ಹೊಸ ಮುಖಗಳಿಗೆ ಮಣೆ ಹಾಕಲು ಅಮಿತ್ ಶಾ ಸಿದ್ಧರಾಗಿದ್ದು, ಸುಮಾರು 70 ರಿಂದ 80 ಜನ ಹೊಸಬರಿಗೆ ಟಿಕೆಟ್ ನೀಡಲು ಚಿಂತನೆ ನಡೆಸಿದ್ದಾರೆ.

ನವದೆಹಲಿ : ಹೊಸ ಮುಖಗಳಿಗೆ ಮಣೆ ಹಾಕಲು ಅಮಿತ್ ಶಾ ಸಿದ್ಧರಾಗಿದ್ದು, ಸುಮಾರು 70 ರಿಂದ 80 ಜನ ಹೊಸಬರಿಗೆ ಟಿಕೆಟ್ ನೀಡಲು ಚಿಂತನೆ ನಡೆಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

 ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಈ ನಿಟ್ಟಿನಲ್ಲಿ ರಣತಂತ್ರ ರೂಪಿಸಿದ್ದಾರೆ. 224 ಕ್ಷೇತ್ರಗಳ ಪೈಕಿ 80 ಕ್ಷೇತ್ರಗಳಲ್ಲಿ ಹೊಸಬರಿಗೆ ಟಿಕೆಟ್ ಸಿಗುತ್ತಿದೆ. ಮಿಷನ್ 150ಕ್ಕಾಗಿ ಹೊಸ ಮುಖಗಳನ್ನು ಗುರುತಿಸಿದ್ದಾರೆ.

ಇನ್ನು ಏಪ್ರಿಲ್ 8ರವರೆಗೆ ಬಿಜೆಪಿ ಸಭೆ ನಡೆಸುತ್ತಿದೆ. ಏಪ್ರಿಲ್ 7ರಂದು ರಾಜ್ಯ ಬಿಜೆಪಿ ಚುನಾವಣಾ ಸಮಿತಿ ಸಭೆ ನಡೆಸಲಿದೆ. ಏಪ್ರಿಲ್ 7ನೇ ತಾರೀಕಿನವರೆಗೂ ಕೂಡ ಬಿಜೆಪಿ ಮುಖಂಡರು ಸಾಲು ಸಾಲು ಸಭೆ ನಡೆಸಲಿದ್ದಾರೆ. ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲೇ ಸಭೆಗಳು ನಡೆಯಲಿದೆ.