Asianet Suvarna News Asianet Suvarna News

ಗಾಂಧಿ ನಕಲಿ ಎಂದು ಈಗ ನನಗೆ ಗೊತ್ತಾಯ್ತು!

ಎಲ್ಲ ಧರ್ಮಗಳೂ ಒಂದೇ ಸತ್ಯವನ್ನು ಹೇಳುತ್ತವೆ ಎಂದು ಗಾಂಧೀಜಿ ಹೇಳಿದರು. ಎಂಥ ಅಸಂಬದ್ಧ! ಪ್ರೀತಿಯ ಶಕ್ತಿಯು ಅಧಿಕಾರದ ಪ್ರೀತಿಯನ್ನು ದಾಟಿ ಹೋಗಬೇಕು ಎಂದು ಅವರು ಹೇಳಿದರು. ಎಂಥ ಅವಿವೇಕ!

Journalist TJS george writes about Mahatma Gandhi
Author
Bengaluru, First Published Oct 6, 2019, 11:17 AM IST

ಗಾಂಧಿ ಜಯಂತಿ ದಿನಗಳಂದು ನನಗೆ ದೇಶಭಕ್ತಿಯ ಭಾವನೆ ಯಾವಾಗಲೂ ಬರುತ್ತಿತ್ತು ಮತ್ತು ಹೆಮ್ಮೆ ಎನಿಸುತ್ತಿತ್ತು. ಈ ಬಾರಿ ಅಲ್ಲ. ಈ ಬಾರಿ ಗಾಂಧಿ ನಕಲಿ ಎಂದು ನನಗೆ ಅರಿವಾಗಿತ್ತು. ಎಂದಿನಂತೆ ಕಳೆದ ವಾರ ಸುದ್ದಿಪತ್ರಿಕೆಗಳು ಗಾಂಧಿಯಿಂದಲೇ ತುಂಬಿಕೊಂಡಿದ್ದವು. ಶಾಲೆಗಳು ಮತ್ತು ಕಾಲೇಜುಗಳು ಹಾಗೂ ಎಲ್ಲ ರೀತಿಯ ಸಂಘಟನೆಗಳು ರಾಷ್ಟ್ರಪಿತ ಎಂದು ಅವು ವರ್ಣಿಸಿದ ವ್ಯಕ್ತಿಯ 150ನೇ ಜಯಂತಿಯನ್ನು ಆಚರಿಸಲು ಎಲ್ಲ ರೀತಿಯ ಕಾರ್ಯಕ್ರಮ ಹಮ್ಮಿಕೊಂಡಿದ್ದವು. ನಾನು ಕೂಡ ರಾಷ್ಟ್ರಪಿತ ಎಂಬ ಪರಿಕಲ್ಪನೆಗೆ ಒಗ್ಗಿಕೊಂಡಿದ್ದೆ. ಈಗ ನನಗೆ ಚೆನ್ನಾಗಿ ಅರ್ಥವಾಗಿದೆ.

ತಮ್ಮ ಹೆಸರನ್ನೇ ‘ನೇತಾಜಿ ಗಾಂಧಿ’ ಎಂದೇ ಬದಲಾಯಿಸಿಕೊಂಡ ತರುಣ ಗಾಂಧಿ!

ರಾಷ್ಟ್ರಪಿತೃತ್ವದ ವಾಸ್ತವದ ಕುರಿತು ನನ್ನ ಕಣ್ಣುಗಳನ್ನು ತೆರೆಸಿದ ವ್ಯಕ್ತಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಡಕ್‌ ಅಲ್ಲದೆ ಬೇರೆ ಯಾರೂ ಅಲ್ಲ. ಅವರು ತಮ್ಮ ದೊಡ್ಡದಾದ, ನಾಟಕೀಯವಾದ ಅಸಂಬದ್ಧವಲ್ಲದ ಶೈಲಿಯಲ್ಲಿ ತಮ್ಮ ಸ್ನೇಹಿತ ನರೇಂದ್ರ ಮೋದಿಯವರು ಭಾರತದ ಪಿತ ಎಂಬ ಸತ್ಯವನ್ನು ಬಹಿರಂಗಪಡಿಸಿದರು. ಗಾಂಧಿ ಒಬ್ಬ ಸೋಗುಗಾರ ಎಂಬುದಾಗಿ ಬಯಲಾದರು.

ಯಾರು ಏನು ಅಲ್ಲ ಎಂಬುದನ್ನು ಅರಿಯುವ ಅಮೆರಿಕದ ಅಧ್ಯಕ್ಷರ ಸಾಮರ್ಥ್ಯವನ್ನು ಯಾರೂ ಕಡೆಗಣನೆ ಮಾಡುವುದಕ್ಕೆ ಬಿಡುವುದು ಬೇಡ. ವಂಶಾವಳಿಯೇ ಎಲ್ಲವನ್ನೂ ಹೇಳುತ್ತದೆ. ಮೂಲ ಡಿಡಿ ಸ್ಫೂರ್ತಿಯನ್ನು ಪಡೆದದ್ದು ಆಸ್ಪ್ರೇಲಿಯಾದ ಕ್ರಿಕೆಟ್‌ ದಿಗ್ಗಜ ಡೊನಾಲ್ಡ್‌ ಬ್ರಾಡ್ಮನ್‌ ಅವರಿಂದ. 1932ರ ಅಮೆರಿಕದ ಪ್ರವಾಸದಲ್ಲಿ ಬ್ರಾಡ್ಮನ್‌ ಅವರು ನ್ಯೂಯಾರ್ಕ್ನ ವೆಸ್ಟ್‌ ಇಂಡೀಸ್‌ನವರಿಂದ ಶೂನ್ಯಕ್ಕೆ ಔಟಾಗಿದ್ದರು.

ಇದು ವಾಲ್ಟ್‌ ಡಿಸ್ನಿ ಸ್ಟುಡಿಯೋಗೆ ಅದು ಪರಿಚಯಿಸಲಿದ್ದ ಹೊಸ ಪಾತ್ರವೊಂದಕ್ಕೆ ಹೆಸರನ್ನು ನೀಡುವುದಕ್ಕೆ ಸ್ಫೂರ್ತಿ ನೀಡಿತು. ಅವರ ಉತ್ತಮ ಹುಡುಗನ ಪಾತ್ರವಾಗಿದ್ದ ಮಿಕ್ಕಿ ಮೌಸ್‌ ಸ್ವಲ್ಪ ಸುಸ್ತಾದಂತೆ ಇತ್ತು. ಅದಕ್ಕಾಗಿ ತಮ್ಮ ಹೊಸ ಡಕ್‌ (ಬಾತುಕೋಳಿ) ಪಾತ್ರವನ್ನು ಮುಂಗೋಪದಂಥ ಸ್ವಲ್ಪ ನಕಾರಾತ್ಮಕ ಗುಣಗಳೊಂದಿಗೆ ಹೊರಗೆ ತಂದರು. ಇಂಥ ಒಂದು ಮನಸ್ಥಿತಿಯಲ್ಲಿ ಭಾರತದ ರಾಷ್ಟ್ರಪಿತನನ್ನು ಆಧುನಿಕ ಡೊನಾಲ್ಡ್‌ ಶೋಧಮಾಡಿದರೆ?

ನಿಜವಾಗಿಯೂ, ಸನ್ನಿವೇಶಗಳು ಲೆಕ್ಕಕ್ಕೆ ಬರುವುದಿಲ್ಲ. ಮಹತ್ವದ ಸಂಗತಿಯೆಂದರೆ ಗಾಂಧೀಜಿಯ ಮುಸುಕನ್ನು ಕಳೆಯಲಾಯಿತು. ಅದರ ಕುರಿತು ಆಲೋಚನೆ ಮಾಡಿ, ಭಾರತದ ಪಿತೃತ್ವದ ಅರ್ಹತೆಗೆ ಅವರು ಏನು ಮಾಡಿದ್ದಾರೆ? ಅವರು ಸಾಕಷ್ಟುಅಸಂಬದ್ಧತೆಯನ್ನು ಹರಡಿದರು. ಅದನ್ನೇ ಅವರು ಮಾಡಿದ್ದು. ಎಲ್ಲ ಧರ್ಮಗಳೂ ಒಂದೇ ಸತ್ಯವನ್ನು ಹೇಳುತ್ತವೆ ಎಂದು ಅವರು ಹೇಳಿದರು. ಎಂಥ ಅಸಂಬದ್ಧ! ಪ್ರೀತಿಯ ಶಕ್ತಿಯು ಅಧಿಕಾರದ ಪ್ರೀತಿಯನ್ನು ದಾಟಿ ಹೋಗಬೇಕು ಎಂದು ಅವರು ಹೇಳಿದರು. ಎಂಥ ಶುದ್ಧ ಅವಿವೇಕ! ಪ್ರತಿಯೊಬ್ಬರ ಅಗತ್ಯವನ್ನು ಪೂರೈಸುವುದಕ್ಕೆ ಈ ಭೂಮಿಯು ಸಮರ್ಥವಾಗಿದೆ, ಆದರೆ ಪ್ರತಿಯೊಬ್ಬರ ದುರಾಸೆಯನ್ನಲ್ಲ ಎಂದು ಅವರು ಹೇಳಿದರು. ಅಸಂಬದ್ಧ ಪ್ರಲಾಪ, ಅರ್ಥವಿಲ್ಲದ ಮಾತು!

ಇಂದಷ್ಟೇ ಅಲ್ಲ, ಅನನುದಿನವೂ ಇವರ ನೆನೆಯೋಣ!

ಅವರ ಅರೆನಗ್ನ ಫಕೀರನ ವೇಷವು ಅದೆಷ್ಟೋ ಜನರನ್ನು ತುಂಬ ದೀರ್ಘ ಕಾಲದವರೆಗೆ ದಿಗ್ಭ್ರಮೆಗೊಳಿಸಿದ್ದು ಒಂದು ಅದ್ಭುತ. ಐನ್‌ಸ್ಟೀನ್‌ ಮತ್ತು ರೊಮೇನ್‌ ರೋಲ್ಯಾಂಡ್‌, ನೆಲ್ಸನ್‌ ಮಂಡೇಲಾ ಹಾಗೂ ಮಾರ್ಟಿನ್‌ ಲೂಥರ್‌ ಕಿಂಗ್‌ ಇವರೆಲ್ಲ ಅವರ ತಂತ್ರಗಳಿಗೆ ಬಲಿಬಿದ್ದ ತೀಕ್ಷ$್ಣಮತಿಗಳು. ಜಗತ್ತು ಅವರ ಜನ್ಮದಿನವನ್ನು ಅಂತಾರಾಷ್ಟ್ರೀಯ ಅಹಿಂಸಾ ದಿನವನ್ನಾಗಿ ಆಚರಿಸುವ ಮೂಲಕ ಅವರನ್ನು ಗೌರವಿಸಲು ಪ್ರಾರಂಭಿಸಿದೆ.

ನಮ್ಮ ಸರ್ಕಾರವು ವಿವೇಕಿಯಾಗಿ ಬಯಲುಶೌಚ ಮುಕ್ತ ದಿನವನ್ನಾಗಿ ಆಚರಿಸಿತು. ಪ್ರಧಾನಮಂತ್ರಿಯವರು ನಿಜಕ್ಕೂ ದೇಶವು ಬಯಲುಶೌಚ ಮುಕ್ತ ಎಂದು ಘೋಷಿಸಿದರು. ಇದರ ಪುರಾವೆಗಾಗಿ ಅವರು ಒಂದು ನಕ್ಷೆಯನ್ನು ಬಿಡುಗಡೆಗೊಳಿಸಿದರು.

ಅದೊಂದು ಪ್ರತಿಭಾಪೂರ್ಣವಾದ ವಿಚಾರ. ಒಂದು ನಕ್ಷೆ. ಅಂತಿಮವಾದ ವಾಸ್ತವತೆಯನ್ನು ಯಾರು ತಾನೆ ಅಲ್ಲಗಳೆಯಬಲ್ಲರು? ಭಾರತದಲ್ಲಿ 18 ಲಕ್ಷ ಜನರು ವಸತಿಹೀನರಾಗಿದ್ದಾರೆ. ಅದರಲ್ಲಿ ಅರ್ಧದಷ್ಟುಜನರು ನಗರ ಪ್ರದೇಶದಲ್ಲಿಯೇ ಇದ್ದಾರೆ. ‘ವಸತಿಹೀನ’ ಪದದ ಬಗ್ಗೆ ಆಲೋಚನೆ ಮಾಡಿ. ಇದರ್ಥ ಅಡುಗೆ ಮನೆ ಇಲ್ಲ, ಮಲಗುವ ಸ್ಥಳ ಇಲ್ಲ, ಶೌಚಾಲಯ ಇಲ್ಲ. ನಿಸರ್ಗದ ಕರೆ ಬಂದಾಗ ಅವರು ಎಲ್ಲಿಗೆ ಹೋಗಬೇಕು? ಎಲ್ಲ ಮನೆಗಳಿಗೂ ಶೌಚಾಲಯವನ್ನು ಒದಗಿಸುವ ಸ್ವಚ್ಛ ಭಾರತ ಅಭಿಯಾನವನ್ನು ಪ್ರಧಾನಮಂತ್ರಿ ಬೆಟ್ಟುಮಾಡಿ ತೋರಿಸಿದ್ದಾರೆ. ಆದರೆ ನಾವು ಮನೆಯೇ ಇಲ್ಲದ ಜನರ ಬಗ್ಗೆ ಮಾತನಾಡುತ್ತಿದ್ದೇವೆ. ಅವರು ಎಲ್ಲಿಗೆ ಹೋಗಬೇಕು?

ವಸತಿಹೀನ ಜನರ ತಲೆಮಾರುಗಳು ಎಲ್ಲಿಗೆ ಹೋಗುತ್ತಿದ್ದವೋ ಅಲ್ಲಿಗೆ ಅವರು ಹೋಗುತ್ತಾರೆ- ಪೊದೆಗಳ ಹಿಂದೆ, ಮರಗಳ ಕೆಳಗೆ, ರಸ್ತೆಯ ಬದಿಗಳಲ್ಲಿ, ರೇಲ್ವೆ ಹಳಿಗಳಲ್ಲಿ. ಈ ದಿನಗಳಲ್ಲಿ ಅವರು ಅಲ್ಲಿಗೆ ಹೋದರೆ ಬಹುಮತವಿರುವ ಸರ್ಕಾರದ ಕಟ್ಟುನಿಟ್ಟನ್ನು ಪಾಲನೆ ಮಾಡದ ಅಪಾಯವನ್ನು ಮೈಮೇಲೆ ಎಳೆದುಕೊಳ್ಳಬಹುದು. ಕೆಟ್ಟದ್ದೆಂದರೆ, ಅವರಲ್ಲಿ ಬಹುತೇಕ ಜನರು ಬಡವರು ಮತ್ತು ನಿರಕ್ಷರಿಗಳಾಗಿರುತ್ತಾರೆ. ಅವರಿಗೆ ತಾವು ಅಪಾಯ ತಂದುಕೊಳ್ಳುತ್ತಿದ್ದೇವೆ ಎಂಬ ಅರಿವು ಕೂಡ ಇರುವುದಿಲ್ಲ.

ಮಧ್ಯಪ್ರದೇಶದ ಶಿವಪುರಿಯ ಕೊಳಗೇರಿಯ ಇಬ್ಬರು ಪುಟ್ಟಬಾಲಕರ ಹಾಗೆ, ಅವರು ಬಯಲಲ್ಲಿ ಶೌಚಕ್ಕೆ ಕುಳಿತಾಗಲೇ ಸ್ಥಳೀಯರಿಗೆ ಸಿಕ್ಕಿಬಿದ್ದರು ಮತ್ತು ಬಡಿದು ಸಾಯಿಸಲಾಯಿತು. ಇದು ನಡೆದದ್ದು ನಮ್ಮ ಪ್ರಧಾನಮಂತ್ರಿಯು ಶೌಚಾಲಯವಿಲ್ಲದ ಮನೆಗಳಿಗೆ ಶೌಚಾಲಯವನ್ನು ಒದಗಿಸಿದ್ದಕ್ಕಾಗಿ ನ್ಯೂಯಾರ್ಕಿನಲ್ಲಿ ‘ಬಿಲ್‌ ಗೇಟ್ಸ್‌ ಗೋಲ್‌ಕೀಪರ್‌ ಪ್ರಶಸ್ತಿ’ ಸ್ವೀಕರಿಸಿದ ದಿನವೇ. ಅತ್ಯದ್ಭುತವಾದ ಗೋಲ್‌ಕೀಪಿಂಗ್‌.

ವ್ಯಂಗ್ಯವೇ ಜಗತ್ತನ್ನು ಆಳುವುದು. ಪ್ರಗತಿಯ ಹೆಸರಿನಲ್ಲಿ ನಮ್ಮನ್ನು ಆಳುವವರು ಅತಿರೇಕವನ್ನು ಮಾಡುತ್ತಾರೆ ಮತ್ತು ಅವರ ಉದ್ದೇಶ ಸಾಧನೆಗಾಗಿ ರಾಷ್ಟ್ರೀಯವಾದದ ಹುಚ್ಚು ಕೆರಳಿಸುತ್ತಾರೆ. ದೇಶಭಕ್ತರು ಜವಾಹರಲಾಲ್‌ ನೆಹರು ಅವರನ್ನು ಭಾರತ ವಿರೋಧಿ ಎಂದು ಖಂಡಿಸುತ್ತಾರೆ. ಗಾಂಧಿ ಅವರ ಹಿಟ್‌ಲಿಸ್ಟ್‌ನಲ್ಲಿದ್ದಾರೆ. ಆದರೆ ಗಾಂಧಿ ಹೊಂದಿರುವ ಸಾರ್ವಜನಿಕರ ಒಲವು ಅವರನ್ನು ಎಚ್ಚರಿಕೆಯಿಂದಿರುವಂತೆ ಮಾಡಿದೆ. ಅವರ ತಂತ್ರವು ಗಾಂಧಿ ಪರವಾಗಿ ಇರುವಂತೆ ಕಾಣುತ್ತದೆ, ಆದರೆ ಅವರ ಕನ್ನಡಕದ ಫ್ರೇಮ್‌ಅನ್ನು ಲೋಗೋ ಮಾಡಿಕೊಂಡು ಸ್ವಚ್ಛ ಭಾರತದ ಮೂಲೆಗೆ ಅವರನ್ನು ಸೀಮಿತಮಾಡಿದ್ದಾರೆ. ಒಂದು ಮೂಲೆಯಿಂದ ಅವರನ್ನು ವಿಸ್ಮೃತಿಗೆ ತಳ್ಳುವುದು ಸುಲಭವಾಗಿಬಿಡುವುದು.

ಕೆಲವು ದೇಶಭಕ್ತರು ಕಾಯುವ ತಾಳ್ಮೆ ಇಲ್ಲದವರಾಗಿದ್ದು, ಈಗಾಗಲೇ ಅವರನ್ನು ಕೆಳಕ್ಕೆ ತಳ್ಳಿದ್ದಾರೆ. ಹರ್ಯಾಣದ ಸಚಿವ ಅನಿಲ್‌ ವಿಜ್‌ ಕ್ಯಾಲೆಂಡರು ಮತ್ತು ಡೈರಿಗಳಲ್ಲಿ ಗಾಂಧೀಜಿಯ ಭಾವಚಿತ್ರ ತೆಗೆದು ಮೋದಿಯವರ ಭಾವಚಿತ್ರ ಹಾಕಿಸಿದ್ದಾರೆ. ಆಮೇಲೆ ಅವರು ಹೇಳಿದ್ದು, ಗಾಂಧೀಜಿಯ ಚಿತ್ರ ನೋಟುಗಳಲ್ಲಿ ಇದೆ.

ಇದರಿಂದ ರುಪಾಯಿಯ ಅಪಮೌಲ್ಯವಾಗಿದೆ ಎಂದು. ‘ಮೋದಿ ಅತ್ಯುತ್ತಮ ಬ್ರಾಂಡ್‌’ ಎಂದು ಅವರು ಹೇಳಿದರು. ನಮ್ಮ ಪ್ರಧಾನಮಂತ್ರಿಯವರು ಭವ್ಯತೆಯ ಪ್ರದರ್ಶನವನ್ನು ಹೂಸ್ಟನ್‌ನ ಮಹಾ ಸಮ್ಮೇಳನದಲ್ಲಾದಂತೆ ಆನಂದಿಸುತ್ತಾರೆ. ಅಮಿತ್‌ ಶಾ ಅವರು ಕೇರಳದ ಓಣಂ ಅನ್ನು ಬ್ರಾಹ್ಮಣ ಪದ್ಧತಿಯ ವಾಮನ ಜಯಂತಿಯನ್ನಾಗಿ ಹೇಗೆ ಬದಲಿಸಿದರು ಎಂಬುದನ್ನು ನೆನಪಿಸಿಕೊಳ್ಳುವಿರಾ?

ವಿವೇಕಿಯಾಗಿ, ಬದುಕುಳಿಯಲು ವಿಜಯರಥವನ್ನು ಬೇಗನೆ ಹಿಡಿಯುವುದಕ್ಕೆ ನನ್ನನ್ನು ಬಿಡಿ. ರಾಷ್ಟ್ರಪಿತನ ಜೊತೆಗಿದ್ದರೆ ಕೆಳಗೇ ಇರಬೇಕು. ಭಾರತದ ತಂದೆಯ ಜೊತೆಗಿದ್ದರೆ ಮೇಲಕ್ಕೆ ಏರಬಹುದು.

- ಟಿಜೆಎಸ್ ಜಾರ್ಜ್ 

 

Follow Us:
Download App:
  • android
  • ios