ್ನೆ| ತನಿಖೆಗೆ ತಂಡ ರಚನೆ
ಅಹಮದಾಬಾದ್[ಅ.14]: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ನಾಥೂರಾಂ ಗೋಡ್ಸೆ ಗುಂಡಿಗೆ ಬಲಿಯಾದರು ಎಂಬುದು ಎಲ್ಲರಿಗೂ ಗೊತ್ತಿರುವ ಮಾಹಿತಿ. ಆದರೆ ಗುಜರಾತ್‌ನ ಶಾಲೆಯೊಂದರ 9ನೇ ತರಗತಿ ವಿದ್ಯಾರ್ಥಿಗಳಿಗೆ ನಡೆಸಿದ ಆಂತರಿಕ ಪರೀಕ್ಷೆ ವೇಳೆ, ಗಾಂಧೀಜಿ ಆತ್ಮಹತ್ಯೆ ಮಾಡಿಕೊಂಡಿದ್ದು ಹೇಗೆ ಎಂಬ ಆಘಾತಕಾರಿ ಪ್ರಶ್ನೆಯೊಂದನ್ನು ಕೇಳಲಾಗಿದೆ.
ರಾಜ್ಯ ಸರ್ಕಾರದ ಅನುದಾನ ಪಡೆಯುವ ಸುಫಲಂ ಶಾಲಾ ವಿಕಾಸ್ ಎಂಬ ಸಂಸ್ಥೆಯು ಗುಜರಾತ್‌ನಲ್ಲಿ ಕೆಲವೊಂದು ಶಾಲಾ-ಕಾಲೇಜುಗಳನ್ನು ನಿರ್ವಹಿಸುತ್ತಿದ್ದು, ಶನಿವಾರ ನಡೆದ ಆಂತರಿಕ ಪರೀಕ್ಷೆಯಲ್ಲಿ 9 ತರಗತಿಯ ವಿದ್ಯಾರ್ಥಿಗಳಿಗೆ ಗಾಂಧೀಜಿ ಕುರಿತಾಗಿ ಈ ಮುಜುಗರಕ್ಕೀಡಾಗುವ ಪ್ರಶ್ನೆ ಕೇಳಿದೆ.
ಗಾಂಧಿ ನಕಲಿ ಎಂದು ಈಗ ನನಗೆ ಗೊತ್ತಾಯ್ತು!
ಅಲ್ಲದೆ, 12ನೇ ತರಗತಿ ವಿದ್ಯಾರ್ಥಿಗಳಿಗೆ ನೀಡಲಾದ ಪ್ರಶ್ನೆ ಪತ್ರಿಕೆಯಲ್ಲಿ ನೀವು ವಾಸವಿರುವ ಪ್ರದೇಶದಲ್ಲಿ ಮದ್ಯಸೇವಿಸುವವರ ಹಾವಳಿ ಮತ್ತು ಅಕ್ರಮ ಮದ್ಯ ಮಾರಾಟಗಾರರ ಹಾವಳಿ ಹೆಚ್ಚಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಕೋರಿ ಜಿಲ್ಲಾ ಪೊಲೀಸ್ ಮುಖ್ಯಸ್ಥರಿಗೆ ಪತ್ರ ಬರೆಯಿರಿ ಎಂದು ಸೂಚಿಸಲಾಗಿದೆ.
ವಿವಾದಕ್ಕೆ ಕಾರಣವಾಗಬಲ್ಲ ಇಂಥ ಅಂಶಗಳನ್ನು ಒಳಗೊಂಡ ಇಂಥ ಪ್ರಶ್ನೆಗಳನ್ನು ಮಕ್ಕಳಿಗೆ ಕೇಳಿದ್ದರ ಬಗ್ಗೆ ಶಿಕ್ಷಣ ಇಲಾಖೆ ತನಿಖೆಗೆ ಆದೇಶಿಸಿದೆ.
ಸ್ವಾತಂತ್ರ್ಯ ಕೊಡಿಸಿದ ನೀವು ಯಾಕಿಷ್ಟು ಬೇಗ ನಮ್ಮನ್ನಗಲಿದ್ರಿ?: ಕಣ್ಣೀರಿಟ್ಟು ನಗೆ ಪಾಟಲಿಗೀಡಾದ ನಾಯಕ!